ಮಮತಾ ಮೋಹನ್ ದಾಸ್ ಅವರು ಮಾತನಾಡುತ್ತಾ, ಮೊದಲು ನಾನು ಅರುಂಧತಿ ಚಿತ್ರಕ್ಕೆ ಒಪ್ಪಿಕೊಂಡೆ. ಆದರೆ, ಕೆಲವರು ಅದು ಒಳ್ಳೆಯ ನಿರ್ಮಾಣ ಸಂಸ್ಥೆಯಲ್ಲ. ಅವರ ಬಳಿ ಬಜೆಟ್ ಇಲ್ಲ ಎಂದು ನೆಗೆಟಿವ್ ಆಗಿ ಹೇಳಿದರು. ಇದರಿಂದ ಅವರ ಮಾತು ಕೇಳಿ ನಾನು ಆ ಚಿತ್ರದಿಂದ ಹೊರಬಂದೆನು. ಆದರೂ, ಶ್ಯಾಮ್ ಪ್ರಸಾದ್ ರೆಡ್ಡಿ ನನಗಾಗಿ ತುಂಬಾ ಪ್ರಯತ್ನಿಸಿದರು. ಆದರೆ ನಾನು ನಟಿಸಲು ಸಾಧ್ಯವಾಗಲ್ಲ ಎಂದು ಹೇಳಿದೆ. ಇದೇ ವೇಳೆಗೆ ಜ್ಯೂ.ಎನ್‌ಟಿಆರ್ ನಟನೆಯ ಯಮದೊಂಗ ಸಿನಿಮಾದ ಆಫರ್ ಬಂದಿತ್ತು ಎಂದು ತಿಳಿಸಿದರು.