ಈ ನಟಿಯರು ತೆರೆ ಮೇಲೆ ದೊಡ್ಡ ಹೀರೋಯಿನ್ಸ್, ವರಿಸಿದ್ದು ಮಾತ್ರ ವಿವಾಹಿತರನ್ನೇ!

Published : Dec 04, 2025, 11:00 PM IST

ಚಿತ್ರರಂಗದಲ್ಲಿ ಸ್ಟಾರ್ ನಟಿಯರಾಗಿ ಮೆರೆದ ಹಲವಾರು ನಟಿಯರು ವಿಚ್ಛೇದಿತ ಪುರುಷರನ್ನು ಮದುವೆಯಾಗಿ ಸುದ್ದಿಯಲ್ಲಿದ್ದಾರೆ. ಕರೀನಾ ಕಪೂರ್ ನಿಂದ ಹಿಡಿದು, ಸಮಂತಾ ರುತ್ ಪ್ರಭುವರೆಗೂ ಹಲವಾರು ನಟಿಯರು ಈಗಾಗಲೇ ಮದುವೆಯಾಗಿರುವ ಪುರುಷರನ್ನು ಮದುವೆಯಾಗಿ ಹ್ಯಾಪಿಯಾಗಿದ್ದಾರೆ.

PREV
19
ವಿಚ್ಛೇದಿತ ಪುರುಷರೊಂದಿಗೆ ಡೇಟಿಂಗ್

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಮದುವೆ, ವಿಚ್ಛೇದನ ಮತ್ತು ಮರುಮದುವೆ ಸಾಮಾನ್ಯವಾಗಿದೆ. ವಿಚ್ಛೇದಿತ ಪುರುಷರೊಂದಿಗೆ ಸಂತೋಷದಿಂದ ಮದುವೆಯಾಗಿರುವ ಕೆಲವು ನಟಿಯರಿದ್ದಾರೆ. ಅವರು ಸಂತೋಷದಿಂದ ಜೀವನ ಮಾಡುತ್ತಿದ್ದಾರೆ.

29
ಸಮಂತಾ ಮತ್ತು ರಾಜ್ ನಿಡಿಮೋರು

ನಾಗ ಚೈತನ್ಯ ಅವರೊಂದಿಗಿನ ವಿಚ್ಚೇದಮದ ನಂತರ ಸಮಂತಾ ರುತ್ ಪ್ರಭು ಮರುಮದುವೆಯಾಗಿದ್ದಾರೆ. ಅವರು ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯ ಸಹ-ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾದರು. ರಾಜ್ ಅವರ ಮೊದಲ ಪತ್ನಿ ಶ್ಯಾಮಲಿ ಡೇ.

39
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಬಾಲಿವುಡ್‌ನ ರಾಯಲ್ ಕಪಲ್ಸ್. ಕರೀನಾರನ್ನು ಮದುವೆಯಾಗುವ ಮೊದಲು, ಸೈಫ್ ಆಲಿ ಖಾನ್ ಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ದರು. ಸೈಫ್ ಮತ್ತು ಅಮೃತಾ ತಮ್ಮ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು, ಆದರೆ 13 ವರ್ಷಗಳು ಮತ್ತು ಇಬ್ಬರು ಮಕ್ಕಳಾದ ಬಳಿಕ ಅವರು ಬೇರ್ಪಟ್ಟರು. ನಂತರ ಸೈಫ್ ಮತ್ತು ಕರೀನಾ ಅಕ್ಟೋಬರ್ 16, 2012 ರಂದು ವಿವಾಹವಾದರು.

49
ಧರ್ಮೇಂದ್ರ ಮತ್ತು ಹೇಮಾ ಮಾಲಿನಿ

ಸೂಪರ್‌ಸ್ಟಾರ್ ಧರ್ಮೇಂದ್ರ ಮೊದಲು 1954 ರಲ್ಲಿ 19 ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. ನಂತರ, ಬಾಲಿವುಡ್‌ನ "ಹಿ-ಮ್ಯಾನ್" ಬಾಲಿವುಡ್‌ನ ಡ್ರೀಮ್ ಗರ್ಲ್ ಹೇಮಾ ಮಾಲಿನಿಯನ್ನು ಪ್ರೀತಿಸುತ್ತಿದ್ದರು. ಧರ್ಮೇಂದ್ರ ಹೇಮಾ ಮಾಲಿನಿಯನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡರು ಎಂದು ಹೇಳಲಾಗುತ್ತದೆ. ಧರ್ಮೇಂದ್ರ ಮತ್ತು ಹೇಮಾ ಮಾಲಿನಿ 1979 ರಲ್ಲಿ ವಿವಾಹವಾದರು.

59
ಶಿಲ್ಪಾ ಮತ್ತು ರಾಜ್ ಕುಂದ್ರಾ

ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್ ಅವರನ್ನು ಪ್ರೀತಿಸುತ್ತಿದ್ದಾಗಲೇ,ರಾಜ್ ವಿವಾಹಿತರಾಗಿದ್ದರು ಮತ್ತು ಅವರ ಮೊದಲ ಪತ್ನಿಯೊಂದಿಗೆ ಇದ್ದರು.. ಆದರೆ, ಈ ಸಂಬಂಧವು ಕೆಲವೇ ವರ್ಷಗಳಲ್ಲಿ ಕೊನೆಗೊಂಡಿತು ಮತ್ತು ಶಿಲ್ಪಾ ಮತ್ತು ರಾಜ್ 2009 ರಲ್ಲಿ ವಿವಾಹವಾದರು ಮತ್ತು ಈಗ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

69
ರಾಣಿ ಮುಖರ್ಜಿ ಮತ್ತು ಆದಿತ್ಯ

ರಾಣಿ ಮುಖರ್ಜಿ ಯಶ್ ರಾಜ್ ಫಿಲ್ಮ್ಸ್ ಸಂಸ್ಥಾಪಕ ಯಶ್ ಚೋಪ್ರಾ ಸಿನಿಮಾದ ಲೀಡ್ ನಟಿಯಾಗಿದ್ದರು, ಹಾಗಾಗಿ ಯಶ್ ಮಗ ಆದಿತ್ಯ ಚೋಪ್ರಾ ಅವರಿಗೆ ಹತ್ತಿರವಾದರು. ಆದಿತ್ಯ ಚೋಪ್ರಾ ಈ ಹಿಂದೆ ತಮ್ಮ ಬಾಲ್ಯದ ಪ್ರಿಯತಮೆ ಪಾಯಲ್ ಖನ್ನಾ ಅವರನ್ನು ವಿವಾಹವಾಗಿದ್ದರು, ಆದರೆ ಏಳು ವರ್ಷಗಳ ದಾಂಪತ್ಯದ ನಂತರ ಆದಿತ್ಯ ಅವರಿಂದ ವಿಚ್ಛೇದನ ಪಡೆದರು. ದೀರ್ಘಕಾಲ ಡೇಟಿಂಗ್ ಮಾಡಿದ ನಂತರ, ರಾಣಿ ಮುಖರ್ಜಿ ಏಪ್ರಿಲ್ 21, 2014 ರಂದು ಆದಿತ್ಯ ಚೋಪ್ರಾ ಅವರನ್ನು ವಿವಾಹವಾದರು.

79
ಶ್ರೀದೇವಿ ಮತ್ತು ಬೋನಿ ಕಪೂರ್

ಬಾಲಿವುಡ್‌ನ ಸೂಪರ್ ಸ್ಟಾರ್ ನಟಿ ಶ್ರೀದೇವಿ, ವಿವಾಹಿತ ಬೋನಿ ಕಪೂರ್ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಮೋನಾ ಕಪೂರ್ ಮತ್ತು ಬೋನಿ ಕಪೂರ್ ಅವರ ದಾಂಪತ್ಯವನ್ನು ಹಾಳು ಮಾಡಿದ ಆರೋಪವು ಶ್ರೀದೇವಿ ಮೇಲಿತ್ತು. ಬೋನಿ ಮೋನಾ ಮತ್ತು ಅವರ ಇಬ್ಬರು ಮಕ್ಕಳಾದ ಅರ್ಜುನ್ ಮತ್ತು ಅನ್ಶುಲಾ ಕಪೂರ್ ಅವರನ್ನು ಬಿಟ್ಟು ಶ್ರೀದೇವಿಯನ್ನು ವಿವಾಹವಾದರು. ಬೋನಿ ಮತ್ತು ಶ್ರೀದೇವಿ ಜೂನ್ 2, 1996 ರಂದು ವಿವಾಹವಾದರು.

89
ಮಹೇಶ್ ಭೂಪತಿ ಮತ್ತು ಲಾರಾ ದತ್ತ

ಮಾಜಿ ಸುಂದರಿ ಲಾರಾ ದತ್ತಾ ಫೆಬ್ರವರಿ 16, 2011 ರಂದು ಟೆನಿಸ್ ದಂತಕಥೆ ಮಹೇಶ್ ಭೂಪತಿಯನ್ನು ವಿವಾಹವಾದರು. ಇದು ಮಹೇಶ್ ಅವರ ಎರಡನೇ ವಿವಾಹವಾಗಿದೆ, ಅವರು ಈ ಹಿಂದೆ ಮಾಡೆಲ್ ಶ್ವೇತಾ ಜೈಶಂಕರ್ ಅವರನ್ನು ವಿವಾಹವಾಗಿದ್ದರು. ಲಾರಾ ತನ್ನ ಮನೆಯನ್ನು ಮುರಿದಿದ್ದಾರೆ ಎಂದು ಶ್ವೇತಾ ಆರೋಪಿಸಿದ್ದರು.

99
ಜಾವೇದ್ ಅಖ್ತರ್ ಮತ್ತು ಶಬಾನಾ ಆಜ್ಮಿ

ಹನಿ ಇರಾನಿ ಮತ್ತು ಜಾವೇದ್ ಅಖ್ತರ್ ಇಬ್ಬರು ವರ್ಷಗಳ ಕಾಲ ಪ್ರೀತಿಸಿ ಮಾರ್ಚ್ 21, 1972 ರಂದು ವಿವಾಹವಾಗಿದ್ದರು. ಜೋಯಾ ಅಖ್ತರ್ ಮತ್ತು ಫರ್ಹಾನ್ ಅಖ್ತರ್ ಈ ಜೋಡಿಯ ಮಕ್ಕಳು. ಆದರೂ ಹಲವು ವರ್ಷಗಳ ಬಳಿಕ, ಶಬಾನಾ ಆಜ್ಮಿ ಮತ್ತು ಜಾವೇದ್ ನಡುವೆ ಪ್ರೀತಿಯ ಕಿಚ್ಚು ಹಚ್ಚಿತ್ತು. ಜಾವೇದ್ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಕೂಡಲೇ, ಶಬಾನಾ ಅಜ್ಮಿ ಮತ್ತು ಜಾವೇದ್ ಅಖ್ತರ್ ಸರಳ ಮುಸ್ಲಿಂ ಸಮಾರಂಭದಲ್ಲಿ ವಿವಾಹವಾದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories