ಟ್ರೀಟ್‌ಮೆಂಟ್‌ಗಾಗಿ ರಿಚಾ ಯುಎಸ್‌ಗೆ ಹೋದಾಗ ಅವರ ಬಗ್ಗೆ ಸಂಜಯ್ ಯಾವುದೇ ಗಮನ ಹರಿಸಲಿಲ್ಲ. ಅಷ್ಟೇ ಅಲ್ಲ, ಅನಾರೋಗ್ಯ ಪೀಡಿತ ಪತ್ನಿ ಮತ್ತು ಮಗಳು ತ್ರಿಶಾಲಾಳನ್ನು ಕರೆದುಕೊಂಡು ಹೋಗಲು ಏರ್‌ಪೋರ್ಟ್‌ಗೂ ಹೋಗಲಿಲ್ಲವಂತೆ.ಯಾಸಿರ್ ಉಸ್ಮಾನ್‌ರ 'ದಿ ಕ್ರೇಜಿ ಅನ್ಟೋಲ್ಡ್ ಸ್ಟೋರಿ ಅಫ್ ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್ ದತ್' ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
undefined
'ಸಂಜಯ್ ಮತ್ತು ನನ್ನ ನಡುವೆ ಎಲ್ಲವೂ ಚೆನ್ನಾಗಿದೆ. ಸಂಜಯ್ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನೀವು ನನಗೆ ವಿಚ್ಛೇದನ ಕೊಡುತ್ತೀರಾ ಎಂದು ನಾನು ಸಂಜಯ್ ಅವರನ್ನು ಕೇಳಿದೆ. ಇಲ್ಲ ಎಂದು ಸಂಜಯ್ ಉತ್ತರಿಸಿದರು,' ಎಂದು ರಿಚಾ ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಪುಸ್ತಕದಲ್ಲಿ ನಮೂದಿಸಲಾಗಿದೆ.
undefined
'ನಾನು ಒಂದೇ ಸಮಯದಲ್ಲಿ ಮೂರು ಸಂಬಂಧಗಳನ್ನು ನಿಭಾಯಿಸಿದ್ದೇನೆ ಮತ್ತು ಎಂದಿಗೂ ಸಿಕ್ಕಿ ಬೀಳಲಿಲ್ಲ ನೀವು ಬಹಳ ಜಾಣತನದಿಂದ ನಿರ್ವಹಿಸಬೇಕು. ಪಾರ್ಟ್‌ನರ್‌ಗೆ ಯಾರೊಂದಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ತಿಳಿದಿರಬಾರದು' ಎಂದು ಸಂದರ್ಶನವೊಂದರಲ್ಲಿ, ಸಂಜಯ್ ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡು ಹೇಳಿದ್ದರೊಮ್ಮೆ.
undefined
ಬಾಲ್ಯದ ಸ್ನೇಹಿತರಾಗಿದ್ದ ಸಂಜಯ್ ಮತ್ತು ಟೀನಾ ಶೀಘ್ರದಲ್ಲೇ ಈ ಸ್ನೇಹ ಪ್ರೀತಿಯಾಗಿ ಬದಲಾಯಿತು. ಸಂಜಯ್ ಡೆಬ್ಯು ಸಿನಿಮಾ ರಾಕಿ ಚಿತ್ರೀಕರಣದ ವೇಳೆಈ ಸಂಬಂಧವು ಬಲವಾಯಿತು, ಆದರೆ ಸಂಜಯ್ ಅವರ ಆಲ್ಕೊಹಾಲ್ ಹಾಗೂ ಡ್ರಗ್ಸ್ ಚಟಟೀನಾ ದೂರಾಗಲು ಕಾರಣವಾಯಿತು ಹಾಗೂ ರಾಜೇಶ್ ಖನ್ನಾ ಅವರೊಂದಿಗೆ ಬಾಂಧವ್ಯಕ್ಕೆ ದಾರಿಯಾಯಿತು.
undefined
ಒಂದು ಚಿತ್ರದ ಮೂಹರ್ತದ ಸಂದರ್ಭದಲ್ಲಿ ರಿಚಾ ಮತ್ತು ಸಂಜಯ್ ಭೇಟಿಯಾದರು. ಅವರ ಮೊದಲ ಭೇಟಿನಂತರ, ಸಂಜಯ್ ರಿಚಾ ಬಗ್ಗೆ ಹುಚ್ಚರಾದರು. ಅಂತಿಮವಾಗಿ, 1987 ರ ಚಲನಚಿತ್ರ 'ಆಗ್ ಹೈ ಆಗ್' ಚಿತ್ರದ ಶೂಟಿಂಗ್ ಸಮಯದಲ್ಲಿ, ರಿಚಾಗೆ ಸಂಜಯ್ ಪ್ರಪೋಸ್ ಮಾಡಿದರು. ತನ್ನ ಹೆತ್ತವರು ಮದುವೆಗೆ ಸಿದ್ಧರಿಲ್ಲ ಎಂದು ರಿಚಾಗೆ ತಿಳಿದಿತ್ತು. ರಿಚಾ ಅವರ ಪೋಷಕರನ್ನು ಭೇಟಿ ಮಾಡಲು ಸಂಜಯ್ ನ್ಯೂಯಾರ್ಕ್‌ಗೆ ಹೋಗಿದ್ದರು. 1987 ರಲ್ಲಿ, ಸಂಜಯ್- ರಿಚಾ ವಿವಾಹವಾದರು. ಒಂದು ವರ್ಷದ ನಂತರ, 1988 ರಲ್ಲಿ, ಮಗಳು ತ್ರಿಶಾಲಾ ಜನಿಸಿದರು.
undefined
ಸಂಜಯ್ ಮತ್ತು ಮಾಧುರಿ ಸಂಬಂಧ 90 ರ ದಶಕದಲ್ಲಿ ಬಾಲಿವುಡ್‌ನ ದೊಡ್ಡ ಸುದ್ದಿಯಾಗಿತ್ತು. 1991ರ ಸಾಜನ್ ಸಿನಿಮಾದ ಸಮಯದಲ್ಲಿ ಅವರಿಬ್ಬರೂ ಹತ್ತಿರವಾದರು. ಪರಸ್ಪರ ತುಂಬಾ ಪ್ರೀತಿಸುತ್ತಿದ್ದ ಇಬ್ಬರೂ ಹಸೆಮಣೆ ಏರಲೂ ಸಿದ್ಧರಾಗಿದ್ದರು.
undefined
ಆದರೆ ನಂತರ ಸಂಜಯ್ ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡರು. 1993 ರಲ್ಲಿ ಅವರನ್ನು ಬಂಧಿಸಿದಾಗ ಮಾಧುರಿ ದೂರವಾದ್ದರು. ಬ್ರೇಕಪ್ ನಂತರ, ಮಾಧುರಿ ಯುಎಸ್ ಮೂಲದ ವೈದ್ಯ ಶ್ರೀರಾಮ್ ನೆನೆಯನ್ನು ಮದುವೆಯಾದರು.
undefined
ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ಸುದೀರ್ಘ ಕಾನೂನು ಹೋರಾಟದ ನಂತರ ಸಂಜಯ್ ದತ್‌ಗೆ ಸ್ವಲ್ಪ ರಿಲೀಫ್ ಸಿಕ್ಕಾಗ,ಮಾಧುರಿ ಅವರಿಂದ ದೂರವಾದರು. ಅಂತಹ ಪರಿಸ್ಥಿತಿಯಲ್ಲಿರಿಯಾ ಪಿಳ್ಳೈ ಸಂಜಯ್ ಅವರಿಗೆ ಜೊತೆಯಾದರು.
undefined
ಇಬ್ಬರೂ 1998 ರಲ್ಲಿ ವಿವಾಹವಾದರು ಆದರೆ ಇಬ್ಬರೂ 2005 ರಲ್ಲಿ ವಿಚ್ಚೇದನ ಪಡೆದರು. ಮದುವೆಯಾದ ನಂತರ ಇಬ್ಬರೂ ಬೇರೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.
undefined
ರಿಯಾಳನ್ನು ಮದುವೆಯಾದ ನಂತರ ಸಂಜಯ್ ಅವರು ನಾಡಿಯಾ ದುರ್ರಾನಿಯೊಂದಿಗೆ ರಿಲೆಷನ್‌ಶಿಪ್ ಹೊಂದಿದ್ದರು. ರಿಯಾಗೆ ಈ ಸಂಬಂಧದ ಬಗ್ಗೆ ಸುಳಿವು ಸಿಕ್ಕಿತು. ಶೂಟಿಂಗ್ ಸಮಯದಲ್ಲಿ ನಾಡಿಯಾ ಸೆಟ್‌ಗಳಲ್ಲಿ ಕಾಣಿಸಿಕೊಂಡಾಗ ವಿಷಯ ಹದಗೆಟ್ಟಿತು. ಈ ಕಾರಣದಿಂದಾಗಿ, ರಿಯಾ ಜೊತೆ ಸಂಬಂಧವೂ ಮುರಿದುಹೋಯಿತು. ಆದರೆ ಇದರ ನಂತರ ಸಂಜಯ್-ನಾಡಿಯಾ ರಿಲೆಷನ್‌ಶಿಪ್ ಸಹ ಮುರಿದು ಬಿತ್ತು.
undefined
ಇದೇ ಸಮಯದಲ್ಲಿ, ಸಂಜಯ್ ಮಾನ್ಯತಾ ಕಡೆಗೆ ಆಕರ್ಷಿತರಾದರು.ನಾಡಿಯಾ ಜೊತೆ ಬ್ರೇಕಪ್ ಆದ ನಂತರ ಸಂಜಯ್ ಮಾನ್ಯತಾಗೆ ಹತ್ತಿರವಾದರು.
undefined
ಎರಡು ವರ್ಷಗಳ ನಂತರ ಫೆಬ್ರವರಿ 7, 2008 ರಂದು ಮಾನ್ಯತಾ ಸಂಜಯ್ ವಿವಾಹವಾದರು. ಇದರ ನಂತರ, ಅಕ್ಟೋಬರ್ 21, 2010 ರಂದು, ದಂಪತಿಗೆ ಅವಳಿ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ ಜನಿಸಿದರು.
undefined