ಪವನ್ ಕಲ್ಯಾಣ್ ಮೊದಲ ಮದುವೆ ವೈಜಾಗ್‌ನ ನಂದಿನಿ ಜೊತೆ ಆಯಿತು. 26 ವರ್ಷದ ಪವನ್, 19 ವರ್ಷದ ನಂದಿನಿಯನ್ನು ಮದುವೆಯಾದರು. ನಂದಿನಿ ವೈಜಾಗ್‌ನ ಒಬ್ಬ ಉದ್ಯಮಿಯ ಮಗಳು. ಮೆಗಾ ಫ್ಯಾಮಿಲಿ ಪರಿಚಯದಿಂದಾಗಿ ಹಿರಿಯರು ಮದುವೆ ನಿಶ್ಚಯಿಸಿದರು. 1997ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಪವನ್ ಕಲ್ಯಾಣ್, ನಂದಿನಿ ಮದುವೆ ಅದ್ದೂರಿಯಾಗಿ ನೆರವೇರಿತು. ಆದರೆ ಎರಡೇ ವರ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಶುರುವಾದವು.