ಇತ್ತೀಚಿನ ಭಾರತೀಯ ಚಲನಚಿತ್ರಗಳು ಕೋಟಿ ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಪೈಪೋಟಿಗೆ ಬಿದ್ದಿವೆ. ಸೂಪರ್‌ಸ್ಟಾರ್ ನಟರ ಹೆಚ್ಚಿನ ಸಿನಿಮಾಗಳ ಗಳಿಕೆ 300, 500, 1000 ಕೋಟಿಯನ್ನು ಮೀರುತ್ತದೆ. ಬಾಹುಬಲಿ, ಪಠಾಣ್, ಜವಾನ್, ಜೈಲರ್, ಕಾಂತಾರ ಹೀಗೆ ಹಲವು ಸಿನಿಮಾಗಳು ಹಲವು ಕೋಟಿ ಗಳಿಸಿವೆ. ಮಾತ್ರವಲ್ಲ ಪ್ರೇಕ್ಷಕರಿಂದ ಮೆಚ್ಚುಗೆಯನ್ನೂ ಗಳಿಸಿವೆ.