ಅನುಷ್ಕಾ ಆಕರ್ಷಣೆಗೆ ಮಾತ್ರ ಸರಿ
ಇನ್ನೂ ಕೆಲವರು ಈ ಹುಡುಗಿ ಬೇಡ ಎಂದು ನಿರ್ದೇಶಕರಿಗೆ ಸಲಹೆ ನೀಡಿದವರೂ ಇದ್ದಾರೆ. ನಿನಗೇನು ಹುಚ್ಚಾ ಇಷ್ಟು ದೊಡ್ಡ ಸಿನಿಮಾ ಮಾಡುತ್ತಿದ್ದೀಯಾ. ಅದರಲ್ಲಿ ಆ ಹುಡುಗಿಯನ್ನು ಯಾಕೆ ಇಟ್ಟುಕೊಂಡಿದ್ದೀಯಾ ಎಂದು ಕೇಳಿದರು. ಅವಳು ಆಕರ್ಷಣೆಗೆ ಮಾತ್ರ ಸರಿ, ನಟನೆಗೆ ಅಲ್ಲ ಎಂದು ಸಲಹೆ ನೀಡಿದರಂತೆ.
ಆದರೆ ಶ್ಯಾಮ್ ಪ್ರಸಾದ್ ರೆಡ್ಡಿ ನನ್ನನ್ನು ನಂಬಿದರು. ನನ್ನ ಮೇಲೆ ಈ ಸಿನಿಮಾ ವರ್ಕ್ ಔಟ್ ಆಗುತ್ತದೆ ಎಂದು ಅವರು ಅಂದುಕೊಂಡರು. ಅರುಂಧತಿ ಸಿನಿಮಾ ಬರುವವರೆಗೂ ಆಕ್ಟಿಂಗ್ ಬಗ್ಗೆ, ಗ್ರಾಫಿಕ್ಸ್ ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ. ವಿಕ್ರಮಾರ್ಕುಡು ಚಿತ್ರದಲ್ಲಿ ನಟಿಸುವಾಗ ರಾಜಮೌಳಿ ನಟನೆ ಮಾಡಿ ತೋರಿಸಿದರೆ, ಅದನ್ನು ಕಾಪಿ ಹೊಡೆಯುತ್ತಿದ್ದೆ ಎಂದಿದ್ದುರ.