ನಿತ್ಯವೂ ಚೀಟ್‌ ಡೇ ಮಾಡ್ತೀನಿ: ವಯಸ್ಸು 60 ಆದ್ರೂ Actor Salman Khan ಇಷ್ಟು ಫಿಟ್‌ ಆಗಿರೋದು ಹೇಗೆ?

Published : May 27, 2026, 01:41 PM IST

Actor Salman Khan News: 60 ವರ್ಷದ ನಟ ಸಲ್ಮಾನ್ ಖಾನ್ ಸದಾ ಅವರ ಫಿಟ್‌ನೆಸ್‌ನಿಂದ ಗಮನಸೆಳೆಯುತ್ತಾರೆ. ಫಿಟ್‌ನೆಸ್‌ಗೆ 20% ವರ್ಕೌಟ್‌ ಮಾಡಿದರೆ, 80% ಡಯೆಟ್‌ ಮಾಡಬೇಕಾಗುತ್ತದೆ. ಆದರೆ ಸಲ್ಮಾನ್‌ ಖಾನ್‌ ಮಾತ್ರ ನಿತ್ಯವೂ ಚೀಟ್‌ ಮಾಡುತ್ತಾರಂತೆ. 

PREV
14
ಪ್ರತಿದಿನ ಚೀಟ್‌ ಮೀಲ್‌ ಮಾಡ್ತೀನಿ!

ಸಲ್ಮಾನ್‌ ಖಾನ್‌ ಮಾತನಾಡಿ, "ನನಗೆ ಪ್ರತಿದಿನವೂ ಚೀಟ್ ಮೀಲ್‌ ಇರುತ್ತದೆ. ಜಿಮ್‌ನಲ್ಲಿ ಬೇಕಿದ್ರೆ 20 ನಿಮಿಷ ಅಥವಾ ಒಂದು ಗಂಟೆ ಕಾಲ ಹೆಚ್ಚು ವರ್ಕೌಟ್‌ ಮಾಡೋಕೆ ರೆಡಿ ಇದ್ದೀನಿ. ಆದರೆ ನಾನು ಏನು ತಿನ್ನಬೇಕೋ ಅದನ್ನೇ ತಿನ್ನುತ್ತೇನೆ. ನಾನು ಬೇಯಿಸಿದ ಆಹಾರವನ್ನು ತಿನ್ನುವುದಿಲ್ಲ" ಎಂದು ಹೇಳಿದ್ದಾರೆ.

24
ಪ್ರೋಟೀನ್‌ ತಿನ್ನುತ್ತೇನೆ!

"ನನ್ನ ದೇಹಕ್ಕೆ ಎಷ್ಟು ಪ್ರೋಟೀನ್ ಬೇಕೋ, ಅಷ್ಟನ್ನು ನಾನು ತಿನ್ನುತ್ತೇನೆ. ಆಹಾರ ಎಷ್ಟು ಟೇಸ್ಟೀಯಾಗಿರಲಿ, ನಾನು ಕೇವಲ ಒಂದು ಚಮಚದಷ್ಟು ಅನ್ನವನ್ನು ತಿನ್ನುತ್ತೇನೆ. ನಾನು ರೊಟ್ಟಿಗಳನ್ನು ಮಾತ್ರ ಮುಟ್ಟಲ್ಲ. ನಾನು ಇಷ್ಟನ್ನೇ ಪಾಲಿಸುವೆ. ಆ ಒಂದು ಚಮಚ ಅನ್ನದ ಜೊತೆಗೆ, ನನಗೆ ಎಷ್ಟು ಪ್ರೋಟೀನ್‌ ಬೇಕೋ ಅಷ್ಟು ತಿನ್ನುವೆ” ಎಂದು ಹೇಳಿದ್ದಾರೆ.

34
ಕಟ್ಟುನಿಟ್ಟಾದ ಡಯೆಟ್‌

ಇಲ್ಲಿ ನಿತ್ಯವೂ ಕಟ್ಟುನಿಟ್ಟಾದ ಡಯೆಟ್‌ ಮಾಡೋದಕ್ಕಿಂತ ಬದಲಾಗಿ, ನಿರಂತರವಾಗಿ ಡಯೆಟ್‌ ಮಾಡೋದರ ಬಗ್ಗೆ ಹೆಚ್ಚು ಗಮನ ಕೊಡಬೇಕು ಎನ್ನೋದು ಗೊತ್ತಾಗುತ್ತದೆ.

44
ವರ್ಕೌಟ್‌ ಮಾಡೋಕೆ ಕಷ್ಟ!

ಎಲ್ಲರಿಗೂ ಸಲ್ಮಾನ್‌ ಖಾನ್‌ ತರ ವರ್ಕೌಟ್‌ ಮಾಡೋಕೆ ಕಷ್ಟ ಆಗಬಹುದು, ಅಥವಾ ಡಯೆಟ್‌ ಕೂಡ ಮಾಡೋಕೆ ಆಗದೆ ಇರಬಹುದು. ಹೀಗಾಗಿ ಡಾಕ್ಟರ್‌ ಸಲಹೆಯಂತೆ ಡಯೆಟ್‌ ಮಾಡಬೇಕು, ಆದರೆ ಇದು ಒಂದು ದಿನಕ್ಕೆ ಸೀಮಿತ ಆಗಬಾರದು, ನಿತ್ಯವೂ ಇರಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories