Best movies: ಬಿಗ್ ಬಜೆಟ್ ಇಲ್ಲ, Plot Twist ಇಲ್ಲ. ಆದ್ರೂ ಕೆಲವು ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆಲ್ಲುತ್ತೆ. ಸಿನಿಮಾಗಳು ಗೆಲ್ಲೋದಕ್ಕೆ ಬಿಗ್ ಬಜೆಟ್ ಬೇಕು, ಪ್ಲಾಟ್ ಟ್ವಿಸ್ಟ್ ಇರಲೇಬೇಕು ಅಂತೇನಿಲ್ಲ. ಕೆಲವು ಸಿನಿಮಾಗಳ ಸಿಂಪಲ್ ಕಥೆ ಸಿನಿ ರಸಿಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುತ್ತೆ.
ಬಿಗ್ ಬಜೆಟ್ ಸಿನಿಮಾಗಳು, ಕ್ರೈ ಥ್ರಿಲ್ಲರ್ ಕಥೆಗಳು, ಪ್ಲಾಟ್ ಟ್ವಿಸ್ಟ್ ಇರುವ ಸಿನಿಮಾಗಳು ಮಾತ್ರ ಥಿಯೇಟರ್ ನಲ್ಲಿ ಉಳಿಯುತ್ತೆ, ಸಿನಿರಸಿಕರ ಮನ ಗೆಲ್ಲುತ್ತೆ ಅನ್ನೋದು ತಪ್ಪಾಗುತ್ತೆ. ಯಾಕಂದ್ರೆ ಅದೆಷ್ಟೋ ಸಿನಿಮಾಗಳು, ತಮ್ಮ ಸಿಂಪಲ್ ಆಗಿರುವ ಕಥೆಯ ಮೂಲಕವೇ ಮನರಂಜನೆ ನೀಡಿ ಗೆದ್ದಿವೆ. ಅಂತಹ ಸಿನಿಮಾಗಳ ಲಿಸ್ಟ್ ಇಲ್ಲಿದೆ.
28
ಲಾಪತಾ ಲೇಡೀಸ್
ಇಬ್ಬರು ನವವಿವಾಹಿತ ಮಹಿಳೆಯರು ಆಕಸ್ಮಿಕವಾಗಿ ಅದಲು ಬದಲಾಗುತ್ತಾರೆ. ಇದರಿಂದಾಗಿ ಇಬ್ಬರೂ ಮಹಿಳೆಯರು ಹಾಸ್ಯಮಯ ದುಸ್ಸಾಹಸಗಳ ರೋಲರ್ ಕೋಸ್ಟರ್ ಜರ್ನಿ ಮೂಲಕ ತೆರಳಿ ಕೊನೆಗೆ ಹೇಗೆ ಮತ್ತೆ ತಮ್ಮ ಗಂಡನ ಬಳಿ ತಲುಪುತ್ತಾರೆ ಅನ್ನೋದು ಕತೆ.
38
ದಿಯಾ
ಇದೊಂದು ಟ್ರಾಜಿಡಿ ಸಿನಿಮಾ ಅಂತಾನೇ ಹೇಳಬಹುದು. ಖುಷಿ ರವಿ, ಪೃಥ್ವಿ ಅಂಬಾರ್ ಮತ್ತು ದೀಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ತ್ರಿಕೋನ ಪ್ರೇಮತೆಯನ್ನು ಹೊಂದಿರುವ ಒಂದು ಟ್ರಾಜಿಡಿ. ಒಂದು ಸಲ ನೋಡಿದ್ರೆ ಮತ್ತೊಂದು ಸಲ ಖಂಡಿತವಾಗಿಯೂ ಈ ಸಿನಿಮಾವನ್ನು ನೋಡಲಾರಿರಿ.
ಇದು ಬೆಂಗಳೂರಿನಲ್ಲಿ ಸೇರುವ ಮೂವರು ಕಸಿನ್ಸ್ ಗಳ ಕಥೆ. ಒಬ್ಬೊಬ್ಬರ ಕಥೆ ಒಂದೊಂದು ರೀತಿಯಲ್ಲಿ ಸಾಗುತ್ತದೆ. ಮೂವರ ಜೀವನದ ಸುಂದರ ಜರ್ನಿ ಬೆಂಗಳೂರು ಡೇಸ್. ಸಿನಿಮಾದಲ್ಲಿ ಫಾಹದ್ ಫಾಜಿಲ್, ನಜ್ರಿಯಾ ನಾಝೀಮ್, ನಿವಿನ್ ಪೌಲಿ, ದುಲ್ಖರ್ ಸಲ್ಮಾನ್, ಪಾರ್ವತಿ ಮೆನನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
58
ಚಾರ್ಲಿ
ದುಲ್ಖರ್ ಸಲ್ಮಾನ್ ಅಭಿನಯದ ಈ ಸಿನಿಮಾ ನೋಡೊದಕ್ಕೆ ಖುಷಿ. ಇನ್ನೊಬ್ಬರಿಗೆ ನೆರವಾಗುತ್ತಾ, ಜೀವನವನ್ನು ಖುಷಿಯಾಗಿ ಜೀವಿಸೋದು ಹೇಗೆ ಅನ್ನೋದನ್ನು ಈ ಸಿನಿಮಾ ಹೇಳುತ್ತೆ. ಜೀವನ ಪ್ರೀತಿಯನ್ನು ತಿಳಿಸುವಂತಹ ಸಿನಿಮಾ ಇದಾಗಿದೆ.
68
96
ಶಾಲೆಯಲ್ಲಿ ಪ್ರೀತಿಯಲ್ಲಿ ಬಿದ್ದ ಹುಡುಗಿಗಾಗಿ ರಾಮ್ ಮದುವೆಯಾಗದೇ ಕಾಯುತ್ತಿರುತ್ತಾನೆ. ತನ್ನ ಪ್ರೀತಿಯ ಹುಡುಗಿಗೆ ಈಗಾಗಲೇ ಮದುವೆಯಾಗಿದೆ ಎಂದು ಗೊತ್ತಾದ ಮೇಲೂ ಆಕೆಯ ನೆನಪಿನಲ್ಲಿ ಉಳಿಯುತ್ತಾನೆ. ಅದು ಪರಿಶುದ್ಧ ಪ್ರೀತಿಯ ಕಥೆ.
78
ಉಸ್ತಾದ್ ಹೋಟೇಲ್
ತಂದೆಯ ಮಾತಿಗೆ ವಿರುದ್ಧ ಹೋಗಿ ಹೊಟೇಲ್ ಮ್ಯಾನೇಜ್ ಮೆಂಟ್ ಕಲಿತ ಯುವಕ ತನ್ನ ಅಜ್ಜನ ಜೊತೆ ಸೇರಿ ಮುಂದೆ ಏನು ಮಾಡುತ್ತಾನೆ ಅನ್ನೋದು ಚಿತ್ರದ ಕಥೆ. ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್, ನಿತ್ಯಾ ಮೆನನ್ ನಟಿಸಿದ್ದಾರೆ.
88
ಹೃದಯಂ
ಇದೊಂದು ಸಿಂಪಲ್ ಲವ್ ಸ್ಟೋರಿ. ಕಾಲೇಜು ದಿನಗಳಲ್ಲಿ ಪ್ರೀತಿಸಿದ ಹುಡುಗಿ ಕೈಕೊಟ್ಟಾಗ ಏನಾಗುತ್ತೆ. ಮುಂದೆ ತನ್ನ ಪತ್ನಿ ಜೊತೆ ಅದೇ ಹಳೇ ಗರ್ಲ್ ಫ್ರೆಂಡ್ ಮದುವೆಗೆ ತೆರಳಿದಾಗ ಅಲ್ಲಿ ಏನು ನಡೆಯುತ್ತೆ ಅನ್ನೋದು ಕಥೆ. ತುಂಬಾ ಸರಳವಾದ ಆದರೆ ಸಖತ್ ಮನರಂಜನೆ ನೀಡುವ ಸಿನಿಮಾ ಇದಾಗಿದೆ.