ಚಿತ್ರೀಕರಣ ನಡೆಯುತ್ತಿದ್ದರೂ, ಹಲವು ಪ್ರದೇಶಗಳಲ್ಲಿ ಬ್ಯುಸಿನೆಸ್ ಡೀಲ್ ಗಳು ಮುಗಿದಿವೆ. ಬಾಲಕೃಷ್ಣ ವೃತ್ತಿಜೀವನದಲ್ಲೇ ಅತಿ ಹೆಚ್ಚು ಪ್ರೀ-ರಿಲೀಸ್ ಬ್ಯುಸಿನೆಸ್ ಮಾಡುವ ಸಾಧ್ಯತೆ ಇದೆ ಎಂದು ಚಿತ್ರರಂಗದ ಮೂಲಗಳು ಹೇಳಿವೆ. ಮುಂದಿನ ಶೆಡ್ಯೂಲ್ ಗಾಗಿ ಚಿತ್ರತಂಡ ಜಾರ್ಜಿಯಾಗೆ ತೆರಳಲಿದೆ. ಮೇ ತಿಂಗಳಲ್ಲಿ ಅಲ್ಲಿ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು. ಬಾಲಯ್ಯ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಲು ಚಿತ್ರತಂಡ ಯೋಜಿಸಿದೆ.