ಜಗತ್ತಿನ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನ್ ಸ್ಥಾನ ಪಡೆದಿದ್ದಾರೆ.
ಈ ಸುದ್ದಿಯನ್ನು ನಟ ಆಯುಷ್ಮಾನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಲಿಸ್ಟ್‌ನಲ್ಲಿ ಪ್ರಧಾನಿ ಹೆಸರೂ ಇರುವುದರಿಂದ ಅವರೊಂದಿಗೂ ಶೇರ್ ಮಾಡಿಕೊಂಡಿದ್ದಾರೆ.
ಟೈಮ್ಸ್‌ನ ಜಗತ್ತಿನ 100 ಪ್ರಭಾವಶಾಲಿ ಜನರ ಪಟ್ಟಿ ಬಿಡುಗಡೆಯಾಗಿದೆ. ಇದರ ಭಾಗವಾಗಿರುವುದು ನನ್ನ ಹೆಮ್ಮೆ ಎಂದು ಬರೆದಿದ್ದಾರೆ.
ನಟ ಪೋಸ್ಟ್ ಹಾಕುತ್ತಿದ್ದಂತೆ ಶುಭಾಶಯಗಳ ಸುರಿಮಳೆ ಹರಿದುಬಂದಿದೆ.
ನಟಿ ದೀಪಿಕಾ ಅವರೂ ಆಯುಷ್ಮಾನ್‌ಗೆ ಶುಭಾಶಯ ಪತ್ರ ಬರೆದಿದ್ದಾರೆ.
ವಿಕ್ಕಿ ಡೋನರ್ ಸಿನಿಮಾದಲ್ಲಿ ಸ್ಪರ್ಮ್ ಡೋನರ್ ಪಾತ್ರದಲ್ಲಿ ಕಾಣಿಸಿಕೊಂಡ ನಟ ನಂತರ ಬಹಳಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಲದಲ್ಲಿ ಬಾಲ್ಡ್‌ಮ್ಯಾನ್ ಆಗಿ ಮಾಡಿದ ಪಾತ್ರ ಮರೆಯಲಾಗದ್ದು. ಬಹಳಷ್ಟು ಸಮಾಜಮುಖಿ ಸಂದೇಶ ನೀಡುವ ಸಿನಿಮಾಗಳನ್ನೇ ಮಾಡಿದ್ದು ವಿಶೇಷ.
Suvarna News