ಪದಚ್ಯುತ ಪ್ರಧಾನಿ ಶೇಕ್ ಹಸೀನಾ ಪಾತ್ರ ಮಾಡಿದ್ದ ನಟಿ ಅರೆಸ್ಟ್, ಪೊಲೀಸ್ ಠಾಣೆಯತ್ತ ಫ್ಯಾನ್ಸ್

Published : May 18, 2025, 09:55 PM IST

ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಕ್ ಹಸೀನಾ ಪಾತ್ರದಲ್ಲಿ ನಟಿಸಿದದ್ದ ನಟಿ ನುಸ್ರತ್‌ನನ್ನು ಢಾಕಾ ಪೊಲೀಸರು ಬಂಧಿಸಿದ್ದಾರೆ. ಥಾಯ್ಲೆಂಡ್‌ಗೆ ಹೊರಟ ನಟಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದೀಗ ನಟಿ ಅಭಿಮಾನಿಗಳು ಪೊಲೀಸ್ ಠಾಣೆಯತ್ತ ಧಾವಿಸುತ್ತಿದ್ದಾರೆ.

PREV
15
ಪದಚ್ಯುತ ಪ್ರಧಾನಿ ಶೇಕ್ ಹಸೀನಾ ಪಾತ್ರ ಮಾಡಿದ್ದ ನಟಿ ಅರೆಸ್ಟ್, ಪೊಲೀಸ್ ಠಾಣೆಯತ್ತ ಫ್ಯಾನ್ಸ್

ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇದೆ. ಪ್ರತಿಭಟನೆ, ಬಂಧನ, ಸರ್ಕಾರದ ವಿರುದ್ಧ ಇದ್ದವರ ಬಂಧನ , ಹಿಂದೂಗಳ ಮೇಲಿನ ದಾಳಿ ಸೇರಿದಂತೆ ಸತತ ಘಟನೆಗಳು ನಡೆಯುತ್ತಿದೆ. ಇದೀಗ ಬಾಂಗ್ಲಾದೇಶದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಕ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ನಟಿ ನುಸ್ರತ್ ಫರಿಯಾ ಅರೆಸ್ಟ್ ಆಗಿದ್ದಾರೆ. ಬಂಗಬಂಧು ಜೀವನಚರಿತ್ರೆಯ ಚಿತ್ರ 'ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್ ಬಯೋಪಿಕ್‌ನಲ್ಲಿ ಶೇಕ್ ಹಸೀನಾ ಪಾತ್ರವನ್ನು ನುಸ್ರತ್ ಮಾಡಿದ್ದರು. 

25

ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಚಿ ನುಸ್ರತ್ ಬಂಧನವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಸರ್ಕಾರ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದ ಕೊಲೆಯತ್ನ ಪ್ರಕರಣದಲ್ಲಿ ನುಸ್ರತ್ ಅವರನ್ನು ಬಂಧಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಕಳೆದ ವರ್ಷದ ಜುಲೈನಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ರಾಜಧಾನಿಯ ವಟಾರ ಪ್ರದೇಶದಲ್ಲಿ ವಿದ್ಯಾರ್ಥಿಯೊಬ್ಬರ ಕೊಲೆಯತ್ನಕ್ಕೆ ಸಂಬಂಧಿಸಿದಂತೆ ನುಸ್ರತ್ ಸೇರಿದಂತೆ 17 ನಟರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ತಿಳಿಸಿದೆ.

35

bdnews24.com ವರದಿ ಮಾಡಿದಂತೆ, ವಟಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಜನ್ ಹಕ್ ಅವರು ಈ ಮಧ್ಯಾಹ್ನ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ."ಕೆಲವು ದಿನಗಳ ಹಿಂದೆ, ನ್ಯಾಯಾಲಯವು ಅವರ ವಿರುದ್ಧ ಕೊಲೆಯತ್ನ ಪ್ರಕರಣ ಸಂಬಂಧ ವಾರೆಂಟ್ ಹೊರಡಿಸಿತ್ತು. ಇದರಂತೆ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. 

45

ಸ್ಥಳೀಯ ಸುದ್ದಿವಾಹಿನಿ ಪ್ರಥಮ್ ಆಲೋ ವೆಬ್‌ಸೈಟ್ ವರದಿ ಮಾಡಿದಂತೆ, ನಟಿ ಥೈಲ್ಯಾಂಡ್‌ಗೆ ಪ್ರಯಾಣಿಸಲು ಹೊರಟಿದ್ದಾಗ ಇಂದು ಬೆಳಿಗ್ಗೆ ವಿಮಾನ ನಿಲ್ದಾಣದ ವಲಸೆ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಲಾಗಿದೆ. ನುಸ್ರತ್ ತಮ್ಮ ನಟನಾ ವೃತ್ತಿಯನ್ನು ಆಶಿಕಿ (2015) ಚಿತ್ರದ ಮೂಲಕ ಆರಂಭಿಸಿದರು, ಅಲ್ಲಿ ಅವರು ಅಂಕುಶ್ ಹಜ್ರಾ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಹೀರೋ 420(2016), ಬಾದ್‌ಶಾ - ದಿ ಡಾನ್ (2016), ಪ್ರೇಮಿ ಓ ಪ್ರೇಮಿ (2017), ಮತ್ತು ಬಾಸ್ 2: ಬ್ಯಾಕ್ ಟು ರೂಲ್ (2017) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

55

ಶೇಕ್ ಹಸೀನಾ ಪಾತ್ರದ ಮೂಲಕ ನಟಿ ನುಸ್ರತ್ ಭಾರಿ ಜನಪ್ರಿಯರಾಗಿದ್ದರು. ಈ ಕುರಿತು ಸಂದರ್ಶನಲ್ಲಿ ಸಂತಸ ವ್ಯಕ್ತಪಡಿಸಿದ್ದರು. ಅವಾಮಿ ಲೀಗ್ ನಾಯಕಿಯ ಪಾತ್ರವನ್ನು ನಿರ್ವಹಿಸಲು ಅವಕಾಶ ಸಿಕ್ಕಿದೆ ಎಂದು ನಂಬಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ನಾನು ಭವಿಷ್ಯದಲ್ಲಿ ಮತ್ತೆ ನಟಿಸದಿದ್ದರೂ, ಈ ಪಾತ್ರವನ್ನು ನಿರ್ವಹಿಸಲು ನನಗೆ ಅವಕಾಶ ಸಿಕ್ಕಿದೆ, ಇದು ನನಗೆ ಅಂತಿಮ ಸಾಧನೆ ಎಂದಿದ್ದರು. 

Read more Photos on
click me!

Recommended Stories