Rakhi Sawant in Biggboss House: ಹ್ಯಾಂಡ್ಸಂ ಗಂಡನ ಮೇಲೆ ಶಮಿತಾಳ ಕಣ್ಣು ಬಿದ್ರೆ ಅನ್ನೋ ಭಯ

First Published | Nov 28, 2021, 8:57 AM IST

ನಟಿ ರಾಖಿ ಸಾವಂತ್(Rakhi Sawant) ಬಿಗ್‌ಬಾಸ್(Biggboss) ಮನೆಗೆ ಪತಿಯನ್ನು ಕರೆದುಕೊಂಡು ಬಂದಾಗಿದೆ. ಆದರೆ ಈಗ ಅಲ್ಲಿರಫ ನಟಿಯರ ಕಣ್ಣು ತನ್ನ ಗಂಡನ ಮೇಲೆ ಬಿದ್ದರೆ ಅನ್ನೋ ಭಯ ಕಾಡತೊಡಗಿದೆ ರಾಖಿಗೆ.

ಕಳೆದ ಸೀಸನ್‌ನಲ್ಲಿ ತನ್ನ ಚೇಷ್ಟೆಗಳ ಮೂಲಕ ಎಲ್ಲರಿಗೂ ಮನರಂಜನೆ ನೀಡಿದ್ದ ಎಂಟರ್‌ಟೈನ್‌ಮೆಂಟ್ ಕ್ವೀನ್ ರಾಖಿ ಸಾವಂತ್ (Rakhi Sawant)ಬಿಗ್ ಬಾಸ್ 15ರ ಮನೆಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ಬಾರಿ ನಟಿ ಒಬ್ಬಂಟಿಯಾಗಿಲ್ಲ, ನಟಿ ಮನೆಯಲ್ಲಿ ತನ್ನ ಜೊತೆಯಲ್ಲಿ ವಿಶೇಷ ವ್ಯಕ್ತಿಯ ಜೊತೆಗಿರಲಿದ್ದಾರೆ.

ಕಳೆದ ಸೀಸನ್‌ನಲ್ಲಿ ರಾಖಿ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಮೊದಲ ಬಾರಿಗೆ ತನ್ನ ಪತಿಯನ್ನು ರಾಷ್ಟ್ರೀಯ ದೂರದರ್ಶನದಲ್ಲಿ ಪರಿಚಯಿಸಲಿದ್ದಾರೆ ನಟಿ. ರಾಖಿ ತನ್ನ ನಿಗೂಢ ಪತಿ ರಿತೇಶ್‌ನೊಂದಿಗೆ ವೈಲ್ಡ್‌ಕಾರ್ಡ್‌ ಮೂಲಕ ಬಿಬಿ 15 ಮನೆಯೊಳಗೆ ಹೆಜ್ಜೆ ಹಾಕುತ್ತಿದ್ದಾರೆ.

Tap to resize

ಸಂದರ್ಶನದಲ್ಲಿ ಮಾತನಾಡಿದ ನಟಿ ಪತಿಯನ್ನು ಹೊಗಳಿದ್ದರು. ಅವರು ತಮ್ಮ ಪತಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿರುವ ಬಗ್ಗೆ ಆತಂಕ ಮತ್ತು ಒತ್ತಡದಲ್ಲಿದ್ದಾರೆ ಎಂದಿದ್ದಾರೆ. ರಾಖಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಆಲಸ್ಯದ ವರ್ತನೆಯ ಬಗ್ಗೆ ಮಾತನಾಡಿದ್ದಾರೆ. 

ನನ್ನ ಪತಿ ತುಂಬಾ ಸುಂದರ, ನಾನು ಬೇರೆ ಹುಡುಗರನ್ನು ನೋಡಬೇಕಾಗಿಲ್ಲ. ನನಗೆ ಭಯವಾಗಿದೆ ಮತ್ತು ಶಮಿತಾ ಶೆಟ್ಟಿ, ತೇಜಸ್ವಿ ಪ್ರಕಾಶ್ ಮತ್ತು ನೇಹಾ ಭಾಸಿನ್ ನನ್ನ ಪತಿಯೊಂದಿಗೆ ಫ್ಲರ್ಟಿಂಗ್ ಮಾಡಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಪತಿಗೆ ಯಾರ ದೃಷ್ಟಿಯಾಗದಿರಲಿ ಎಂದಿದ್ದಾರೆ ನಟಿ

ಕಳೆದ ವರ್ಷ ನಟಿಯ ವಿವಾಹ ಸುಳ್ಳು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು. ನಟಿಯದ್ದು ಫೇಕ್ ಮ್ಯಾರೇಜ್ ಎಂದು ಭಾರೀ ಸುದ್ದಿಯಾಗಿತ್ತು

ರಾಖಿ ಸಾವಂತ್ ಈ ಬಾರಿ ಪತಿಯನ್ನು ಜೊತೆಗೇ ಕರೆದುಕೊಂಡು ಬಂದು ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಅಂತೂ ಈ ಬಾರಿಯ ಬಿಗ್‌ಬಾಸ್ ಸೀಸನ್ ಭಾರೀ ಮನೋರಂಜನೆ ಕೊಡೋದ್ರದಲ್ಲಿ ಡೌಟೇ ಇಲ್ಲ

Latest Videos

click me!