ಸಿನಿಮಾ ಸೋತ ಬೆನ್ನಲ್ಲೇ ಮಾಲ್ಡೀವ್ಸ್‌ನಲ್ಲಿ ರಾಕುಲ್ ಮಸ್ತ್ ಎಂಜಾಯ್; ಫೋಟೋ ವೈರಲ್

Published : Oct 30, 2022, 12:28 PM IST

ನಟಿ ರಾಕುಲ್ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಇತ್ತೀಚಿಗಷ್ಟೆ ಥ್ಯಾಂಕ್ ಗಾಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದೆ. ಸಿನಿಮಾ ಸೋಲಿನ ಬೆನ್ನಲ್ಲೇ ರಾಕುಲ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. 

PREV
17
ಸಿನಿಮಾ ಸೋತ ಬೆನ್ನಲ್ಲೇ ಮಾಲ್ಡೀವ್ಸ್‌ನಲ್ಲಿ ರಾಕುಲ್ ಮಸ್ತ್ ಎಂಜಾಯ್; ಫೋಟೋ ವೈರಲ್

ಬಹುಭಾಷಾ ನಟಿ ರಾಕುಲ್ ಪ್ರೀತಿ ಸಿಂಗ್ ಸದ್ಯ ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾರಂಗದ ಮೂಲಕ ಖ್ಯಾತಿಗಳಿಸಿರುವ ನಟಿ ರಾಕುಲ್ ಸದ್ಯ ಬಾಲಿವುಡ್ ‌ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ರಾಕುಲ್ ಸೆಲೆಬ್ರಿಟಿಗಳ  ನೆಚ್ಚಿನ ತಾಣ ಮಾಲ್ಡೀವ್ಸ್‌ಗೆ ಹಾರಿದ್ದಾರೆ.

27

ನಟಿ ರಾಕುಲ್ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಭಾರತೀಯ ಸಿನಿಮಾ ಸೆಲೆಬ್ರಿಟಿಗಳಿಗೆ ಮಾಲ್ಡೀವ್ಸ್ ಸ್ವರ್ಗ. ಸದಾ ಮಾಲ್ಡೀವ್ಸ್ ಕಡೆ ಪಯಣ ಬೆಳೆಸುತ್ತಿರುತ್ತಾರೆ. ಇದೀಗ ನಟಿ ರಾಕುಲ್ ಕೂಡ ಹಾರಿದ್ದಾರೆ. 

37

ಅಂದಹಾಗೆ ರಾಕುಲ್ ಇತ್ತೀಚಿಗಷ್ಟೆ ಥ್ಯಾಂಕ್ ಗಾಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದೆ. ಕನ್ನಡದ ಕಾಂತಾರ ಮುಂದೆ ಥ್ಯಾಂಕ್ ಗಾಡ್ ಸೋತಿದೆ. ಸಿನಿಮಾ ಸೋಲಿನ ಬಗ್ಗೆ ಹೆಚ್ಚು ತಲೆಕೆಸಿಕೊಳ್ಳದ ರಾಕುಲ್ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. 
 

47

ಮಾಲ್ಡೀವ್ಸ್ ಕಡಲ ಕಿನಾರೆಲ್ಲಿ ಮಸ್ತ್ ಮಜಾ ಮಾಡುತ್ತಿರುವ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಾಕುಲ್ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

57

ತರಹೇವಾರಿ ಫೋಟೋಗಳನ್ನು ರಾಕುಲ್ ಮಾಲ್ಡೀವ್ಸ್ ನಿಂದ ಶೇರ್ ಮಾಡಿದ್ದಾರೆ. ರಾಕುಲ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿವೆ. 

67

ಇತ್ತೀಚಿಗಷ್ಟೆ ಅನನ್ಯಾ ಪಾಂಡೆ,  ಮೌನಿ ರಾಯ್, ಜಾನ್ವಿ ಕಪೂರ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದರು. ಇದೀಗ ರಾಕುಲ್ ಸರದಿ. ಅಂದಹಾಗೆ ರಾಕುಲ್ ಸಿನಿಮಾ ವಿಚಾರಕ್ಕೆ ಬರುವುದಾರೆ, ಥ್ಯಾಂಕ್ ಗಾಡ್ ಸಿನಿಮಾಗೂ ಮೊದಲು ರಿಲೀಸ್ ಆದ ಡಾಕ್ಟರ್ ಜಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

77

ಸದ್ಯ ರಾಕುಲ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಹಿಂದಿ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾ ಕೂಡ ರಾಕುಲ್ ಕೈಯಲ್ಲಿವೆ. ಕಮಲ್ ಹಾಸನ್ ನಟನೆಯ ಇಂಡಿಯನ್-2 ಸಿನಿಮಾದಲ್ಲೂ ರಾಕುಲ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.  
 

Read more Photos on
click me!

Recommended Stories