ಮೊದಲ ದಿನ ದೀಪಿಕಾ ಪಡುಕೋಣೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಕಪ್ಪು ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಕಂಗೊಳಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಅಂದಹಾಗೆ ದೀಪಿಕಾ ಧರಿಸಿದ ಸೀರೆ ಭಾರತದ ಖ್ಯಾತ ಡಿಸೈನರ್ ಸಬ್ಯಸಾಚಿ ಡಿಸೈನ್ ಮಾಡಿರುವ ಸೀರೆಯಾಗಿತ್ತು. ಇನ್ನು ಯಾವೆಲ್ಲ ಉಡುಗೆಯಲ್ಲಿ ಮಿಂಚಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.