ಬರೋಬ್ಬರಿ 45 ಕೋಟಿ ಬಜೆಟ್‌ನ ಸಿನೆಮಾ ಗಳಿಸಿದ್ದು 40 ಸಾವಿರ! ಪ್ರಪಂಚದ ಕಳಪೆ ರೆಕಾರ್ಡ್ ಇರೋ ಭಾರತದ ಚಿತ್ರ!

ದೊಡ್ಡ ಬಜೆಟ್​ನಲ್ಲಿ ತಯಾರಾಗಿ.. ದೊಡ್ಡ ನಿರೀಕ್ಷೆಗಳ ನಡುವೆ ರಿಲೀಸ್ ಆದ ಸ್ಟಾರ್ ಹೀರೋ ಸಿನಿಮಾ ಶಾಕ್ ಕೊಟ್ಟಿದೆ. 45 ಕೋಟಿಗಿಂತ ಜಾಸ್ತಿ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ 45 ಸಾವಿರ ಕೂಡ ಕಲೆಕ್ಷನ್ ಮಾಡ್ಲಿಲ್ಲ. ಅಷ್ಟಕ್ಕೂ ಆ ಸಿನಿಮಾ ಯಾವುದು? ಪ್ರಪಂಚದ ಕಳಪೆ ರೆಕಾರ್ಡ್ ಇರೋ ಭಾರತದ ಚಿತ್ರವಿದು. ಸ್ಟಾರ್‌ ನಟನಾಗಬೇಕೆಂದು ಬಂದ ಪ್ರಸಿದ್ಧ ನಿರ್ಮಾಪಕನ ಮಗನಿಗೆ ಸಕ್ಸಸ್‌ ಕೊಡದ ಚಿತ್ರವಿದು.

Biggest Bollywood Flop Lady Killer Movie 45 Cr Budget 40K Collection gow

ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ನಡೀತಿದೆ. ಸಣ್ಣ ಹೀರೋಗಳಾದ್ರೂ ಸ್ವಲ್ಪ ಬಜೆಟ್ ಜಾಸ್ತಿನೇ ಹಾಕಿ. ನಾಲ್ಕೈದು ಭಾಷೆಗಳಲ್ಲಿ ಸಿನಿಮಾನ ರಿಲೀಸ್ ಮಾಡ್ತಿದ್ದಾರೆ. ಆದ್ರೆ ರಿಲೀಸ್ ಆದ ಸಿನಿಮಾಗಳೆಲ್ಲ ಒಂದೇ ರಿಸಲ್ಟ್ ಕೊಡೋದಿಲ್ಲ. ಬಜೆಟ್ ಕಮ್ಮಿ ಹಾಕಿದ ಕೆಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆದ ಉದಾಹರಣೆಗಳೂ ತುಂಬಾ ಇವೆ. ಆದ್ರೆ ದೊಡ್ಡ ಬಜೆಟ್​ನಲ್ಲಿ ತಯಾರಾದ ಕೆಲವು ಸಿನಿಮಾಗಳು ಮಾತ್ರ ಬಾಕ್ಸ್ ಆಫೀಸ್​ನಲ್ಲಿ ಕಳಪೆ ರಿಸಲ್ಟ್ ನೋಡಿದ ಉದಾಹರಣೆಗಳೂ ಇವೆ. ಅಂಥ ಒಂದು ಸಿನಿಮಾ ಬಗ್ಗೆ ನೋಡೋಣ.

Biggest Bollywood Flop Lady Killer Movie 45 Cr Budget 40K Collection gow

ಈ ಸಿನಿಮಾ ಮಾತ್ರ ದೊಡ್ಡ ನಿರೀಕ್ಷೆಗಳನ್ನಿಟ್ಟುಕೊಂಡು ರಿಲೀಸ್ ಆಗಿ ಥಿಯೇಟರ್​ಗಳಲ್ಲಿ ಅಟ್ಟರ್ ಫ್ಲಾಪ್ ಆಯ್ತು. ಹಾಕಿದ ಬಂಡವಾಳ ವಾಪಸ್ ಬರಲಿಲ್ಲ ಅಷ್ಟೇ ಅಲ್ಲ. ಆ ದುಡ್ಡಿಗೆ ಸ್ವಲ್ಪನೂ ಸಂಬಂಧ ಇಲ್ಲದ ಹಾಗೆ ಕಲೆಕ್ಷನ್ ಮಾಡ್ತು. ಯಾರೂ ಊಹಿಸದ ರೀತಿ ನಿರ್ಮಾಪಕರಿಗೆ ದೊಡ್ಡ ಶಾಕ್ ಕೊಡ್ತು. ಅದು ಚಿಕ್ಕ ಹೀರೋ ಸಿನಿಮಾ ಅಲ್ಲ. ದೊಡ್ಡ ಪ್ರೊಡ್ಯೂಸರ್ ಮಗ, ಸ್ಟಾರ್ ಹೀರೋ. ಹೀರೋ ಆಗಿ ತೆರೆಗೆ ತಂದ ಆ ಸಿನಿಮಾ ಮಾತ್ರ ಡಿಸಾಸ್ಟರ್ ಆಯ್ತು. ಆ ಸಿನಿಮಾ ಬೇರೆ ಯಾವುದೂ ಅಲ್ಲ ಲೇಡಿ ಕಿಲ್ಲರ್.


ಆ ಹೀರೋ ಬೇರೆ ಯಾರೂ ಅಲ್ಲ ಅರ್ಜುನ್ ಕಪೂರ್. ಲೇಡಿ ಕಿಲ್ಲರ್ ಸಿನಿಮಾಗೆ ಪ್ರೊಡ್ಯೂಸರ್ಸ್ ಹಾಕಿದ ಬಂಡವಾಳದಲ್ಲಿ ಕೇವಲ 0.0001 ಪರ್ಸೆಂಟ್ ಮಾತ್ರ ಕಲೆಕ್ಷನ್ ಬಂತು. ಅದ್ರಿಂದ ಇದು ನಮ್ಮ ದೇಶದಲ್ಲೇ. ಇನ್ನೂ ಹೇಳಬೇಕಂದ್ರೆ ಪ್ರಪಂಚದಲ್ಲೇ ಅತ್ಯಂತ ಕಳಪೆ ಸಿನಿಮಾ ಅಂತ ರೆಕಾರ್ಡ್ ಕ್ರಿಯೇಟ್ ಮಾಡ್ತು. ಸುಮಾರು 45 ಕೋಟಿ ರೂಪಾಯಿಯಲ್ಲಿ ತೆರೆಗೆ ಬಂದ ಈ ಸಿನಿಮಾ.. ಕೇವಲ 45 ಸಾವಿರ ಕಲೆಕ್ಷನ್ ಮಾಡ್ತು. ಲೇಡಿ ಕಿಲ್ಲರ್ ಈ ಸಿನಿಮಾ ಇದುವರೆಗೂ ಪ್ಯಾನ್ ಇಂಡಿಯಾ ಇತಿಹಾಸದಲ್ಲೇ ದೊಡ್ಡ ಫ್ಲಾಪ್ ಮೂವಿ ಅಂತಾನೇ ಉಳಿದಿದೆ.

2023 ನವೆಂಬರ್ 3ಕ್ಕೆ ರಿಲೀಸ್ ಆದ ಲೇಡಿ ಕಿಲ್ಲರ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಹೀರೋ ಅರ್ಜುನ್ ಕಪೂರ್ ಆಕ್ಟ್ ಮಾಡಿದ್ದಾರೆ. ತುಂಬಾ ದಿನಗಳಿಂದ ಒಂದು ಸಖತ್ ಹಿಟ್​ಗಾಗಿ ಕಾಯ್ತಿದ್ದ ಅರ್ಜುನ್ ಕಪೂರ್​ಗೆ ಈ ಸಿನಿಮಾ ಸಮಾಧಾನ ಕೊಡುತ್ತೆ ಅಂದ್ಕೊಂಡ್ರು. ಆದ್ರೆ ಈ ಸಿನಿಮಾದಿಂದ ದೊಡ್ಡ ಹೊಡೆತ ಬಿತ್ತು. ಆಗ್ಲೇ ಮಲೈಕಾ ಅರೋರಾ ಜೊತೆ ಡೇಟಿಂಗ್​ನಲ್ಲಿದ್ರು ಅರ್ಜುನ್ ಕಪೂರ್. ಪ್ರತಿದಿನ ಒಂದಲ್ಲ ಒಂದು ನ್ಯೂಸ್​ನಲ್ಲಿ ಇರ್ತಿದ್ದ ಅರ್ಜುನ್ ಕಪೂರ್.. ಒಂದು ಒಳ್ಳೆ ಬ್ರೇಕ್​ಗಾಗಿ ಕಾಯ್ತಿದ್ದ ಟೈಮ್​ನಲ್ಲೇ ಕೆರಿಯರ್​ನಲ್ಲಿ ಅತಿ ದೊಡ್ಡ ಡಿಸಾಸ್ಟರ್ ಆಗಿ ಈ ಮೂವಿ ಉಳಿಯಿತು.

ಭೂಮಿ ಫಡ್ನೆಕರ್ ಹೀರೋಯಿನ್ ಆಗಿ ಆಕ್ಟ್ ಮಾಡಿದ ಈ ಸಿನಿಮಾಗೆ ಅಜಯ್ ಬಹ್ಲ್ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾ ಈಗ ಯೂಟ್ಯೂಬ್​ನಲ್ಲಿ ಸಿಗುತ್ತೆ. ಈ ಸಿನಿಮಾ ಟೋಟಲ್ 12 ಶೋ  ಅಷ್ಟೇ. ಚಿತ್ರದ ನಿರ್ಮಾಪಕರು ಒಟಿಟಿ ರಿಲೀಸ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಕಾರಣ,  ಚಿತ್ರದ ಸೀಮಿತ ಥಿಯೇಟರಿಕಲ್ ಬಿಡುಗಡೆಯನ್ನು ಘೋಷಿಸಿದರು.  ಮೊದಲ ದಿನ ಚಿತ್ರ 38 ಸಾವಿರ ಕಲೆಕ್ಷನ್ ಮಾಡಿತು. ಇನ್ನು ಈ ಸಿನಿಮಾ ರಿಲೀಸ್ ಆಗೋಕೆ ಮುಂಚೆ ನೆಟ್​ಫ್ಲಿಕ್ಸ್ ಓಟಿಟಿಯೊಂದಿಗೆ ಡೀಲ್ ಆಗಿತ್ತಂತೆ. ಆದ್ರೆ ಸಿನಿಮಾ ರಿಸಲ್ಟ್ ನೋಡಿದ ಮೇಲೆ ಆ ಡೀಲ್ ಕ್ಯಾನ್ಸಲ್ ಆಯ್ತು ಅಂತ ಮಾಹಿತಿ.

Latest Videos

vuukle one pixel image
click me!