ರಿಷಬ್ ಪಂತ್ ಟಾರ್ಗೆಟ್ ಮಾಡಿದ್ರಾ ಊರ್ವಶಿ ರೌಟೇಲಾ? ವಿವಾದಕ್ಕೆ ಸ್ಪಷ್ಟನೆ ನೀಡಿದ ನಟಿ!

First Published | Apr 2, 2024, 7:58 PM IST

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಲವು ಬಾರಿ ಕ್ರಿಕೆಟಿಗ ರಿಷಬ್ ಪಂತ್ ವಿಚಾರದಲ್ಲಿ ಟ್ರೋಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರ ಪರೋಕ್ಷ ವಾಗ್ದಾಳಿ, ಕಮೆಂಟ್‌ಗಳು ಭಾರಿ ವೈರಲ್ ಆಗಿತ್ತು. ಇದೀಗ ವಿಡಿಯೋ ಒಂದರಲ್ಲಿ ರೌಟೇಲಾ, ಕೆಲವರು ನನ್ನ ಎತ್ತರಕ್ಕೂ ಸರಿಸಮಾನರಾಗಿಲ್ಲ ಅನ್ನೋ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಇದೀಗ ರೌಟೇಲಾ ಸ್ಪಷ್ಟನೆ ನೀಡಿದ್ದಾರೆ.
 

ಕ್ರಿಕೆಟಿಗ ರಿಷಬ್ ಪಂತ್ ಹಾಗೂ ಬಾಲಿವುಡ್ ನಟಿ ಊರ್ವಶಿ ರೌಟೇಲಾ ನಡುವೆ ನಡೆದ ಕೋಲ್ಡ್ ವಾರ್ ಭಾರಿ ಸದ್ದು ಮಾಡಿತ್ತು. ಈ ವಿವಾದ ಸೈಲೆಂಟ್ ಆದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಟ್ರೋಲ್ ಭುಗಿಲೆದ್ದಿದೆ.
 

ಊರ್ವಶಿ ರೌಟೇಲಾ ಮತ್ತೆ ರಿಷಬ್ ಪಂತ್ ಟಾರ್ಗೆಟ್ ಮಾಡಿದ್ದಾರೆ. ವಿಡಿಯೋ ಒಂದರಲ್ಲಿ ರೌಟೇಲಾ, ಕೆಲವರು ನನ್ನ ಎತ್ತರ(ಹೈಟ್)‌ಕ್ಕೆ ಸರಿಸಮಾನಲಾಗಿಲ್ಲ ಎಂದು ಹೇಳಿದ್ದಾರೆ. ಇದು ಪಂತ್ ಉದ್ದೇಶಿಸಿ ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೋಲ್ ಆಗಿದೆ.
 

Tap to resize

ಸಾಮಾಜಿಕ ಜಾಲತಾಣದಲ್ಲಿ ಊರ್ವಶಿ ರೌಟೇಲಾ ಟ್ರೋಲ್ ಆಗುತ್ತಿದ್ದಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. ಇದು IITIIM ಶಾದಿ.ಇನ್ ಜಾಹೀರಾತು ವಿಡಿಯೋದಲ್ಲಿನ ಡೈಲಾಗ್ ಎಂದಿದ್ದಾರೆ.
 

ಜಾಹೀರಾತಿಗಾಗಿ ನೀಡಿದ ಸ್ಕ್ರಿಪ್ಟ್ ಇದು. ಇದು ಯಾರನ್ನು ಉದ್ದೇಶಿ ಹೇಳಿದ ಮಾತುಗಳಲ್ಲ. ಜಾಹೀರಾತಿನಲ್ಲಿ ನಿರ್ದೇಶಕರು ನೀಡಿದ ಸ್ಕ್ರಿಪ್ಟ‌ನಂತೆ ಡೈಲಾಗ್ ಹೇಳಲಾಗಿದೆ. ಇದಕ್ಕಿಂತ ಬೇರೆ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ.
 

ಈ ಉತ್ಪನ್ನದ ರಾಯಭಾರಿಯಾಗಿರುವ ನಾನು ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ಸ್ಕ್ರಿಪ್ಟ್ ನನ್ನ ವ್ಯಾಪ್ತಿಯಲ್ಲಿ ಇಲ್ಲ ಎಂದು ಊರ್ವಶಿ ರೌಟೇಲಾ ಸ್ಪಷ್ಟನೆ ನೀಡಿದ್ದಾರೆ.
 

ಈ ಹಿಂದೆ ರೌಟೇಲಾ ಹಾಗೂ ರಿಷಬ್ ಪಂತ್ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಜಗಳವೇ ನಡೆದಿತ್ತು. ಇಬ್ಬರು ಪರೋಕ್ಷವಾಗಿ ಟಾರ್ಗೆಟ್ ಮಾಡಿ ಪೋಸ್ಟ್ ಹಾಕಿ ಭಾರಿ ಸುದ್ದಿಯಾಗಿದ್ದರು.
 

ಲವ್ ದೋಸಾ 2.0 ಚಿತ್ರದ ಯಶಸ್ಸಿನಲ್ಲಿರುವ ಊರ್ವಶಿ ರೌಟೇಲಾ, ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ ಚಿತ್ರದ ಶೂಟಿಂಗ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
 

ಅಕ್ಷಯ್ ಕುಮಾರ್ ಜೊತೆಗೆ ವೆಲ್‌ಕಮ್ 3, ಬಾಬಿ ಡಿಯೋಲ್ ಜೊತೆಗಿನ NBK109 ಚಿತ್ರದಲ್ಲೂ ರೌಟೇಲಾ ತೊಡಗಿಸಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ರೌಟೇಲಾ ಬ್ಯೂಸಿಯಾಗಿದ್ದಾರೆ.

Latest Videos

click me!