ಅಜ್ಜಿ ರೇಶ್ಮೆ ಸೀರೆ ಧರಿಸಿ ಬಾಯ್‌ಫ್ರೆಂಡ್‌ ಜತೆ ರೊಮ್ಯಾನ್ಸ್‌ ಮಾಡಿದ Aamir Khan ಪುತ್ರಿ ಇರಾ!

First Published | Feb 1, 2022, 12:23 PM IST

ಸೀರೆಯಲ್ಲಿ ಮಿಂಚಿದ ಅಮೀರ್ ಖಾನ್ ಪುತ್ರಿ, ತಬ್ಬಿಕೊಂಡು ಮುತ್ತು ಕೊಟ್ಟಿರುವ ಬಾಯ್‌ಫ್ರೆಂಡ್‌ ಫೋಟೋ ವೈರಲ್.

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ ಮ್ಯಾನ್ ಅಮೀರ್ ಖಾನ್ ಪುತ್ರಿ ಇರಾ ಖಾನ್‌ ಇತ್ತೀಚಿಗೆ ತಮ್ಮ ಬಾಯ್‌ಫ್ರೆಂಡ್‌ ಜೊತೆಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇರಾ ಬಾಯ್‌ಫ್ರೆಂಡ್ ನೂಪುರ್ ಶಿಖರೆ ತಮ್ಮ ಭಾನುವಾರ ಹೇಗಿತ್ತು ಎಂದು ಫೋಟೋ ಅಪ್ಲೋಡ್ ಮಾಡಿದ್ದಾರೆ ಅದರಲ್ಲಿ ಇರಾ ಸೀರೆ ಧರಿಸಿದ್ದಾರೆ. 

Tap to resize

'ಎಂಥ ಅದ್ಭುತ ಬಣ್ಣವಿದು. ಈ ಭಾನುವಾರ ನಾನು ಅಜ್ಜಿ ಸೀರೆ ಧರಿಸಿರುವೆ. ಇದು ಸಿಲ್ಕ್ ಸೀರೆ ಅಂತ ಮಾತ್ರ ನನಗೆ ಚೆನ್ನಾಗಿದೆ ಗೊತ್ತಿದೆ' ಎಂದು ಇರಾ ಬರೆದುಕೊಂಡಿದ್ದಾರೆ.

ಇರಾ ನೀಲಿ ಬಣ್ಣದ ಸೀರೆ ಧರಿಸಿದ್ದರೆ ನೂಪುರ್ ಕೂಡ ನೀಲಿ ಬಣ್ಣದ ಟಿ-ಶರ್ಟ್ ಧರಿಸಿದ್ದಾರೆ. ಹಿಂದಿನಿಂದ ನೂಪುರ್‌ ಗರ್ಲ್‌ಫ್ರೆಂಡ್‌ಗೆ ಮುತ್ತಿಡುತ್ತಿದ್ದಾರೆ. ಈ ಫೋಟೋಗೆ ಅತಿ ಹೆಚ್ಚು ಕಾಮೆಂಟ್ ಬಂದಿದೆ. 

 ಕಳೆದ ಎರಡು ವಾರಗಳಿಂದ ಇರಾ ಸೀರೆ ಧರಿಸುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ನೂಪುರ್‌ ಅವರ ತಾಯಿ ಪ್ರತಿಮಾ ಸೀರೆ ಧರಿಸಿದ್ದರು. 

ಭಾವಿ ಅತ್ತೆ ಸೀರೆ ಧರಿಸಿ 'ಇದು ಖಾದಿ ಕಾಟನ್‌ ಸೀರೆ ಬಾಂಬೆಯಿಂದ. ಪ್ರತಿಮಾ ಅತ್ತೆ ಅವರು ಕೊಟ್ಟಿರುವುದು ಕೊನೆಯಲ್ಲಿರುವ ಹ್ಯಾಂಡ್‌ಬ್ಯಾಗ್ ಮಿಸ್ ಮಾಡದೇ ನೋಡಿ' ಎಂದು ಬರೆದುಕೊಂಡಿದ್ದರು. 

'ನನಗೆ ಸೀರೆ ಅಂದ್ರೆ ತುಂಬಾನೇ ಇಷ್ಟ ಹೀಗಾಗಿ  ಪ್ರತಿ ಭಾನುವಾರ ಒಂದು ಸೀರೆ ಧರಿಸುವೆ. ಕೆಲವು ಗಂಟೆಗಳು ಮಾತ್ರ. ನನ್ನ ಬಳಿ ಹೆಚ್ಚಿಗೆ ಸೀರೆ ಇಲ್ಲ ಅದಿಕ್ಕೆ ನನ್ನ ಆಪ್ತರ ಬಳಿ ತೆಗೆದುಕೊಳ್ಳುವೆ' ಎಂದಿದ್ದರು

Latest Videos

click me!