ಕೆಂಪು ಸೀರೆಯಲ್ಲಿ ಗುಲಾಬಿಯಂತೆ ಮಿಂಚಿದ ಕಮಲ್ ಪುತ್ರಿ: ಶ್ರುತಿ ಹಾಸನ್‌ ಅಂದ-ಚಂದ ನೋಡಿ ಊಫ್... ಎಂದ ನೆಟ್ಟಿಗರು

First Published | Apr 5, 2024, 9:39 AM IST

ಸ್ಟಾರ್ ಕಿಡ್ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ​ಕೆಂಪು ಬಣ್ಣದ ನೆಟ್ ಸೀರೆಯಲ್ಲಿ ಟಾಲಿವುಡ್ ಬ್ಯೂಟಿ ಸಖತ್ ಸ್ಟೈಲಿಶ್ ಅಗಿ ಕಾಣಿಸಿಕೊಂಡಿದ್ದಾರೆ.

ಶ್ರುತಿ ಹಾಸನ್ ಇತ್ತೀಚೆಗಷ್ಟೇ ವಿಡಿಯೋ ಆಲ್ಬಮ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಂಪು ಬಣ್ಣದ ಸೀರೆಯುಟ್ಟು ಫೋಟೊಶೂಟ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಈ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ನೆಟೆಡ್ ರೆಡ್ ಸೀರೆ ಹಾಗೂ ಅದಕ್ಕೆ ತಕ್ಕಂತೆ ಸಿಲ್ವರ್ ಬ್ಲೌಸ್ ತೊಟ್ಟು ಕ್ಯಾಮೆರಾಗೆ ಶ್ರುತಿ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿಯ ಲುಕ್‌ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.

Tap to resize

ಶ್ರುತಿ ರೆಡ್ ಸೀರೆಗೆ ಮ್ಯಾಚಿಂಗ್ ಕಲರ್‌ನ್ ಮ್ಯಾಚ್ ಆಗುವ ಕಿವಿಯೋಲೆ ಧರಿಸಿದ್ದಾರೆ. ಕರ್ಲಿ ಹೇರ್ಸ್ ಸಹ ಆಕರ್ಷಕವಾಗಿ ಅವರಿಗೆ ಕಾಣಿಸಿದೆ. ಜೊತೆಗೆ ಅವರ ಮೇಕಪ್ ಸಹ ಸಖತ್ ಹೈಲೈಟ್ ಆಗಿತ್ತು.
 

ಶ್ರುತಿ ಹಾಸನ್ ತನ್ನ ಸೌಂದರ್ಯಕ್ಕಿಂತ ಹೆಚ್ಚಾಗಿ ಪ್ರತಿಭೆಯಿಂದ ಗುರುತಿಸಿಕೊಂಡವರು. ನಟನೆ, ಗಾಯನ ಎರಡರಲ್ಲೂ ಸೈ ಎನಿಸಿಕೊಂಡಿರುವ ನಟಿ ಸದ್ಯ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ತೆರೆಕಂಡಿರೋ 'ಸಲಾರ್' ಸಿನಿಮಾದಲ್ಲಿ ಪಕ್ಕಾ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.

ಶ್ರುತಿ ಹಾಸನ್ 'ಸಲಾರ್ 2' ಸಿನಿಮಾಗಿಂತ ಮುನ್ನ 'ಡಕಾಯಿತ್' ರಿಲೀಸ್ ಆಗಬಹುದು. ಈ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ಅಡವಿ ಶೇಷ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲೂ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಹೆಸರು ಮಾಡಿದ್ದಾರೆ. ದೊಡ್ಡ ಸ್ಟಾರ್​ಗಳ ಜೊತೆ ಸ್ಕ್ರೀನ್ ಶೇರ್ ಮಾಡುತ್ತಾ, ಬಾಯ್​ಫ್ರೆಂಡ್ ಜೊತೆ ತನಗೆ ಇಷ್ಟ ಬಂದಂತೆ ಜೀವನ ನಡೆಸುತ್ತಿರುವ ಇವರು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ತೆಲುಗು ಸಿನಿಮಾಗಳ ಜೊತೆಗೆ 'ದಿ ಐ' ಅನ್ನುವ ಇಂಗ್ಲಿಷ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿತ್ತು. ಲಂಡನ್ ಇಂಡಿಪೆಂಡೆಟ್ ಫಿಲ್ಮ್ ಫೆಸ್ಟಿವಲ್ ಹಾಗೂ ಗ್ರೀಕ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ.

Latest Videos

click me!