ನಟಿ ಅನುಷ್ಕಾ ಶೆಟ್ಟಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಅರುಂಧತಿಯಲ್ಲಿ ಅನುಷ್ಕಾ ಅವರ ಬಾಲ್ಯದ ಪಾತ್ರದಲ್ಲಿ ಒಬ್ಬ ಪುಟ್ಟ ಹುಡುಗಿ ಅದ್ಭುತವಾಗಿ ನಟಿಸಿ ಎಲ್ಲರ ಮನಗೆದ್ದಿದ್ದಳು. ಜೇಜಮ್ಮ ಪಾತ್ರದಲ್ಲಿ ಅತ್ಯಂತ ಗಂಭೀರವಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಳು. ಆದರೆ, ಈಗ ಆ ಪುಟ್ಟ ಹುಡುಗಿ ಹೇಗಿದ್ದಾರೆ ಎಂದು ನೋಡಿದರೆ ನೀವು ನಿಜಕ್ಕೂ ಶಾಕ್ ಆಗ್ತೀರ. ಏಕೆಂದರೆ ಆಕೆಯೀಗ ಸುಂದರ ಯುವತಿಯಾಗಿ ಬದಲಾಗಿದ್ದಾರೆ. ಅನುಷ್ಕಾ ನಟನೆಯ ಮೊದಲ ಮಹಿಳಾ ಪ್ರಧಾನ ಚಿತ್ರ ಅರುಂಧತಿ. ಈ ಚಿತ್ರ 2009 ರಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಗಳಿಸಿತ್ತು.