ಬಾಲಿವುಡ್‌ ನಟರ ಬ್ಯೂಟಿಫುಲ್‌ ಸಹೋದರಿಯರು ಇವರು...

First Published | Jul 27, 2020, 3:55 PM IST

ಸಹೋದರ ಸಹೋದರಿಯರ ಪ್ರೀತಿಯ ಹಬ್ಬ  ರಕ್ಷಾಬಂಧನ. ಈ ಹಬ್ಬವನ್ನು ದೇಶಾದ್ಯಂತ ಆಚರಿಸಲು ಸಿದ್ಧತೆಗಳು ಪ್ರಾರಂಭವಾಗಿವೆ. ಬಾಲಿವುಡ್ ಸೆಲೆಬ್ರೆಟಿಗಳಿಗೂ ಈ ಹಬ್ಬ ವಿಶೇಷ. ಅನೇಕ ನಟರು ಸಹೋದರಿಯರನ್ನು ಹೊಂದಿದ್ದು ಪ್ರತಿವರ್ಷ ತಪ್ಪದೆ ರಾಖಿ ಕಟ್ಟಿಸಿ ಕೊಳ್ಳುತ್ತಾರೆ. ಲೈಮ್‌ ಲೈಟ್‌ನಿಂದ ದೂರ ಇರುವ ಹಿಂದಿ ಸಿನಿಮಾ ಸ್ಟಾರ್‌ಗಳ ಅಕ್ಕ ತಂಗಿಯರು ಇಲ್ಲಿದ್ದಾರೆ.  

ಅಕ್ಷಯ್ ಕುಮಾರ್ ಸಹೋದರಿ ಅಲ್ಕಾ ಕುಮಾರ್ ದೆಹಲಿಯಲ್ಲಿದ್ದಾರೆ.ಅದೇ ಸಮಯದಲ್ಲಿ, ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ನಂದಾ ನಟನಾ ಕ್ಷೇತ್ರದಿಂದ ದೂರವಿದ್ದರೂ, ಸದಾ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ.
undefined
ರಿತಿಕಾ ರಣವೀರ್ ಸಿಂಗ್ ಅಕ್ಕ. ರಣವೀರ್ ಸಹೋದರಿಯನ್ನು ಕಿರಿಯ ತಾಯಿ ಎಂದು ಕರೆಯುತ್ತಾರೆ. ಬಾಲ್ಯದಲ್ಲಿ, ರಿತಿಕಾ ತನ್ನ ತಮ್ಮನಿಗಾಗಿ ಪ್ರತಿದಿನ ಚಾಕೊಲೇಟ್‌ಗಳನ್ನು ತರುತ್ತಿದ್ದಳು. ರಣವೀರ್ ಅಮೆರಿಕದಲ್ಲಿದ್ದಾಗ, ರಿತಿಕಾ ರಾಖಿಯೊಂದಿಗೆ ಖರ್ಚಿಗಾಗಿ ಅವರಿಗೆ ಹಣವನ್ನೂ ಕಳುಹಿಸುತ್ತಿದ್ದರಂತೆ.
undefined
Tap to resize

ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಅರ್ಜುನ್ ಕಪೂರ್ ಸಹೋದರಿಯ ಅನ್ಶುಲಾಗೆ ಬಾಲಿವುಡ್ ಬಗ್ಗೆ ಆಸಕ್ತಿ ಇಲ್ಲ.ಗೂಗಲ್ ಉದ್ಯೋಗಿಯಾಗಿದ್ದ ಅನ್ಶುಲಾ ಹೃತಿಕ್ ರೋಷನ್ HRX ಬ್ರಾಂಡ್ ಕಂಪನಿಯಲ್ಲಿ ಅಪ್‌ರೇಷನ್‌ ಮ್ಯಾನೇಜರ್‌ ಆಗಿಯೂ ಕೆಲಸ ಮಾಡಿದ್ದಾರೆ.
undefined
ರಣಬೀರ್ ಕಪೂರ್ ಅಕ್ಕ ರಿದ್ಧಿಮಾ ಕಪೂರ್ ಸಾಹ್ನಿ ಫ್ಯಾಷನ್ ಉದ್ಯಮದಲ್ಲಿ ಪ್ರಸಿದ್ಧ ಹೆಸರು. ಅವರು ಆಭರಣ ವಿನ್ಯಾಸಕರು. ಸೌಂದರ್ಯದಲ್ಲಿ ರಿದ್ಧಿಮಾ ಯಾವುದೇ ನಾಯಕಿಗಿಂತ ಕಡಿಮೆಯಿಲ್ಲ.
undefined
ವಿವೇಕ್ ಒಬೆರಾಯ್ ಸಹೋದರಿ ಮೇಘನಾ ಒಬೆರಾಯ್ ಪಬ್ಲಿಸಿಟಿಯಿಂದ ದೂರ. ನಟನಾ ಕ್ಷೇತ್ರದಿಂದ ದೂರದಲ್ಲಿರುವ ಮೇಘನಾ ಮುಂಬೈ ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದು ತನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತಾರೆ.
undefined
ಹೃತಿಕ್ ರೋಷನ್ ಅಕ್ಕ ಸುನೈನಾ ರೋಶನ್. ಡಿವೋರ್ಸಿ ಸುನೈನಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದರೆ ಕೀಮೋಥೆರಪಿ ನಂತರ, ಗುಣಮುಖರಾಗಿದ್ದಾರೆ, ಕೈಟ್ಸ್ ಮತ್ತು ಕ್ರೇಜಿ 4 ಚಿತ್ರಗಳಲ್ಲಿ ಸುನೀನಾ ಸಹ-ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
undefined
ಸಲ್ಮಾನ್ ಖಾನ್ ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾ ಇಬ್ಬರೂ ಚಲನಚಿತ್ರ ನಿರ್ಮಾಪಕರು.
undefined
ಸೈಫ್ ಅಲಿ ಖಾನ್ ಸಹೋದರಿ ಸಬಾ ಖಾನ್ ಹೆಚ್ಚು ಪ್ರಸಿದ್ಧರಲ್ಲ. ಸಬಾ ವಜ್ರ ವ್ಯಾಪಾರಿ. ಕೆಲವು ವರ್ಷಗಳ ಹಿಂದೆ ಅವರು ಡೈಮಂಡ್ಚೈನ್‌ ಸಹ ಪ್ರಾರಂಭಿಸಿದ್ದಾರೆ. ಸೋಹಾ ಆಲಿಖಾನ್ ಎಲ್ಲರಿಗೂ ಗೊತ್ತು.
undefined
ಅಭಿಷೇಕ್ ಬಚ್ಚನ್ಸಹೋದರಿ ಶ್ವೇತಾ ಬಚ್ಚನ್ ನಂದಾ ಅವರು ಕರೀನಾ ಕಪೂರ್ ಮತ್ತು ಕರಿಷ್ಮಾ ಕಪೂರ್ ಕಸಿನ್‌ ನಿಖಿಲ್ ನಂದಾ ಅವರನ್ನು ಮದುವೆಯಾಗಿದ್ದಾರೆ. ಫ್ಯಾಷನ್ ಡಿಸೈನರ್ ಆಗಿರುವ ಶ್ವೇತಾ ತಮ್ಮದೇ ಆದ ಫ್ಯಾಷನ್ ಲಕ್ಷುರಿ ಬ್ರಾಂಡ್ ಹೊಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಶ್ವೇತಾ ತಮ್ಮ ಬಾಲ್ಯದ ಗೆಳೆತಿ ಮೋನಿಷಾ ಜೈಸಿಂಗ್ ಅವರೊಂದಿಗೆ MxS ಫ್ಯಾಶನ್ ಬ್ರಾಂಡ್ ಪ್ರಾರಂಭಿಸಿದರು.
undefined
ಅಕ್ಷಯ್ ಕುಮಾರ್ ಸಹೋದರಿ ಅಲ್ಕಾ ಉದ್ಯಮಿ ಸುರೇಂದ್ರ ಹಿರಾನಂದಾನಿಯ ಎರಡನೇಪತ್ನಿ. ನಿರ್ಮಾಣ ಸಂಸ್ಥೆ ಹಿರಾನಂದಾನಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಸುರೇಂದ್ರ .'ಫಗ್ಲಿ' ಚಿತ್ರವನ್ನೂ ನಿರ್ಮಿಸಿದರು. ಅಲ್ಕಾ ಗೃಹಿಣಿ
undefined

Latest Videos

click me!