ಹಸಿರು ಲೆಹೆಂಗಾದಲ್ಲಿ ಕಂಗೊಳಿಸಿದ ಹೃದಯಂ ಸುಂದರಿ: ಇಷ್ಟು ಚೆಂದದ ಫೋಟೋಸ್‌ಗೆ ಬ್ಲರ್ ಎಫೆಕ್ಟ್ ಯಾಕೆ ಎಂದ ಫ್ಯಾನ್ಸ್‌!

Published : Mar 17, 2024, 10:17 AM IST

ಮಲಯಾಳಂ , ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುವ ಭಾರತೀಯ ನಟಿ ಕಲ್ಯಾಣಿ ಪ್ರಿಯದರ್ಶನ್. ಹೃದಯಂ ಸಿನಿಮಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು. ಇದೀಗ ನಟಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಸ್ ಶೇರ್ ಮಾಡಿದ್ದಾರೆ.

PREV
16
ಹಸಿರು ಲೆಹೆಂಗಾದಲ್ಲಿ ಕಂಗೊಳಿಸಿದ ಹೃದಯಂ ಸುಂದರಿ: ಇಷ್ಟು ಚೆಂದದ ಫೋಟೋಸ್‌ಗೆ ಬ್ಲರ್ ಎಫೆಕ್ಟ್ ಯಾಕೆ ಎಂದ ಫ್ಯಾನ್ಸ್‌!

ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಹಿಟ್ ಆದ ಚಿತ್ರ ‘ಹೃದಯಂ’. ಆ ಚಿತ್ರದ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ಎಲ್ಲರ ಮನಗೆದ್ದಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಪಾತ್ರಪೋಷಣೆಗೆ ಯುವಜನರು ಫಿದಾ ಆಗಿದ್ದಾರೆ.

26

29 ವರ್ಷದ ಕಲ್ಯಾಣಿ ಪ್ರಿಯದರ್ಶನ್ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ನಟಿ ಪದಾರ್ಪಣೆ ಮಾಡಿದ್ದು ತೆಲುಗು ಚಿತ್ರರಂಗದ ಮೂಲಕ.

36

ಇದೀಗ ಹೃದಯಂ ಸುಂದರಿ ಕಲ್ಯಾಣಿ ಪ್ರಿಯದರ್ಶನ್ ಹಸಿರು ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ. ಬ್ಲರ್ ಎಫೆಕ್ಟ್ ಜೊತೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

46

ಕಲ್ಯಾಣಿ ಪ್ರಿದರ್ಶನ್ ಸಿನಿ ಹಿನ್ನೆಲೆಯಿಂದ ಬಂದವರು. ಅದು ಅವರ ಹೆಸರಿನಲ್ಲಿಯೇ ಇದೆ. ಹೌದು. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಪುತ್ರಿ ಕಲ್ಯಾಣಿ ಪ್ರಿಯದರ್ಶನ್.

56

ಆದರೆ ನಟಿ ಸ್ವತಂತ್ರವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ತಮ್ಮದೇ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಸಾಲುಸಾಲು ಹಿಟ್ ಚಿತ್ರ ಕೊಟ್ಟ ನಟಿ ಈಗ ದಕ್ಷಿಣದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

66

ತಮ್ಮ ಪಾತ್ರ ಪೋಷಣೆಗೆ ಫಿಲ್ಮ್​ಫೇರ್, SIIMA ಮೊದಲಾದ ಪ್ರಶಸ್ತಿಗಳಿಗೆ ಕಲ್ಯಾಣಿ ಪ್ರಿದರ್ಶನ್ ಪಾತ್ರರಾಗಿದ್ದಾರೆ. ಅವರು ತೆಲುಗು ಚಲನಚಿತ್ರ ಹಲೋನಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಕಲ್ಯಾಣಿ ಅಂದಿನಿಂದ ಚಿತ್ರಲಹರಿ, ಮಾನಾಡು, ಹೃದಯಂ, ತಲ್ಲುಮಾಲ) ಮತ್ತು ಬ್ರೋ ಡ್ಯಾಡಿ ಚಿತ್ರಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories