ನೆಗೆಟಿವ್‌ ಜನರಿಂದ, ಸ್ವ-ಟೀಕೆಯಿಂದ ಆದಷ್ಟೂ ದೂರವಿರಿ ಎಂದಿದ್ಯಾಕೆ ನಟಿ ಕತ್ರಿನಾ ಕೈಫ್!

Published : Mar 13, 2024, 09:38 PM IST

ನಟಿ ಕತ್ರಿನಾ ಕೈಫ್ (Katrina Kaif) ಮಾತನಾಡಿರುವ ವೀಡಿಯೋವೊಂದು ವೈರಲ್ ಆಗಿದೆ. ನಮ್ಮ ಬಗ್ಗೆ ಕೀಳರಿಮೆ ಜತೆಗೆ ನಮ್ಮಲ್ಲಿ ಸ್ವ-ಟೀಕೆ ಇದ್ದರಂತೂ ಮುಗಿದೇ ಹೋಯ್ತು. ನಾವು ಮಾಡಿದ್ದೆಲ್ಲವೂ ನಮಗೆ ತಪ್ಪೇ ಆಗಿ ಕಾಣಿಸಲು ಶುರುವಾಗುತ್ತದೆ. ನಾವು ಮಾಡುವ ಮೊದಲೇ ಅದರಲ್ಲಿ ತಪ್ಪು ಹುಡುಕಲು ಪ್ರಾರಂಭಿಸುತ್ತೇವೆ. 

PREV
18
ನೆಗೆಟಿವ್‌ ಜನರಿಂದ, ಸ್ವ-ಟೀಕೆಯಿಂದ ಆದಷ್ಟೂ ದೂರವಿರಿ ಎಂದಿದ್ಯಾಕೆ ನಟಿ ಕತ್ರಿನಾ ಕೈಫ್!

ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾತನಾಡಿರುವ ವೀಡಿಯೋ ಒಂದು ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಕತ್ರಿನಾ 'ನಾವು ಕೆಲಸ ಮಾಡುವುದನ್ನು, ನಮಗೆ ಸಕ್ಸಸ್ ಸಿಗುವುದನ್ನು ತಡೆಯುವುದು ನಮ್ಮ ನೆಗೆಟಿವಿಟಿ, ನಗೆಟಿವಿಟಿ ಸ್ವಭಾವದ ಜನರು, ಸೆಲ್ಫ್ ಡೌಟ್, ನಮ್ಮಿಂದಲೇ ಬರುವ ಟೀಕೆ. 
 

28

ಆದರೆ, ಅದನ್ನೆಲ್ಲ ಲೆಕ್ಕಿಸದೇ ನಾವು ನಮ್ಮ ಕೆಲಸದ ಕಡೆ ಮಾತ್ರ ಗಮನ ಹರಿಸಬೇಕು. ಆಗ ನಮಗೆ ಯಾವುದೇ ರೀತಿಯಲ್ಲಿ ಕೆರಿಯರ್‌ಗೆ ಹಿನ್ನಡೆ ಆಗುವುದಿಲ್ಲ. ನಮ್ಮ ವೃತ್ತಿಗೆ ಕುತ್ತು ತರುವ ಯಾವುದೇ ಸಂಗತಿಯನ್ನು ನಾವು ಆದಷ್ಟೂ ತಡೆಹಿಡಿಯಬೇಕು' ಎಂದಿದ್ದಾರೆ. 
 

38

ನಮಗೆ ನಮ್ಮ ಬಗ್ಗೆ ಯಾವತ್ತೂ ಸಂದೇಹ ಇರಲೇಬಾರದು. ಈ ಜಗತ್ತಿನಲ್ಲಿ ನಮ್ಮಂತೆ ಯಾರೂ ಇನ್ನೊಬ್ಬರು ಇರುವುದಿಲ್ಲ. ಮುಖದ ಹೋಲಿಕೆಯಲ್ಲಿ ಇರಬಹುದಾದರೂ ವ್ಯಕ್ತಿತ್ವದ ಮೂಲಕ ನಾವು ಎಲ್ಲರಿಗಿಂತ ಭಿನ್ನವೇ ಆಗಿದ್ದೇವೆ. 
 

48

ನಾವು ನಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಂಡರೆ ಯಾರೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಯಾರು ಏನೇ ಟಿಪ್ಸ್ ಕೊಟ್ಟರೂ, ಯಾರು ನಮ್ಮನ್ನು ಎಷ್ಟೇ ಏತ್ತರಕ್ಕೆ ಪುಶ್ ಮಾಡಿದರೂ ನಾವು ನಮ್ಮಿಂದ ಅದು ಸಾಧ್ಯವಿಲ್ಲ ಎಂದುಕೊಂಡರೆ ಅದನ್ನು ಸಾಧಿಸುವುದಾದರೂ ಹೇಗೆ?
 

58

ನಮ್ಮ ಬಗ್ಗೆ ಕೀಳರಿಮೆ ಜತೆಗೆ ನಮ್ಮಲ್ಲಿ ಸ್ವ-ಟೀಕೆ ಇದ್ದರಂತೂ ಮುಗಿದೇ ಹೋಯ್ತು. ನಾವು ಮಾಡಿದ್ದೆಲ್ಲವೂ ನಮಗೆ ತಪ್ಪೇ ಆಗಿ ಕಾಣಿಸಲು ಶುರುವಾಗುತ್ತದೆ. ನಾವು ಮಾಡುವ ಮೊದಲೇ ಅದರಲ್ಲಿ ತಪ್ಪು ಹುಡುಕಲು ಪ್ರಾರಂಭಿಸುತ್ತೇವೆ. 
 

68

ನಮ್ಮಿಂದ ತಪ್ಪುಗಳು ನಡೆಯುವುದಿಲ್ಲ ಎಂದಲ್ಲ. ಆದರೆ ಅದೂ ಕೂಡ ಆ ಕೆಲಸದ, ಸಾಧನೆಯ ಒಂದು ಭಾಗವೇ ಆಗಿದೆ ಎಂಬುದನ್ನು ನಾವು ಯಾಕೆ ಮರೆತುಬಿಡುತ್ತೇವೆ. ನಮ್ಮ ವೃತ್ತಿ ಹಾಗು ವೃತ್ತಿಜೀವನ ಎರಡರಲ್ಲೂ ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡದೇ ಮುಂದುವರೆಯಬೇಕು ಅಷ್ಟೇ.

78

ನೆಗೆಟಿವಿಟಿ ನಮ್ಮ ಸಮೀಪಕ್ಕೂ ಸುಳಿಯದಂತೆ ನೋಡಿಕೊಳ್ಳಬೇಕು. ಏಕೆಂದರೆ, ನಾವು ನೆಗೆಟಿವಿಟಿಗೆ ಒಳಗಾದರೆ ನಮ್ಮಿಂದ ಯಾವ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅದು ಕೆಲಸ ಮಾಡುವ ಉತ್ಸಾಹವನ್ನೇ ನುಂಗಿಬಿಡುತ್ತದೆ. 

88

ಒಟ್ಟಿನಲ್ಲಿ, ಇಂಗ್ಲೆಂಡಿನಿಂದ ಭಾರತಕ್ಕೆ ಬಂದು ಇಲ್ಲಿನ ಹುಡುಗ ವಿಕ್ಕಿ ಕೌಶಾಲ್‌ರನ್ನು ಮದುವೆಯಾಗಿ ಈಗ ಭಾರತದ ಸೊಸೆ ಎನಿಸಿಕೊಂಡಿರುವ ಕತ್ರಿನಾ ಕೈಫ್ ಆಗಾಗ ತಮ್ಮ ಸಂದರ್ಶನಗಳಲ್ಲಿ ತಮ್ಮ ಜೀವನಾನುಭವ ಹಾಗೂ ಟಿಪ್ಸ್‌ಗಳನ್ನು ಹಂಚಿಕೊಳ್ಳುತ್ತಾರೆ.

Read more Photos on
click me!

Recommended Stories