ಯಾರನ್ನೂ ಗುರುತು ಹಿಡಿಯುತ್ತಿಲ್ಲ ವಿಷ್ಣು ಜೊತೆ ನಟಿಸಿದ ಭಾನುಪ್ರಿಯ: ನೆನಪು ಕಳೆದುಕೊಂಡ ಸಿಂಹಾದ್ರಿಯ ಸಿಂಹ ನಟಿ

Published : Feb 12, 2025, 06:08 PM ISTUpdated : Feb 12, 2025, 06:09 PM IST

ಪ್ರಸಿದ್ಧ ಕೂಚಿಪುಡಿ ನೃತ್ಯಗಾರ್ತಿಯಾಗಿರುವ ಭಾನುಪ್ರಿಯ ಅವರ ನೃತ್ಯಕ್ಕೆ ಮನಸೋಲದವರು ಯಾರು? ಈಗ 58 ವರ್ಷದ ಈ ನಟಿ ಜೀವನದ ದೊಡ್ಡ ದುರಂತವನ್ನು ಎದುರಿಸುತ್ತಿದ್ದಾರೆ. ಸಂಪೂರ್ಣವಾಗಿ ನೆನಪು ಕಳೆದುಕೊಂಡಿದ್ದಾರೆ. 

PREV
16
ಯಾರನ್ನೂ ಗುರುತು ಹಿಡಿಯುತ್ತಿಲ್ಲ ವಿಷ್ಣು ಜೊತೆ ನಟಿಸಿದ ಭಾನುಪ್ರಿಯ: ನೆನಪು ಕಳೆದುಕೊಂಡ ಸಿಂಹಾದ್ರಿಯ ಸಿಂಹ ನಟಿ

ಜೀವನ ಯಾವಾಗಲೂ ಒಂದೇ ರೀತಿ ಇರಲ್ಲ. ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರಿದ್ರೂ ಒಮ್ಮೆಲೇ ಕೆಳಗೆ ಬೀಳಬಹುದು, ಯಾರಿಗೂ ಬೇಡದ ವ್ಯಕ್ತಿ ಒಂದೇ ದಿನದಲ್ಲಿ ಶ್ರೀಮಂತನಾಗಬಹುದು. ವಿಧಿಯಾಟ ಯಾರಿಗೆ ಗೊತ್ತು, ದೇವರ ಮುಂದೆ ಯಾರು ನಿಲ್ಲಲು ಸಾಧ್ಯ ಅನ್ನೋ ಮಾತಿಗೆ ಇದೇ ಕಾರಣ. ಸಿನಿಮಾ ರಂಗದಲ್ಲಿ ಕೆಲವು ವರ್ಷಗಳ ಕಾಲ ಮಾತ್ರ ಬೆಳಕು ಇರುತ್ತೆ. ಹಿಟ್ ಸಿನಿಮಾಗಳನ್ನು ಕೊಡುವಾಗ ಎಲ್ಲರೂ ಅವರ ಹಿಂದೆ ನಿಲ್ಲುತ್ತಾರೆ, ಅವರನ್ನು ಒಮ್ಮೆ ನೋಡಲು ಪ್ರಾಣವನ್ನೇ ಕೊಡುತ್ತಾರೆ. ಆದರೆ ವಯಸ್ಸಾದಂತೆ, ಅವರು ತೆರೆಮರೆಯಲ್ಲಿ ಇದ್ದಾಗ, ಅವರು ಸತ್ತರೂ ನೋಡುವವರು ಇರಲ್ಲ. 

26

ಕೆಲವು ಕಲಾವಿದರು ರಸ್ತೆಯಲ್ಲಿ ಬಿದ್ದು ಸತ್ತ ಘಟನೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಇದೇ ಜೀವನದ ದೊಡ್ಡ ದುರಂತ. ಒಂದು ಕಾಲದ ಸ್ಟಾರ್ ನಟಿ, ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾರ್ತಿ, ಚೆಲುವೆ ಭಾನುಪ್ರಿಯ ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ನೃತ್ಯದಿಂದಲೂ ಮೋಡಿ ಮಾಡಿದ್ದಾರೆ. 1994ರಲ್ಲಿ ಬಿಡುಗಡೆಯಾದ 'ರಸಿಕ' ಚಿತ್ರ ನೋಡಿದವರಿಗೆ ಮುದ್ದುಮುಖದ ನಾಯಕಿ ಭಾನುಪ್ರಿಯ ನೆನಪಿರಬಹುದು. ಆ ನಂತರ 'ದೇವರ ಮಗ', 'ಸಿಂಹಾದ್ರಿ ಸಿಂಹ', 'ಕದಂಬ', 'ಮೇಷ್ಟ್ರು' ಚಿತ್ರಗಳಲ್ಲಿ ನಟಿಸಿದ್ದಾರೆ.

36

ಪ್ರಸಿದ್ಧ ಕೂಚಿಪುಡಿ ನೃತ್ಯಗಾರ್ತಿಯಾಗಿರುವ ಭಾನುಪ್ರಿಯ ಅವರ ನೃತ್ಯಕ್ಕೆ ಮನಸೋಲದವರು ಯಾರು? ಈಗ 58 ವರ್ಷದ ಈ ನಟಿ ಜೀವನದ ದೊಡ್ಡ ದುರಂತವನ್ನು ಎದುರಿಸುತ್ತಿದ್ದಾರೆ. ಸಂಪೂರ್ಣವಾಗಿ ನೆನಪು ಕಳೆದುಕೊಂಡಿದ್ದಾರೆ. ನಟಿಯ ಜೀವನದಲ್ಲಿ ದುಃಖಗಳ ಸರಮಾಲೆಯೇ ಇದೆ. ದಶಕಗಳ ಕಾಲ ಬಹುಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡ ಈ ನಟಿ ಕೊನೆಗೆ ಸಿನಿಮಾ ರಂಗದಿಂದ ದೂರವಾಗಿದ್ದಾರೆ. 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯ ನಟಿಯಾಗಿದ್ದ ಭಾನುಪ್ರಿಯ ಅವರ ಅಭಿಮಾನಿಗಳು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. 

46

ಆದರೆ ಯಾವ ಕ್ಷೇತ್ರವಾದರೂ ಹಾಗೆ ಅಲ್ವಾ? ಈಗ ಇದ್ದಾಗ ಅಭಿಮಾನ, ಇನ್ನೂ ಕೆಲವು ವರ್ಷ ಮಾತನಾಡಿಕೊಂಡರೂ ಆಮೇಲೆ ಅವರ ಬಗ್ಗೆ ಮರೆತುಬಿಡುತ್ತಾರೆ. ಇಲ್ಲೂ ಅದೇ ಆಗಿದೆ. ಭಾನುಪ್ರಿಯ ಬಗ್ಗೆ ಜನ ಮರೆತುಬಿಟ್ಟಿದ್ದಾರೆ. 1998ರಲ್ಲಿ ಭಾನುಪ್ರಿಯ ಛಾಯಾಗ್ರಾಹಕ ಆದರ್ಶ್ ಕೌಶಲ್ ಅವರನ್ನು ವಿವಾಹವಾದರು. 2005ರಲ್ಲಿ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನಟಿ, ನಾವಿಬ್ಬರೂ ಚೆನ್ನಾಗಿದ್ದೇವೆ. ಕೆಲವು ಕಾರಣಗಳಿಂದ ಬೇರೆ ಬೇರೆ ಕಡೆ ವಾಸಿಸುತ್ತಿದ್ದೇವೆ ಅಷ್ಟೇ. ವಿಚ್ಛೇದನ ಏನೂ ಆಗಿಲ್ಲ. 
 

56

ವಿಚ್ಛೇದನದ ಸುದ್ದಿ ಸುಳ್ಳು ಎಂದಿದ್ದರು. ಆದರೆ 2018 ಭಾನುಪ್ರಿಯ ಜೀವನದಲ್ಲಿ ದೊಡ್ಡ ಆಘಾತ ತಂದಿತು. ಅವರ ಪತಿ ಆದರ್ಶ್ ಹೃದಯಾಘಾತದಿಂದ ನಿಧನರಾದರು. ಪತಿಯ ಮರಣದ ನಂತರ ನಟಿ ಭಾನುಪ್ರಿಯ ಖಿನ್ನತೆಗೆ ಒಳಗಾದರು. ಈಗ ಅದೇ ದುಃಖದಿಂದ ನೆನಪು ಕಳೆದುಕೊಂಡ ನಟಿ, ಯಾರನ್ನೂ ಗುರುತಿಸಲಾರದ ಸ್ಥಿತಿಯಲ್ಲಿದ್ದಾರೆ. ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ನಟಿ, ಪತಿಯ ಮರಣದ ನಂತರ ನಾನು ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದೆ. ಯಾಕೋ ಮನಸ್ಸಿಗೆ ನೆಮ್ಮದಿ ಇಲ್ಲ. ಅವರ ಮರಣದಿಂದ ಚೇತರಿಸಿಕೊಳ್ಳುವುದು ನನಗೆ ತುಂಬಾ ಕಷ್ಟವಾಯಿತು. 
 

66

ಆರೋಗ್ಯ ಸಮಸ್ಯೆಗಳು ಶುರುವಾದವು. ಕ್ರಮೇಣ ಈಗ ನೆನಪು ಕಡಿಮೆಯಾಗುತ್ತಿದೆ ಎಂದು ನಟಿ ಹೇಳಿಕೊಂಡಿದ್ದರು. ಸದ್ಯ ಈ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿದೆ. ಸ್ವರ್ಣಕಮಲಂ, ಅನ್ವೇಷಣ, ಸಿತಾರ, ವಿಜೇತ, ಅಪೂರ್ವ ಸಹೋದರರು, ಖೈದಿ ನಂ 786, ಶ್ರೀನಿವಾಸ ಕಲ್ಯಾಣಂ ಚಿತ್ರಗಳ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು ಭಾನುಪ್ರಿಯ. ಜೊತೆಗೆ ದೇವರ ಮಗ, ಕದಂಬ, ಮೇಷ್ಟ್ರು, ಮತ್ತು ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ವಿಶ್ವಾಮಿತ್ರ ಧಾರಾವಾಹಿಯಲ್ಲಿ ಮೇನಕೆಯಾಗಿ ಹೆಸರು ಮಾಡಿದ ನಟಿಯೂ ಹೌದು.

Read more Photos on
click me!

Recommended Stories