ಅನನ್ಯಾ ಪಾಂಡೆ ಮತ್ತು ಅದಿತ್ಯ ರಾಯ್‌ ಕಪೂರ್‌ ನಡುವೆ ಏನು ನಡೀತಿದೆ?

Published : Oct 30, 2022, 04:02 PM IST

ಬಾಲಿವುಡ್‌ನ ಯಂಗ್‌ ಮತ್ತು ಫೇವರೇಟ್‌ ನಟಿಯರಲ್ಲಿ ಒಬ್ಬರಾದ  ಅನನ್ಯಾ ಪಾಂಡೆ (Ananya Panday) ಇಂದು, ಅಕ್ಟೋಬರ್ 30, ಅನನ್ಯಾ ತನ್ನ 24 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 'ಸ್ಟೂಡೆಂಟ್ ಆಫ್ ದಿ ಇಯರ್' 2 ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅನನ್ಯಾ ತಮ್ಮ ಹಾಟ್‌ ಲುಕ್‌ನಿಂದ ಆಗಾಗ ಸುದ್ದಿಯಲ್ಲಿರುತ್ತಾರೆ  ಬಿಕಿನಿ , ಕ್ರಾಪ್ ಟಾಪ್ಸ್ ಮತ್ತು ಶಾರ್ಟ್‌ ಡ್ರೆಸ್‌ ಆವತಾರಗಳ ಮೂಲಕ ಯುವಕರ ಹೃದಯ ಬಡಿತ ಹೆಚ್ಚಿಸುವ ಅನನ್ಯಾರ ಅವರ ವೈಯಕ್ತಿಕ ಜೀವನ, ಮುಂಬರುವ ಚಲನಚಿತ್ರಗಳು ಮತ್ತು ಹೆಚ್ಚಿನ ವಿವರಗಳು ಇಲ್ಲಿವೆ   

PREV
15
ಅನನ್ಯಾ ಪಾಂಡೆ ಮತ್ತು ಅದಿತ್ಯ ರಾಯ್‌ ಕಪೂರ್‌ ನಡುವೆ ಏನು ನಡೀತಿದೆ?

ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯ ಪಾಂಡೆ ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್ 2' ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಅವರು ನಟ ಟೈಗರ್ ಶ್ರಾಫ್ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಚೊಚ್ಚಲ ಪ್ರವೇಶ ಮಾಡಿದರು. ಇಲ್ಲಿಯವರೆಗೆ, ಅನನ್ಯಾ ಸುಮಾರು ಅರ್ಧ ಡಜನ್ ಚಿತ್ರಗಳ ಭಾಗವಾಗಿದ್ದಾರೆ.

25

ತನ್ನ ಚೊಚ್ಚಲ ಚಿತ್ರದ ನಂತರ, ಅನನ್ಯಾ ಪಾಂಡೆ ಕಾರ್ತಿಕ್ ಆರ್ಯನ್ ಜೊತೆ 'ಪತಿ ಪಟ್ನಿ ಔರ್ ವೋ' ನಲ್ಲಿ ಕಾಣಿಸಿಕೊಂಡರು, ಇದರಲ್ಲಿ ಭೂಮಿ ಪೆಡ್ನೇಕರ್ ಕೂಡ ಕಾಣಿಸಿಕೊಂಡಿದ್ದಾರೆ. ನಂತರ ಅವರು 'ಕಲಿ ಪೀಲಿ' ಮತ್ತು 'ಗೆಹ್ರಾಯನ್' ಚಿತ್ರಗಳಲ್ಲಿ ನಟಿಸಿದರು.

35

ಅನನ್ಯಾ ಪಾಂಡೆ ಕೊನೆಯ ಬಾರಿಗೆ ಪುರಿ ಜಗನ್ನಾಥ್ ಅವರ ಪ್ಯಾನ್-ಇಂಡಿಯಾ ಚಲನಚಿತ್ರ 'ಲೈಗರ್' ನಲ್ಲಿ ದಕ್ಷಿಣದ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರೊಂದಿಗೆ ಕಾಣಿಸಿಕೊಂಡಿದ್ದರೆ, ಅವರು ಮುಂದೆ 'ಖೋ ಗೇ ಹಮ್ ಕಹಾನ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಮತ್ತೊಮ್ಮೆ ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಾರೆ.

 


 

45

ಏತನ್ಮಧ್ಯೆ,  ಅನನ್ಯಾ ಪಾಂಡೆ ನಟ ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅನನ್ಯಾ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗಿನಿಂದ ಅವರ ಬಗ್ಗೆ ಊಹಾಪೋಹಗಳು ಬಲವಾಗಿ ನಡೆಯುತ್ತಿವೆ. 

55

ಮನೀಷ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಪಾಪ್‌ಗಳಿಗೆ  ಅನನ್ಯಾ ಪಾಂಡೆ ನಟ ಆದಿತ್ಯ ರಾಯ್ ಕಪೂರ್ ಒಟ್ಟಿಗೆ ಪೋಸ್ ನೀಡುವ ಮೂಲಕ ಈ ಕಪಲ್‌ ವದಂತಿಗಳ ಬೆಂಕಿಗೆ  ತುಪ್ಪ ಸುರಿದಿದ್ದಾರೆ.

Read more Photos on
click me!

Recommended Stories