ಮುಂಬೈ(ಆ. 09) ಬಾಲಿವುಡ್ ನಟಿಯೊಬ್ಬರು ಕೊರೋನಾ ಸಂಖಿಗೆ ಗುರಿಯಾಗಿದ್ದಾರೆ. ನಟಿ ನತಾಶಾ ಸೂರಿಗೆ ಮಹಮಾರಿ ಕೊರೋನಾ ಅಂಟಿಕೊಂಡಿದೆ. ಕೊರೋನಾದ ಕತೆಯನ್ನು ಬಟಿ ಬಿಚ್ಚಿಟ್ಟಿದ್ದಾರೆ. ಆಗಸ್ಟ್ ಮೊದಲ ವಾರದಿಂದಲೂ ನಾನು ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ನಟಿ ತಿಳಿಸಿದ್ದಾರೆ. ಆಗಸ್ಟ್ 1ರಂದು ನಾನು ಪುಣೆಗೆ ತೆರಳಿದ್ದೆ, ಈ ವೇಳೆ ಕೊರೋನಾ ನನ್ನ ದೇಹ ಸೇರಿರಬಹುದು ಎಂದು ಹೇಳಿದ್ದಾರೆ. ನನ್ನಿಂದ ನನ್ನು ತಂಗಿ ರೂಪಾಲಿ ಮತ್ತು ನನ್ನ ಅಜ್ಜಿ ಸಹ ಕೊರೋನಾ ಸೋಂಕಿಗೆ ಗುರಿಯಾಗಬೇಕಿದೆ ಎಂದಿದ್ದಾರೆ. ದೈಹಿಕವಾಗಿ ದಣಿದಿದ್ದರೂ ಮಾನಸಿಕವಾಗಿ ಗಟ್ಟಿಯಾಗಿದ್ದೇನೆ. ನಿಧಾಣವಾಗಿ ಚೇತರಿಕೆ ಕಾಣುತ್ತಿದೆ ಎಂದು ನಟಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಚಿತ್ರಮಂದಿರಗಳು ಕೊರೋನಾ ಕಾರಣಕ್ಕೆ ಬಂದ್ ಇರುವುದರಿಂದ ನತಾಶಾ ಅಭಿನಯದ 'ಡೇಂಜರಸ್ ' ಚಿತ್ರ ಆನ್ ಲೈನ್ ನಲ್ಲಿ ಬಿಡುಗಡೆ ಕಾಣುತ್ತಿದೆ. 2006 ರಲ್ಲಿ ನಟಿ ಮಿಸ್ ಇಂಡಿಯಾ ವರ್ಲ್ಡ್ ಆಗಿದ್ದರು. ಮಲಯಾಳಂನ ಕಿಂಗ್ ಲೀಯರ್ ಚಿತ್ರದ ಮುಖೇನ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ಇನ್ ಸೈಡ್ ಎಡ್ಜ್ ವೆಬ್ ಸೀರಿಸ್ ನಲ್ಲಿಯೂ ಕಾಣಿಸಿಕೊಂಡಿದ್ದರು. ನುರಾರು ಬ್ಯೂಟಿ ಕಾಂಟೆಸ್ಟ್ ಗಳಲ್ಲಿ ಸ್ಪರ್ಧೆ ಮಾಡಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಡೇಂಜರಸ್ ನಲ್ಲಿ ಐದು ವರ್ಷಗಳ ನಂತರ ನಟಿ ಬಿಪಾಶಾ ಬಸು ಸಹ ಕಾಣಿಸಿಕೊಂಡಿದ್ದಾರೆ. ಕೊರೋನಾ ಕಾರಣಕ್ಕೆ ನತಾಶಾ ಡೇಂಜರಸ್ ಸಿನಿಮಾದ ಪ್ರಮೋಶನ್ ಮಿಸ್ ಮಾಡಿಕೊಂಡಿದ್ದಾರೆ. Natasha Suri to Miss 'Dangerous' Promotions After Testing Coronavirus Positive ನಟಿ ನತಾಶಾ ಸೂರಿಗೆ ಕೊರೋನಾ ಸೋಂಕು ದೃಢ