ಬೃಹದಾಕಾರದ ಗನ್, ಮನೆ, ಹೆಲಿಕಾಪ್ಟರ್, ಟ್ರೇನ್: ಕುಮಟಾ ಧಾರೇಶ್ವರ ಬೀಚ್‌ನಲ್ಲಿ ಜೂ.ಎನ್‌ಟಿಆರ್‌

Published : Apr 25, 2025, 12:15 PM ISTUpdated : Apr 25, 2025, 12:28 PM IST

ಅನೇಕ ಹುಡುಕಾಟಗಳ ಬಳಿಕ ಪ್ರಶಾಂತ್‌ ನೀಲ್‌ ಹಾಗೂ ಟೀಮ್‌ಗೆ ಕುಮಟಾದ ಧಾರೇಶ್ವರದ ರಾಮನಗಿಂಡಿ ಪ್ರಶಸ್ತವಾಗಿ ಕಂಡುಬಂತು. ವಿಶಾಲವಾದ ಕಡಲತೀರ, ಪಕ್ಕದಲ್ಲಿ ಹಸಿರಿನಿಂದ ಕೂಡಿದ ಗುಡ್ಡ ಇರುವ ಜನಜಂಗುಳಿ ಇಲ್ಲದ ಪ್ರಶಾಂತ ತಾಣವಿದು. 

PREV
15
ಬೃಹದಾಕಾರದ ಗನ್, ಮನೆ, ಹೆಲಿಕಾಪ್ಟರ್, ಟ್ರೇನ್: ಕುಮಟಾ ಧಾರೇಶ್ವರ ಬೀಚ್‌ನಲ್ಲಿ ಜೂ.ಎನ್‌ಟಿಆರ್‌

ಪ್ರಶಾಂತ್‌ ನೀಲ್‌ ಹಾಗೂ ಜೂ. ಎನ್‌ಟಿಆರ್‌ ಕುಮಟಾ ಧಾರೇಶ್ವರ ಸಮೀಪದ ರಾಮನಗಿಂಡಿ ಕಡಲ ಕಿನಾರೆಯಲ್ಲಿ ಬೀಡುಬಿಟ್ಟಿದ್ದಾರೆ. ‘ಡ್ರ್ಯಾಗನ್‌’ ಶೀರ್ಷಿಕೆ ಎನ್ನಲಾದ, ಇನ್ನೂ ಹೆಸರು ಘೋಷಿಸಿರದ ಇವರಿಬ್ಬರ ಕಾಂಬಿನೇಶನ್‌ನ ಬಹುಕೋಟಿ ಬಜೆಟ್‌ ಪ್ಯಾನ್‌ ವರ್ಲ್ಡ್‌ ಸಿನಿಮಾ ಚಿತ್ರೀಕರಣ ಉತ್ತರ ಕನ್ನಡದ ಕಡಲ ಕಿನಾರೆಯಲ್ಲಿ ಭರದಿಂದ ಸಾಗುತ್ತಿದೆ.

25

ನಿರ್ಮಾನುಷವಾಗಿದ್ದ ರಾಮನಗಿಂಡಿ ಸಮುದ್ರ ತೀರದಲ್ಲಿ ಈ ಸಿನಿಮಾಕ್ಕಾಗಿ ಅದ್ದೂರಿ ಸೆಟ್‌ ನಿರ್ಮಿಸಲಾಗಿದೆ. ಬೃಹದಾಕಾರದ ಗನ್, ಮನೆ, ಹೆಲಿಕಾಪ್ಟರ್, ಟ್ರೇನ್ ತಲೆ ಎತ್ತಿವೆ. ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 6 ಗಂಟೆ ತನಕ ನಿರಂತರವಾಗಿ ಚಿತ್ರೀಕರಣ ನಡೆಯುತ್ತಿದೆ. ಇನ್ನೂ ಹಲವು ದಿನಗಳ ಕಾಲ ಇಲ್ಲಿ ಶೂಟಿಂಗ್‌ ನಡೆಯುತ್ತದೆ ಎನ್ನಲಾಗಿದೆ.

35

ಅನೇಕ ಹುಡುಕಾಟಗಳ ಬಳಿಕ ಪ್ರಶಾಂತ್‌ ನೀಲ್‌ ಹಾಗೂ ಟೀಮ್‌ಗೆ ಕುಮಟಾದ ಧಾರೇಶ್ವರದ ರಾಮನಗಿಂಡಿ ಪ್ರಶಸ್ತವಾಗಿ ಕಂಡುಬಂತು. ವಿಶಾಲವಾದ ಕಡಲತೀರ, ಪಕ್ಕದಲ್ಲಿ ಹಸಿರಿನಿಂದ ಕೂಡಿದ ಗುಡ್ಡ ಇರುವ ಜನಜಂಗುಳಿ ಇಲ್ಲದ ಪ್ರಶಾಂತ ತಾಣವಿದು. ಈ ಗುಡ್ಡದ ಕೆಳಭಾಗದಲ್ಲೇ ಇದೀಗ ಅದ್ಧೂರಿ ಸೆಟ್ ಹಾಕಲಾಗಿದೆ.

45

ಸುಮಾರು ಒಂದು ತಿಂಗಳಿನಿಂದ ಇಲ್ಲಿ ಸೆಟ್ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಈಗ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕ್ಲೈಮ್ಯಾಕ್ಸ್ ಹಾಗೂ ಎರಡು ಹಾಡುಗಳ ಚಿತ್ರೀಕರಣವೂ ಇಲ್ಲೇ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

55

ಈ ಚಿತ್ರಕ್ಕಾಗಿ ಜೂ. ಎನ್‌ಟಿಆರ್‌ ಕಳೆದ ಐದು ತಿಂಗಳಲ್ಲಿ 18 ಕೆಜಿ ತೂಕವನ್ನು ಇಳಿಸಿಕೊಂಡು ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ದೊಡ್ಡ ಬಜೆಟ್‌ ಅಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದ್ದು, ಮುಂದಿನ ವರ್ಷ ತೆರೆ ಕಾಣುವ ಸಾಧ್ಯತೆಯಿದೆ.

Read more Photos on
click me!

Recommended Stories