ಸೌತ್‌ ನಟಿ ನಯನತಾರ ಅವರ ಚನ್ನೈ ಐಷರಾಮಿ ಮನೆ ಝಲಕ್ ಕಣ್ತುಂಬಿಕೊಳ್ಳಿ ಒಮ್ಮೆ!

First Published | Sep 7, 2023, 5:05 PM IST

ಟಾಲಿವುಡ್ ನಟಿ ನಯನತಾರಾ (Nayanthara) ಹಲವಾರು ಮನೆಗಳ ಒಡತಿ, ಮುಖ್ಯವಾಗಿ ಹೈದರಾಬಾದ್‌ನಲ್ಲಿ ಎರಡು ಐಷಾರಾಮಿ ಮನೆಗಳು ಮತ್ತು ಚೆನ್ನೈನಲ್ಲಿ ಎರಡು 4 BHK ಮನೆ, ಜೊತೆಗೆ ಕೇರಳದಲ್ಲಿಪೋಷಕರ ಮನೆಯೂ ಇದೆ. ಅವರ ಚೆನ್ನೈನ ಐಷರಾಮಿ ಮನೆಯ ಒಂದು ನೋಟ ಇಲ್ಲಿದೆ.

ಶಾರುಖ್‌ ಖಾನ್‌ರ ಜವಾನ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿರುವ  ಲೇಡಿ ಸೂಪರ್‌ಸ್ಟಾರ್ ನಯನತಾರಾ  ಚೆನ್ನೈನಲ್ಲಿ ಅದ್ದೂರಿ ಅಪಾರ್ಟ್‌ಮೆಂಟ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ.

ಪತಿ ವಿಘ್ನೇಶ್ ಶಿವನ್ ಮತ್ತು ಇಬ್ಬರು ಮಕ್ಕಳೊಂದಿಗೆ ಚೆನ್ನೈ ಪೋಯಸ್ ಗಾರ್ಡನ್ ಪ್ರದೇಶದಲ್ಲಿ 4BHK ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಾರೆ. ಈ ಪ್ರದೇಶ ರಜನೀಕಾಂತ್ ಮತ್ತು ಧನುಷ್ ಅವರಂತಹ ಸೆಲೆಬ್ರಿಟಿಗಳ ಮನೆಗಳನ್ನು ಹೊಂದಿದೆ.

Tap to resize

 ನಯನತಾರಾ ಮತ್ತು ವಿಘ್ನೇಶ್ ತಮ್ಮ ಹೆಚ್ಚಿನ ಸಮಯವನ್ನು ಬೃಹತ್ ಕಿಟಕಿಯ ಬಳಿ ಒಟ್ಟಿಗೆ ಕಳೆಯುವುದನ್ನು ಹಲವು ಬಾರಿ ನೋಡಲಾಗಿದೆ ಇದು ಅಂತ್ಯವಿಲ್ಲದ ಸಮುದ್ರ ನೋಟವನ್ನು ಹೊಂದಿದೆ.

ನಯನಾತಾರ ಅವರ ಈ ಲಕ್ಷುರಿಯಸ್‌ ಮನೆ ಬೃಹತ್ ಕಿಟಕಿಗಳ ಜೊತೆ, ತರವಾರಿ ಸಸ್ಯಗಳು ಮತ್ತು ಅತ್ಯಂತ ಆರಾಮದಾಯಕವಾದ ಸೋಫಾಗಳಿಂದ ಆವೃತವಾಗಿದೆ.

ಮನೆಯ ಕೆಲವು ವಿಭಾಗಗಳು ಮರದ ನೆಲಹಾಸನ್ನು ಹೊಂದಿವೆ. ವಿಘ್ನೇಶ್ ಅವರು ಇತ್ತೀಚಿನ ಓಣಂ ಪೋಸ್ಟ್ ಅದರ ಒಂದು ನೋಟವನ್ನು ನೀಡಿದೆ. ಈ ಫೋಟೋವನ್ನು ವಿಘ್ನೇಶ್‌ ಹಂಚಿಕೊಂಡಿದ್ದಾರೆ.

ಮನೆಯು ಯಾವುದೇ ಪರದೆಯಿಲ್ಲದ ಓಪನ್‌ ಅಡುಗೆ ಮನೆಯನ್ನು ಸಹ ಹೊಂದಿದೆ. ಅಲ್ಲಿ ದಂಪತಿ ಕೆಲವು ರುಚಿಕರವಾದ ಭಕ್ಷ್ಯಗಳನ್ನು ತಯಾರಿಸುತ್ತಾರೆ.

ನಯನತಾರಾ ಅವರ ಮನೆಯಲ್ಲಿ ವಿವಿಧ ಸಸ್ಯಗಳು ಮತ್ತು ಮರಗಳು ಮತ್ತು ಆಧುನಿಕ ಲೌಂಜ್ ಚೇರ್‌ಗಳನ್ನು ಹೊಂದಿರುವ ಉದ್ಯಾನವನ ಇವೆ.

ಇಡೀ ಮನೆಯ ಗೋಡೆಗಳನ್ನು ನ್ಯೂಟ್ರಲ್‌ ಶೆಡ್‌ಗಳಲ್ಲಿ ಅಲಂಕರಿಸಲಾಗಿದೆ, ಇದು ಒತ್ತಡ (Stress) ಹಾಗೂ ಬ್ಯುಸಿ ದಿನದ ನಂತರ ಚಿಲ್‌ ಮಾಡಲು ಸೂಕ್ತ  ಸ್ಥಳವಾಗಿದೆ.

ನವೆಂಬರ್ 2021ರಲ್ಲಿ, ನಯನತಾರಾ ಚೆನ್ನೈನಲ್ಲಿ ಎರಡು ಮನೆಗಳನ್ನು ಖರೀದಿಸಿದರು, ಅವುಗಳಲ್ಲಿ ಒಂದು ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಸೇರಿ ಖರೀದಿಸಿದ್ದಾರೆ ಎನ್ನಲಾಗಿದೆ. ಈ ಎರಡು ಆಸ್ತಿಗಳ ಒಟ್ಟು ವೆಚ್ಚ ಸುಮಾರು 100 ಕೋಟಿ ರೂ ಎಂದು ಅಂದಾಜಿಸಲಾಗಿದೆ. 

Latest Videos

click me!