ಬಾಲಿವುಡ್ ತಾರೆ ಭೂಮಿ ಪೆಡ್ನೇಕರ್ (Bhumi Pednekar) ಗುರುವಾರ ರಾತ್ರಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ಆದರೆ, ನಟಿ ತನ್ನ ಉಡುಪಿನಿಂದ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾದ್ದರು. ನೆಟಿಜನ್‌ಗಳು ನಟಿ ಝೀರೋ ಡ್ರೆಸ್ಸಿಂಗ್ ಸೆನ್ಸ್ ಹೊಂದಿದ್ದಾರೆಂದು ಟ್ರೋಲ್ ಮಾಡಲು ಪ್ರಾರಂಭಿಸಿದರು.
ನಿನ್ನೆ ರಾತ್ರಿ ಎಲ್ಲೆ ರೆಡ್ ಕಾರ್ಪೆಟ್ ನಲ್ಲಿ ಭೂಮಿ ಪೆಡ್ನೇಕರ್ ಕಾಣಿಸಿಕೊಂಡರು. ಆದರೆ ಕಪ್ಪು ತೊಡುಗೆ ತೊಟ್ಟಿದ್ದ ಭೂಮಿ ಡ್ರೆಸ್ ಯಾರನ್ನೂ ಇಂಪ್ರೆಸ್ ಮಾಡಲೇ ಇಲ್ಲ. ಅದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿದ್ದಾರೆ.
28
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರ ಭೂಮಿ ಪೆಡ್ನೇಕರ್ ವಿಡಿಯೋವನ್ನು ವೈರಲ್ ಭಯಾನಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನೆಟಿಜನ್‌ಗಳು ಭೂಮಿ ಪೆಡ್ನೇಕರ್ ಅವರ ಡ್ರೆಸ್ಸಿಂಗ್ ಸೆನ್ಸ್‌ಗಾಗಿ ಟ್ರೋಲ್ ಮಾಡಿದ್ದಾರೆ.
38
'ಕಿಡ್ನಿ ಹೊರಬಂದಿದೆ ಎಂದು ನಾನು ಭಾವಿಸಿದೆ'ಎಂದು ಒಬ್ಬರು ಬರೆದಿದ್ದಾರೆ. ಈ ಎರಡು ಕ್ಷಿಪಣಿ ಇಸ್ರೇಲ್‌ಗೆ ನೀಡಿ ಅವರಿಗೆ ಉಪಯೋಗವಾಗುತ್ತದೆ' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
48
'ಅವಳು ಝೀರೋ ಫ್ಯಾಶನ್ ಸೆನ್ಸ್ ಹೊಂದಿದ್ದಾಳೆ' ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಎಷ್ಟು ಕೆಟ್ನಾಗಿ ಕೆಮೆಂಟ್ ಮಾಡಲು ಸಾಧ್ಯವೋ ಅಷ್ಟು ಕೆಟ್ಟ ಕಮೆಂಟ್ಸ್ ಬರ್ತಿವೆ.
58
'ಅವಳ ಎರಡೂ ಕಿಡ್ನಿಗಳು ಹೊರಬರುತ್ತಿರುವಂತೆ.ಯಾರು ಅವಳ ಮೂರ್ಖ ವಿನ್ಯಾಸಕ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಡಿಸೈನರ್ ಅನ್ನು ಸನ್ಮಾನ ಮಾಡಬೇಕು' ಎಂದು ಒಬ್ಬರು ವ್ಯಂಗ್ಯವಾಡಿದರು.
68
'ಅವಳು ಉರ್ಫಿಯಿಂದ ಕಲಿಯುತ್ತಿದ್ದಾಳೆ' ಎಂದು ಮತ್ತೊಬ್ಬ ಬಳಕೆದಾರ ಅಭಿಪ್ರಾಯಪಟ್ಟರೆ, 'ನಿಮಗೆ ಟೆನ್ಷನ್ ನೀಡುವ ಇಂತಹ ಫ್ಯಾಷನ್‌ನಿಂದ ಏನು ಪ್ರಯೋಜನ' ಎಂದು ಮತ್ತೊಂದು ಕಾಮೆಂಟ್‌ನಲ್ಲಿ ಬರೆಯಲಾಗಿದೆ.
78
ಭೂಮಿ ಪೆಡ್ನೇಕರ್, ಡಾಲಿ ಸಿಂಗ್ ಮತ್ತು ಶಿಬಾನಿ ಬೇಡಿ ನಟಿಸಿರುವ ಸೆಕ್ಸ್ ಕಾಮಿಡಿ ಥ್ಯಾಂಕ್ ಯೂ ಫಾರ್ ಕಮಿಂಗ್, ಅಕ್ಟೋಬರ್ 6 ರಂದು ಸೀಮಿತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಸುಶಾಂತ್ ದಿವ್ಗಿಕ್ರ್, ಕುಶಾ ಕಪಿಲಾ, ಶೆಹನಾಜ್ ಗಿಲ್, ಡಾಲಿ ಅಹ್ಲುವಾಲಿಯಾ ಮತ್ತು ನತಾಶಾ ರಸ್ತೋಗಿ ಸಹ ಪ್ರಮುಖ ಪಾತ್ರಗಳಲ್ಲಿದ್ದಾರೆ.
88
ಏಕ್ತಾ ಕಪೂರ್ ಮತ್ತು ರಿಯಾ ಕಪೂರ್ ನಿರ್ಮಿಸಿದ ಮತ್ತು ರಿಯಾ ಅವರ ಪತಿ ನಿರ್ದೇಶಿಸಿದ ಚಿತ್ರ ಕರಣ್ ಬೂಲಾನಿ, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.