ವಿವಾಹಿತನಿಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಅಪ್ಪ ಅಮ್ಮನಿಗೂ ತಿಳಿಸದೇ ರಹಸ್ಯವಾಗಿ ಮದ್ವೆಯಾಗಿದ್ದ ನಟಿ

First Published | Apr 5, 2024, 4:29 PM IST

ಕೇವಲ 19 ವರ್ಷಕ್ಕೆಲ್ಲಾ ಇಹಲೋಕ ತ್ಯಜಿಸಿದ ಬಾಲಿವುಡ್ ನಟಿ ದಿವ್ಯ ಭಾರತಿ, ನಿರ್ಮಾಪಕ ವಿವಾಹಿತ  ಸಾಜಿದ್ ನಾಡಿದಾವಾಲಾನನ್ನು ಮದ್ವೆಯಾಗುವುದಕ್ಕಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬ ವಿಚಾರ ನಿಮಗೆ ಗೊತ್ತಾ? ದಿವ್ಯ ಹಾಗೂ ಸಾಜಿದ್ ಸಂಬಂಧದ ಬಗ್ಗೆ ನಿಮಗೆ ತಿಳಿಯದ ಕೆಲ ಡಿಟೇಲ್ ಇಲ್ಲಿದೆ ನೋಡಿ. 

ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಒಂದು ಕಾಲದಲ್ಲಿ ಲಕ್ಷಾಂತರ ಜನರ ಹೃದಯವನ್ನು ಆಳಿದಂತಹ ಹೆಸರು ದಿವ್ಯ ಭಾರತಿ. ತಮ್ಮ ಅಭಿನಯ ಹಾಗೂ ಸೌಂದರ್ಯದಿಂದ ವೀಕ್ಷಕರ ಹೃದಯದಲ್ಲಿ ಶಾಶ್ವತವಾಗಿ ಮನೆ ಮಾಡಿದ ಆಕೆಯ ದಿಢೀರ್ ಸಾವು ಇಂದಿಗೂ ಚಿತ್ರರಂಗವನ್ನು ಕಾಡುತ್ತಲೇ ಇದೆ. 

ಆಕೆಯ ಆಕರ್ಷಕ ನಗು ಪರದೆಯ ಮೇಲಿನ ಆಕೆಯ ಅಭಿನಯ ಎಲ್ಲವನ್ನೂ ಸೇರಿಸಿ ಆಕೆಯನ್ನು ಹಿರಿಯ ನಟಿ ಶ್ರೀದೇವಿಗೆ ಹೋಲಿಸಲಾಗಿತ್ತು. ಆದರೆ ಆ ಇಬ್ಬರೂ ನಟಿಯರು ಇಂದು ನಮ್ಮೊಂದಿಗಿಲ್ಲ. ದಿವ್ಯ ಭಾರತಿ ಅವರು ಕೂಡ ಶ್ರೀದೇವಿಯ ದೊಡ್ಡ ಅಭಿಮಾನಿಯಾಗಿದ್ದರು.

Tap to resize

ಸಿನಿಮಾ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದ ದಿವ್ಯ ಭಾರತಿ ಅವರು ಕೇವಲ 14 ವರ್ಷದವರಿದ್ದಾಗಲೇ ಯಾವಾಗಲೂ ಸಿನಿಮಾದಲೇ  ನಟಿಸಬೇಕು ಎಂದು ಕನಸು ಕಾಣುತ್ತಿದ್ದ ಬಾಲೆ ಏಕೆಂದರೆ ಶಾಲೆಯಲ್ಲಿ ಓದುವುದಕ್ಕೆ ಆಕೆಗೆ ತುಸುವೂ ಇಷ್ಟವಿರಲಿಲ್ಲ,  

ಆಕೆಯ ಆಸೆಯಂತೆ ಈ ಚೆಲುವೆ ಸಿನಿಮಾ ನಿರ್ಮಾಪಕ ನಂದು ತೊಲನಿ ಅವರ ಕಣ್ಣಿಗೆ ಬಿದ್ದರು. ಆದರೆ ಈ ಸಂಪರ್ಕ ಕೆಲಸ ಮಾಡಲಿಲ್ಲ, ನಂತರ 16ನೇ ವರ್ಷ ತುಂಬುತ್ತಿದ್ದಂತೆ  ದಿವ್ಯ 1990ರಲ್ಲಿ ತೆಲುಗು ಸಿನಿಮಾ 'ಬೊಬ್ಬಿಲಿ ರಾಜ' ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. 

 ಆದರೆ ಆಕೆಯ ಬಾಲಿವುಡ್ ಮೊದಲ ಸಿನಿಮಾ ವಿಶ್ವಾತ್ಮ ಆಕೆಯನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತ್ತು. ಕೇವಲ 3 ವರ್ಷದಲ್ಲಿ  ದಿವ್ಯ ಸುಮಾರು 21 ಸಿನಿಮಾಗಳನ್ನು ಮಾಡಿದ್ದರು. ಜೊತೆಗೆ ಸಾಲು ಸಾಲು ಸಿನಿಮಾ ಕೈಯಲ್ಲಿತ್ತು.

ಆದರೆ ಅದೃಷ್ಟವಶಾತ್ 1993ರಲ್ಲಿ ಆಕೆ ಆಘಾತಕಾರಿ ಘಟನೆಯೊಂದರಲ್ಲಿ ಇಹಲೋಕ ತ್ಯಜಿಸಿದರು. ಆಕೆಯ ಸಾವು ಗ್ಲಾಮರ್ ಲೋಕಕ್ಕೆ ಸಹಿಸಿಕೊಳ್ಳಲಾಗದ ಹೊಡೆತವಾಗಿತ್ತು.  ಆಕೆಯ ಕುಟುಂಬ ಸ್ನೇಹಿತರು ಮಾತ್ರವಲ್ಲದೇ ಆಕೆಯ ಪತಿ ಸಿನಿಮಾ ನಿರ್ಮಾಪಕ ಸಾಜಿದ್ ನಾಡಿದಾವಾಲಾ ಅಂತೂ ಆಕೆಯ ದಿಢೀರ್ ಸಾವಿನಿಂದ ಸಂಪೂರ್ಣ ಕುಸಿದು ಹೋಗಿದ್ದರು.

ಆದರೆ ಈ ಸಾಜಿದ್ ನಾಡಿದಾವಾಲಾನನ್ನು ಮದ್ವೆಯಾಗುವುದಕ್ಕಾಗಿ ದಿವ್ಯ ತನ್ನೆಲ್ಲಾ ಧರ್ಮದ ಅಡ್ಡತಡೆಗಳನ್ನು ಮುರಿದು ಅಪ್ಪ ಅಮ್ಮನಿಗೂ ಹೇಳದೇ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬ ವಿಚಾರ ನಿಮಗೆ ಗೊತ್ತಾ? ದಿವ್ಯ ಹಾಗೂ ಸಾಜಿದ್ ಸಂಬಂಧದ ಬಗ್ಗೆ ನಿಮಗೆ ತಿಳಿಯದ ಕೆಲ ಡಿಟೇಲ್ ಇಲ್ಲಿದೆ ನೋಡಿ. 

ಶೋಲಾ ಔರ್ ಶಬ್ನಮ್ ಎಂಬ ಸಿನಿಮಾದ ಸೆಟ್‌ನಲ್ಲಿ ದಿವ್ಯ ಭಾರತಿ ಮೊದಲ ಬಾರಿ ಸಾಜಿದ್‌ನ ಭೇಟಿಯಾಗ್ತಾರೆ.  ತನ್ನ ಸ್ನೇಹಿತ ಗೋವಿಂದನ ಭೇಟಿಯಾಗುವ ನೆಪದಲ್ಲಿ ಸೆಟ್‌ಗೆ ಬರುತ್ತಿದ್ದ ದಿವ್ಯ, ಅಲ್ಲಿ ಸಾಜಿದ್‌ನ ಭೇಟಿಯಾಗುತ್ತಿದ್ದರು.  ಮೊದಲಿಗೆ ಸ್ನೇಹಿತರಂತಿದ್ದ ಈ ಜೋಡಿಗೆ ತಮ್ಮ ನಡುವೆ ಇರುವುದು ಪ್ರೇಮ ಎಂಬುದು ಅರಿವಾಗಿದ್ದು, ಕೆಲ ದಿನಗಳಲ್ಲೇ ಮದುವೆಯಾಗುವುದಕ್ಕೂ ಮುಂದಾಗುತ್ತಾರೆ. ಆದರೆ ಈಗಾಗಲೇ ವಿವಾಹಿತನಾಗಿದ್ದ ಬೇರೆ ಧರ್ಮದ ಸಾಜಿದ್ ಜೊತೆ ಮಗಳ ಮದ್ವೆ ಮಾಡುವುದಕ್ಕೆ ಪೋಷಕರಿಗೆ ಸ್ವಲ್ಪವೂ ಇಷ್ಟವಿರುವುದಿಲ್ಲ,

ಆದರೆ ಇತ್ತ ಸಾಜಿದ್ ಪ್ರೀತಿಯ ಬಲೆಗೆ ಬಿದ್ದಿದ್ದ ದಿವ್ಯ ಭಾರತಿ ಆತನನ್ನು ಮದ್ವೆಯಾಗುವುದಕ್ಕೆ ಏನು ಬೇಕಾದರೂ ಮಾಡಲು ಸಿದ್ಧರಾಗಿ ನಿಂತಿದ್ದರು.  ಕೇವಲ 10 ತಿಂಗಳ ಡೇಟಿಂಗ್ ಬಳಿಕ ಆತನನ್ನೇ ಮದ್ವೆಯಾಗಲು ಧೃಢ ನಿರ್ಧಾರ ಮಾಡಿದ ದಿವ್ಯ ಭಾರತಿ ಇದಕ್ಕಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವೂ ಆಗಿದ್ದರು. ಇಷ್ಟೇ ಅಲ್ಲ ತನ್ನ ಹೆಸರನ್ನು ಸಾನಾ ಎಂದು ಬದಲಾಯಿಸಿಕೊಂಡಿದ್ದರು. 

18 ತುಂಬುವುದಕ್ಕೆ ಕಾಯುತ್ತಿದ್ದ ದಿವ್ಯ  1992ರ ಮೇ 10 ರಂದು  ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಾಜಿದ್‌ನ ಮುಂಬೈ ನಿವಾಸದಲ್ಲಿ ಖಾಜಿಯೊಬ್ಬರ ಸಮ್ಮುಖದಲ್ಲಿ ಸಾಜಿದ್ ಜೊತೆ ನಿಖಾ ಆದರು. ಈ ಮದ್ವೆಯನ್ನು ಬಹಳ ರಹಸ್ಯವಾಗಿರಿಸಲಾಗಿತ್ತು. ಆ ಮದ್ವೆಯಲ್ಲಿ ಆಕೆಯ ಕಡೆಯವರು ಎಂದು ಇದ್ದಿದ್ದು ಕೇವಲ ಆಕೆಯ ಗೆಳತಿ ಹೇರ್ ಡ್ರೆಸರ್ ಆಗಿದ್ದ ಸಂಧ್ಯಾ ಎಂಬಾಕೆ ಮಾತ್ರ.

ಪೋಷಕರಿಂದಲೂ ವಿಷಯ ಮುಚ್ಚಿಟ್ಟಿದ್ದ ದಿವ್ಯ:  ಮದುವೆಯ ನಂತರ ತನ್ನ ತಾಯಿ ಮೀತಾ ಭಾರ್ತಿ ಅವರಿಗೆ ಕರೆ ಮಾಡಿದ ದಿವ್ಯ ಭಾರತಿ, ತನ್ನ ಮದುವೆಗೆ ಸಾಕ್ಷಿಯಾಗಿರುವೆ ಎಂದು ಸಹಿ ಹಾಕುವಂತೆಯೂ ಕೇಳಿದ್ದರು.  ಆದರೆ ಅಮ್ಮ ಅದನ್ನು ತಿರಸ್ಕರಿಸಿದ್ದರು. ಅಪ್ಪ ಓಂ ಪ್ರಕಾಶ್ ಭಾರ್ತಿ ಅವರಿಗೆ ಈ ವಿಚಾರ ತಿಳಿಸುವವರೆಗೂ ತಾನು ಇದಕ್ಕೆ ಸಹಿ ಹಾಕಲು ಸಾಧ್ಯವಿಲ್ಲ ಎಂದು ದಿವ್ಯ ಭಾರತಿ ತಾಯಿ ಮೀತಾ ಭಾರ್ತಿ ಮಗಳಿಗೆ ಹೇಳಿದ್ದರು. 

ಇತ್ತ ಮತಾಂತರವಾಗಿ ಮದ್ವೆಯಾದ ನಂತರವೂ ದಿವ್ಯ ಮಾತ್ರ ತನ್ನ ಪೋಷಕರೊಂದಿಗೆ ವಾಸ ಮಾಡುತ್ತಾ ಆಗಾಗಾ ಸಾಜಿದ್ನ ಭೇಟಿಯಾಗುತ್ತಿದ್ದರು. ರಹಸ್ಯ ಮದ್ವೆಯಾಗಿದ್ದರಿಂದ ಇತ್ತ ದಿವ್ಯ ತಂದೆಗೆ ಈ ಬಗ್ಗೆ ಯಾವುದೇ ಐಡಿಯಾ ಇರಲಿಲ್ಲ. ಆದರೆ ಮದ್ವೆಯಾಗಿ ಕೆಲವು ತಿಂಗಳ ನಂತರ ದಿವ್ಯ ಮನೆಗೆ ದೀಪಾವಳಿ ಹಬ್ಬದಂದು ಭೇಟಿ ನೀಡಿದ ಸಾಜಿದ್ ತನ್ನ ಹಾಗೂ ದಿವ್ಯ ಮದ್ವೆಯ ಬಗ್ಗೆ ಘೋಷಣೆ ಮಾಡಿದ್ದರು. 

ಆದರೆ ಕೇವಲ 19 ಆಗುತ್ತಿದ್ದಂತೆ ದಿವ್ಯ 1993ರ ಏಪ್ರಿಲ್ 5 ರಂದು ಮನೆಯ 5ನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಷ್ಟರಲ್ಲಾಗಲೇ ಆಕೆ ಉಸಿರು ಚೆಲ್ಲಿದ್ದರು. ಆದರೆ ಅವರ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿ ಪ್ರಕರಣವೂ ದಾಖಲಾಗಿತ್ತು. ಆದರೆ 1998ರಲ್ಲಿ ಅದು ಆಕಸ್ಮಿಕ ಸಾವು ಎಂದು ಅಧಿಕೃತವಾಗಿ ಘೋಷಿಸಲಾಯ್ತು. 

Latest Videos

click me!