ಜಾತಕ ಹೊಂದಾಣಿಕೆಯಾಗದಿದ್ರೂ ಪ್ರೀತಿಸಿದ ಹುಡುಗಿಯ ಕೈಹಿಡಿದ ಖ್ಯಾತ ನಟ ಮೋಹನ್‌ ಲಾಲ್‌

First Published | Apr 20, 2024, 11:07 AM IST

ಭಾರತದಲ್ಲಿ ಬಹಳಷ್ಟು ಪ್ರತಿಭಾವಂತ ನಟರಿದ್ದಾರೆ, ಅವರಲ್ಲಿ ಒಬ್ಬರು ಪ್ರಸಿದ್ಧ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ವಿಶ್ವನಾಥನ್.  ಸುಮಾರು ನಾಲ್ಕು ದಶಕಗಳಿಂದ  ಬಣ್ಣದ ಬದುಕಿನಲ್ಲಿರುವ ನಟ  ಮೋಹನ್ ಲಾಲ್ ಅವರು 400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಪದ್ಮಶ್ರೀ (2001) ಮತ್ತು ಪದ್ಮಭೂಷಣ (2019) ನಂತಹ ಪ್ರತಿಷ್ಠಿತ ಗೌರವಗಳನ್ನು ದಕ್ಕಿದೆ.

ಮೋಹನ್‌ಲಾಲ್ ಅವರ ಅತ್ಯುತ್ತಮ ಚಲನಚಿತ್ರಗಳು ಯಾವುದೆಂದರೆ ಹೆಸರಿಸಲು ಅಸಾಧ್ಯ,  ಅಷ್ಟು ತಮ್ಮ ನಟನೆಯಿಂದ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ಆದರೂ ನಟನ ಕೆಲವು ವಿಶೇಷ ಚಿತ್ರಗಳಿವೆ. ಈ ಪಟ್ಟಿಯಲ್ಲಿ ಕಂಪನಿ, ಜನತಾ ಗ್ಯಾರೇಜ್, ರಾಜವಿಂತೆ ಮಕನ್, ಇರುವರ್, ಕಿರೀಡಂ, ಲೂಸಿಫರ್, ದೇವಾಸುರಂ, ವಾನಪ್ರಸ್ಥಂ, ತಾಜ್ವರಂ, ಪುಲಿಮುರುಗನ್, ಒಪ್ಪಂ, ದೃಶ್ಯಂ ಮತ್ತು ಇನ್ನೂ ಅನೇಕ ಸೇರಿವೆ. ಜೀವನದ ಬಹುಪಾಲು, ಮೋಹನ್‌ಲಾಲ್ ಅವರು ದಣಿವರಿಯಿಲ್ಲದೆ ಸಿನೆಮಾಕ್ಕಾಗಿಯೇ ಕೆಲಸ ಮಾಡಿದ್ದಾರೆ ಏಕೆಂದರೆ ಅವರು ಭಾರತದ ಅತ್ಯಂತ ಶಿಸ್ತಿನ ಮತ್ತು ಕಷ್ಟಪಟ್ಟು ದುಡಿಯುವ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ಮಲಯಾಳಂ ಸೂಪರ್‌ಸ್ಟಾರ್  ಮೋಹನ್‌ಲಾಲ್ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಸಮಾಜದ ಮುಂದೆ ತಂದಿಲ್ಲ. ಪತ್ನಿ ಸುಚಿತ್ರಾ ಮೋಹನ್‌ಲಾಲ್‌ನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಇವರು ಜಗತ್ತಿನಲ್ಲಿ ಹೆಚ್ಚು ಬೇಡಿಕೆಯಿರುವ  ಲವ್‌ ಬರ್ಡ್ಸ್ ಗಳೆಂದು ಪರಿಗಣಿಸಲಾಗಿದೆ. ಮೋಹನ್‌ಲಾಲ್ ಮತ್ತು ಸುಚಿತ್ರಾ ಅವರ ಪ್ರೇಮಕಥೆಯ ಬಗ್ಗೆ ಎಲ್ಲರಿಗೂ ತಿಳಿದಿಲ್ಲ.  

Tap to resize

ಮೋಹನ್ ಲಾಲ್ ಅವರ ಪತ್ನಿ ಸುಚಿತ್ರಾ ಮೋಹನ್ ಲಾಲ್ ಚಲನಚಿತ್ರ ನಿರ್ಮಾಪಕಿ. ಚೆನ್ನೈ ಮೂಲದವರು. ಅಂದಿನ ಕಾಲದ ಅತ್ಯಂತ ಜನಪ್ರಿಯ  ತಮಿಳು ನಟರಾಗಿದ್ದ ಮತ್ತು ನಿರ್ಮಾಪಕರಲ್ಲಿ ಒಬ್ಬರಾದ  ಕೆ. ಬಾಲಾಜಿ ಮತ್ತು ಆನಂದವಲ್ಲಿ ಅವರ ಮಗಳು.  ಚಿತ್ರರಂಗದ ಮೇಲಿನ ಪರಸ್ಪರ ಪ್ರೀತಿ  ಇವರಿಬ್ಬರ ಸುಂದರ ಪ್ರೇಮಕಥೆಗೆ ಅಡಿಪಾಯ ಹಾಕಿತು. 

ತಮ್ಮ ವೃತ್ತಿಜೀವನದಲ್ಲಿ, ಮೋಹನ್‌ಲಾಲ್ ಅನೇಕ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ್ದಾರೆ ಅದು ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆಯಿತು. ಮೋಹನ್ ಲಾಲ್ ಖಳನಟನಾಗಿ ನಟಿಸಿದ ಒಂದೋ ಎರಡೋ ಚಿತ್ರಗಳನ್ನು ನೋಡಿದ ಸುಚಿತ್ರಾ ಅವರು ಮೋಹನ್ ಅವರನ್ನು  ದ್ವೇಷಿಸತೊಡಗಿದರು. ಆದರೆ ಕ್ರಮೇಣ ಮೋಹನ್ ನಟನೆಯು ತುಂಬಾ ಚೆನ್ನಾಗಿದೆ ಎಂದು ಸುಚಿತ್ರಾ ಅರಿತುಕೊಂಡರು. ಸಿನೆಮಾ ಪ್ರೇಮಿಯಾಗಿ  ಸುಚಿತ್ರಾ ಅವರು ಮೋಹನ್‌ಲಾಲ್ ಅವರನ್ನು ನಟನಾಗಿ ಮೆಚ್ಚಲು ಮತ್ತು ಗೌರವಿಸಲು ಪ್ರಾರಂಭಿಸಿದರು.  
 

ಮೋಹನ್‌ಲಾಲ್ ಅವರ  ಅಭಿಮಾನಿಯಾದ ನಂತರ, ಸುಚಿತ್ರಾ ಅವರು  ಅವರ ನಟನೆಯ ಹೆಚ್ಚು ಚಲನಚಿತ್ರಗಳನ್ನು ವೀಕ್ಷಿಸಲು ಪ್ರಾರಂಭಿಸಿದರು.  ಅದಾಗಲೇ ಅವರನ್ನು ಇಷ್ಟಪಡಲು ಆರಂಭಿಸಿದ್ದರು.  ಇದರ ಜೊತೆಗೆ ಮೋಹನ್‌ಲಾಲ್‌ಗೆ ಮೆಚ್ಚುಗೆಯ ಪತ್ರಗಳು ಮತ್ತು ಶುಭಾಶಯಗಳನ್ನು ಕಳುಹಿಸಲು ಪ್ರಾರಂಭಿಸಿದರು.  ಅಭಿಮಾನಿಯಾಗಿರುವ ಮಧ್ಯೆ, ವೈಯಕ್ತಿಕವಾಗಿ ಭೇಟಿಯಾದ ನಂತರ ಅವರನ್ನು ಸಂಪೂರ್ಣವಾಗಿ ಅರಿತುಕೊಂಡಳು. ಮೋಹನ್‌ ಮೇಲೆ ಇನ್ನೂ ಹೆಚ್ಚು ಪ್ರೀತಿಯಾಯ್ತ. 

ಸುಚಿತ್ರಾ ಪ್ರಸಿದ್ಧ ನಿರ್ಮಾಪಕ ಕೆ. ಬಾಲಾಜಿ ಅವರ ಮಗಳು, ಹೀಗಾಗಿ ಸಿನಿ ಜಗತ್ತಿನಲ್ಲಿ ಹಲವಾರು ಮಂದಿಯ ಸಂಪರ್ಕಗಳನ್ನು ಹೊಂದಿದ್ದರು. ಪರಿಣಾಮವಾಗಿ, ಒಂದು ದಿನ ಇಬ್ಬರೂ ಕಾಮನ್ ಫ್ರೆಂಡ್‌ ಮೂಲಕ ಭೇಟಿಯಾದರು.  ಸುಚಿತ್ರಾ ಈಗಾಗಲೇ ಮೋಹನ್‌ಲಾಲ್‌ನನ್ನು ಪ್ರೀತಿಸುತ್ತಿದ್ದರು. ನಂತರ ಹಲವು ಕಾಮನ್ ಭೇಟಿಯ ಅವಧಿಯಲ್ಲಿ ಸುಚಿತ್ರಾ  ಬಗ್ಗೆ ಮೋಹನ್‌ಲಾಲ್‌ ಗೂ ಒಲವು ಬೆಳೆಯಲು ಪ್ರಾರಂಭಿಸಿತು. 

ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದ ನಂತರ, ಮೋಹನ್‌ಲಾಲ್ ಮತ್ತು ಸುಚಿತ್ರಾ ತಮ್ಮ ಸಂಬಂಧದ ಬಗ್ಗೆ ಆಯಾ ಕುಟುಂಬಗಳಿಗೆ ತಿಳಿಸಿದರು. ಎರಡೂ ಕುಟುಂಬಗಳು ಮೋಹನ್‌ಲಾಲ್ ಮತ್ತು ಸುಚಿತ್ರಾ ಅವರ ಜಾತಕವನ್ನು ಹೊಂದಿಸಲು ನಿರ್ಧರಿಸಿದವು, ಆದರೆ ದುರದೃಷ್ಟವಶಾತ್,  ಇಬ್ಬರ ಜಾತಕ ಹೊಂದಿಕೆಯಾಗಲಿಲ್ಲ. ಸುಚಿತ್ರಾ ಮತ್ತು ಮೋಹನ್‌ಲಾಲ್‌ ಮದುವೆಯಾಗುವ ಪ್ಲಾನ್‌ಗೆ 'ನೋ' ಹೇಳುವುದನ್ನು ಬಿಟ್ಟು ಎರಡೂ ಕುಟುಂಬಗಳಿಗೆ ಬೇರೆ ದಾರಿ ಇರಲಿಲ್ಲ.

ಸ್ವಲ್ಪ ಸಮಯದ ನಂತರ ಮತ್ತೆ  ಅದೇ ವ್ಯಕ್ತಿ ಜಾತಕ ಸರಿ ಇದೆ.  ಅಂತಿಮವಾಗಿ ಜಾತಕ ಹೊಂದಿಕೆಯಾಗುತ್ತಿದೆ. ಜಾತಕದಲ್ಲಿ ತಪ್ಪಾಗಿದೆ. ಬರೆಯುವಾಗ ತಪ್ಪು ಮಾಡಲಾಗಿದೆ ಎಂದು ಎರಡೂ ಕುಟುಂಬಗಳಿಗೆ ತಿಳಿಸಿದರು. ಇನ್ನೊಮ್ಮೆ ಜಾತಕ ಪರಿಶೀಲನೆ ನಡೆಸಿ ಮೋಹನ್ ಲಾಲ್ ಹಾಗೂ ಸುಚಿತ್ರಾ ಜೋಡಿಯಾಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಮೋಹನ್‌ಲಾಲ್ ಮತ್ತು ಸುಚಿತ್ರಾ ಅವರು ಏಪ್ರಿಲ್ 28, 1988 ರಂದು ವಿವಾಹವಾದರು. ಇದು ಅದ್ದೂರಿ ವಿವಾಹವಾಗಿತ್ತು ಮತ್ತು ಭಾರತೀಯ ಚಲನಚಿತ್ರೋದ್ಯಮದ ಅನೇಕ ಸ್ಟಾರ್‌ಗಳು ಭಾಗವಹಿಸಿದ್ದರು. ಮೋಹನ್‌ಲಾಲ್‌ ಅವರ ಹುಟ್ಟೂರಾದ ತಿರುವನಂತಪುರಂನ ಮುದವನ್‌ಮುಗಲ್‌ನಲ್ಲಿ ಮದುವೆ ನಡೆಯಿತು. 

ಅದ್ಭುತ ದಂಪತಿಗಳಾದ ಮೋಹನ್ ಲಾಲ್ ಮತ್ತು ಸುಚಿತ್ರಾ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.  ಪ್ರಣವ್ ಮೋಹನ್ ಲಾಲ್ ಎಂಬ ಮಗ ಮತ್ತು ವಿಸ್ಮಯಾ ಮೋಹನ್ ಲಾಲ್ ಎಂಬ ಮಗಳು. ಮೋಹನ್‌ಲಾಲ್ ಅವರ ಪುತ್ರ ಪ್ರಣವ್ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಪ್ರಸಿದ್ಧ ತಾರೆ. ಮತ್ತೊಂದೆಡೆ, ಮೋಹನ್‌ಲಾಲ್ ಅವರ ಪುತ್ರಿ, ವಿಸ್ಮಯಾ ಸಹಾಯಕ ಚಲನಚಿತ್ರ ನಿರ್ದೇಶಕಿ ಮತ್ತು ಲೇಖಕಿಯಾಗಿದ್ದಾರೆ.

Latest Videos

click me!