ತುಟಿ ಬಗ್ಗೆ ಕಮೆಂಟ್‌ಗೆ ಸ್ತಬ್ಧರಾದ ಭೂಮಿ ಪಡ್ನೇಕರ್, ನೋವು ತೋಡಿಕೊಂಡ ನಟಿ

Published : Jan 22, 2026, 07:07 PM IST

ತುಟಿ ಬಗ್ಗೆ ಕಮೆಂಟ್‌ಗೆ ಸ್ತಬ್ಧರಾದ ಭೂಮಿ ಪಡ್ನೇಕರ್, ದ ರಾಯಲ್ಸ್ ವೆಬ್ ಸೀರಿಸ್ ಬಳಿಕ ಮನಬಿಚ್ಚಿ ಮಾತನಾಡಿದ ನಟಿ ತುಟಿ ಕುರಿತ ಟ್ರೋಲ್‌ಗೆ ಆಘಾತಗೊಂಡಿರುವುದಾಗಿ ಹೇಳಿದ್ದಾಳೆ. ಅಷ್ಟಕ್ಕೂ ಭೂಮಿ ಪಡ್ನೇಕರ್ ಹೇಳಿದ್ದೇನು?

PREV
15
ನೋವು ತೋಡಿಕೊಂಡ ಭೂಮಿ ಪಡ್ನೇಕರ್

ಬಾಲಿವುಡ್ ನಟಿ ಭೂಮಿ ಪಡ್ನೇಕರ್ ದ ರಾಯಲ್ಸ್ ವೆಬ್ ಸೀರಿಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ ಸೀರಿಸ್ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಪ್ರಮುಖವಾಗಿ ಭೂಮಿ ಪಡ್ನೇಕರ್ ಕುರಿತು ಟೀಕೆಗಳು, ಟ್ರೋಲ್ ವ್ಯಕ್ತವಾಗಿತ್ತು. ದ ರಾಯಲ್ಸ್ ಬಳಿಕ ಸೈಲೆಂಟ್ ಆಗಿದ್ದ ಭೂಮಿ ಪಡ್ನೇಕರ್ ಇದೀಗ ತಮ್ಮ ನೋವು ತೋಡಿಕೊಂಡಿದ್ದಾರೆ.

25
ತುಟಿ ಕುರಿತು ಟ್ರೋಲ್

ದಿ ರಾಯಲ್ಸ್ ಸೀರಿಸ್ ಬಿಡುಗಡೆಯಾದ ಬಳಿಕ ನನ್ನ ವಿರುದ್ದ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಹಲವರು ಟ್ರೋಲ್ ಮಾಡಿದ್ದರು. ಇದರಲ್ಲಿ ನನ್ನ ನಟನೆ ಹಾಗೂ ತುಟಿಗಳ ಶಸ್ತ್ರಚಿಕಿತ್ಸೆ ಕುರಿತು ಟೀಕೆ, ಟ್ರೋಲ್ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ತುಟಿ ಕೆಟ್ಟದಾಗಿತ್ತು ಎಂದು ಟ್ರೋಲ್ ಮಾಡಿದ್ದಾರೆ.

35
ತುಟಿ ಕಮೆಂಟ್‌ನಿಂದ ಸ್ತಬ್ಧರಾದ ಭೂಮಿ

ಹಾಲಿವುಡ್ ರಿಪೋರ್ಟರ್ ಸಂದರ್ಶನದಲ್ಲಿ ಭೂಮಿ ಪಡ್ನೇಕರ್ ತಮ್ಮ ನೋವುಗಳನ್ನು ಹೇಳಿಕೊಂಡಿದ್ದಾರೆ. ತುಟಿ, ನಟನೆ ಕಮೆಂಟ್, ಟ್ರೋಲ್ ನೋಡಿ ನಾನು ಆಘಾತಗೊಂಡಿದ್ದೆ. ಚೇತರಿಸಿಕೊಳ್ಳಲು ಸಾಕಷ್ಟು ದಿನವೇ ಬೇಕಾಯಿತು. ಕಳೆದ 9 ತಿಂಗಳಿನಿಂದ ಯಾರು ಎಲ್ಲದರಿಂದಲೂ ದೂರ ಉಳಿದಿದ್ದೆ ಎಂದು ಭೂಮಿ ಹೇಳಿದ್ದಾರೆ.

45
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕೋರ್ಸ್

ಕಳೆದ 9 ತಿಂಗಳು ಟ್ರೋಲ್‌ನಿಂದ ಹೊರಬರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕೋರ್ಸ್ ಮಾಡಿದ್ದೇನೆ. ನಿಧಾನವಾಗಿ ಟ್ರೋಲ್‌ನಿಂದ ಹೊರಬಂದಿದ್ದೇನೆ. ಇದೀಗ ಮುಂದಿನ ವೆಬ್ ಸೀರಿಸ್ ಕುರಿತು ತಯಾರಿ ಆರಂಭಿಸಿದ್ದೇನೆ ಎಂದಿದ್ದಾರೆ.

55
ಪ್ರತಿಭೆ ಇದೆಯಾ

ಕೆಲ ತಿಂಗಳು ನನ್ನ ಪ್ರತಿಭ ಕುರಿತು ಅನುಮಾನ ವ್ಯಕ್ತವಾಗಿತ್ತು, ನಾನು ನಟಿಸಬಲ್ಲನೇ, ನನ್ನ ತುಟಿಗಳು ಅಷ್ಟು ಕೆಟ್ಟದಾಗಿದೆಯಾ ಅನ್ನೋ ಅನುಮಾನ ಕಾಡಿತ್ತು. ಆಪ್ತರ ನೆರವಿನಿಂದ ಸುಧಾರಿಸಿಕೊಂಡಿದ್ದೇನೆ ಎಂದು ಭೂಮಿ ಪಡ್ನೇಕರ್ ಹೇಳಿದ್ದಾರೆ.

ಪ್ರತಿಭೆ ಇದೆಯಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories