ಟವೆಲ್‌ನಲ್ಲಿರುವ ಸಲ್ಮಾನ್ ಫೋಟೋ ಶೇರ್‌ ಮಾಡಿದ ಅರ್ಪಿತಾ ಖಾನ್ !

First Published | Mar 7, 2021, 4:30 PM IST

ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್ ತಮ್ಮ ತಂಗಿ ಅರ್ಪಿತಾಗೆ ತುಂಬಾ ಕ್ಲೋಸ್‌ ಆಗಿದ್ದಾರೆ. ಇಬ್ಬರು ಬಹಳ ಆತ್ಮೀಯ ಬಾಡಿಂಗ್‌ ಶೇರ್‌ ಮಾಡಿಕೊಳ್ಳುತ್ತಾರೆ. ಸಲ್ಮಾನ್ ಮತ್ತು ಅರ್ಪಿತಾರ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸುಮಾರು 7 ವರ್ಷ ಹಳೆಯದು  ಇದು ಅರ್ಪಿತಾ ಮದುವೆಯಾದ ಸಮಯದ್ದಾಗಿದೆ. ಈ ಫೋಟೋದಲ್ಲಿ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಜೊತೆ ಟವೆಲ್ ಅನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಡಿಸೈನರ್ ಕ್ರೀಮ್ ಕಲರ್ ಲೆಹೆಂಗಾದಲ್ಲಿ ಧರಿಸಿರುವ ಅರ್ಪಿತಾ ವಿಥೌಟ್‌ ಮೇಕಪ್‌ ಕಂಡುಬಂದಿದ್ದಾರೆ.
 

ಅಣ್ಣ ತಂಗಿಯ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ. ನೆಟ್ಟಿಗ್ಗರು ಸಹ ಇದರ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.ಈ ಫೊಟೋ ಅರ್ಪಿತಾರ ವಿವಾಹದ ಸಮಯದಲ್ಲಿ ಕ್ಲಿಕ್‌ ಮಾಡಿದ್ದಾಗಿದೆ.
ಈ ಫೋಟೋವನ್ನು ಹಂಚಿಕೊಳ್ಳುತ್ತಾ, ಅರ್ಪಿತಾ ಬಹಳ ಸುಂದರವಾದ ನೆನಪುಗಳು ಎಂದು ಬರೆದಿದ್ದಾರೆ.
Tap to resize

ಸಲ್ಮಾನ್ ಮತ್ತು ತಂಗಿ ಅರ್ಪಿತಾರ ಫೋಟೋಗೆ ಒಬ್ಬರು 'ಬಾಯ್‌ಗೆ ಏನಾಯಿತು? ಎಂದು ಕಾಮೆಂಟ್‌ ಮಾಡಿದ್ದಾರೆ, ಇನ್ನೊಬ್ಬರು ಹೊಟ್ಟೆ! ಎಂದು ಕಾಮೆಂಟ್‌ ಮಾಡಿದರೆ ಮತ್ತೊಬ್ಬ ವ್ಯಕ್ತಿ 6 ಪ್ಯಾಕ್ಸ್‌ ಕಾಣೆ ಆಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.
ಅರ್ಪಿತಾ ಆಯುಷ್ ಶರ್ಮಾರನ್ನು 2014 ರ ನವೆಂಬರ್‌ನಲ್ಲಿ ಹೈದರಾಬಾದ್‌ನ ತಾಜ್ ಫಲಕ್ನುಮಾ ಅರಮನೆಯಲ್ಲಿ ವಿವಾಹವಾದರು. ನಂತರ ಖಾನ್ ಫ್ಯಾಮಿಲಿ ರಿಸೆಪ್ಷನ್‌ ನವೆಂಬರ್ 21 ರಂದು ಹೋಟೆಲ್ ತಾಲ್ ಲ್ಯಾಂಡ್ಸ್‌ನಲ್ಲಿ ಏರ್ಪಡಿಸಿತ್ತು.
ಅರ್ಪಿತಾರ ಮದುವೆಯ ರಿಸೆಪ್ಷನ್‌ಗೆ ಪಿಎಂ ನರೇಂದ್ರ ಮೋದಿ, ಶಾರುಖ್ ಖಾನ್, ಅಮೀರ್ ಖಾನ್, ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಸಾನಿಯಾ ಮಿರ್ಜಾ, ಕತ್ರಿನಾ ಕೈಫ್ ಮಂತಾದ ಬಾಲಿವುಡ್, ರಾಜಕೀಯ ಮತ್ತು ಬ್ಯುಸಿನೆಸ್‌ ಜಗತ್ತಿನ ಅನೇಕ ಸೆಲೆಬ್ರೆಟಿಗಳು ಹಾಜರಾಗಿದ್ದರು
ಅರ್ಪಿತಾ ಮತ್ತು ಆಯುಷ್ ಮೊದಲ ಬಾರಿಗೆ 2013 ರಲ್ಲಿ ಪಾರ್ಟಿಯಲ್ಲಿ ಭೇಟಿಯಾದರು. ಕಾಮನ್‌ ಫ್ರೆಂಡ್‌ ಮೂಲಕ ಪರಿಚಯವಾದ ಅರ್ಪಿತಾರನ್ನು ಆಯುಷ್ ಮೊದಲ ನೋಟದಲ್ಲೇ ಪ್ರೀತಿಸಲು ಪ್ರಾರಂಭಿಸಿದರು.
ಹಲವು ಭೇಟಿ ನಂತರ, ಆಯುಷ್ ಪಾರ್ಟಿಯಲ್ಲಿ ಎಲ್ಲರ ಮುಂದೆ ಮೊಣಕಾಲೂರಿ ಅರ್ಪಿತಾರಿಗೆ ಪ್ರಫೊಸ್‌ ಮಾಡಿದ್ದರು.
ಆಯುಷ್ ಶರ್ಮಾ ಒಬ್ಬ ಉದ್ಯಮಿ ಮತ್ತು ರಾಜಕೀಯ ಕುಟುಂಬಕ್ಕೆ ಸೇರಿದವರು. ಅವರ ತಂದೆ ಅನಿಲ್ ಶರ್ಮಾ ಹಿಮಾಚಲ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇದಲ್ಲದೆ, ಅವರ ಅಜ್ಜ ಸುಖ್ರಾಮ್ ಶರ್ಮಾ ರಾಜಕೀಯದಲ್ಲಿ ಪ್ರಸಿದ್ಧ ಹೆಸರು. ಸುಖ್ರಾಮ್ ಯುಪಿಎ ಸರ್ಕಾರದಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದರು.
ಅರ್ಪಿತಾ ಅವರನ್ನು 1981 ರಲ್ಲಿ ಸಲೀಮ್ ಖಾನ್ ದತ್ತು ಪಡೆದರು. ಬೆಳಗ್ಗೆ ಸಲೀಂ ತನ್ನ ಹೆಂಡತಿಯೊಂದಿಗೆ ವಾಕ್ ಹೋದಾಗ, ರಸ್ತೆ ಬದಿಯಲ್ಲಿ ಮಲಗಿದ್ದ ಒಬ್ಬ ಮಹಿಳೆ ಬಳಿ ಕುಳಿತು ಅಳುತ್ತಿದ್ದ ಪುಟ್ಟ ಹುಡುಗಿ ನೋಡಿದ ಸಲೀಮ್ ಖಾನ್ ತನ್ನ ಮನೆಗೆ ಕರೆತಂದರು.ನಂತರ ಅವರು ಮತ್ತು ಅವರ ಎರಡನೆಯ ಹೆಂಡತಿ ಹೆಲೆನ್ಅವಳನ್ನು ದತ್ತು ಪಡೆದರು.
ಆ ಸಮಯದಲ್ಲಿ, ಇಂದೋರ್‌ನ ಹೋಲ್ಕರ್ ಕಾಲೇಜಿನಲ್ಲಿ ಸಲೀಂ ಅವರ ಜೊತೆಗಾರರಾಗಿದ್ದ ಶರದ್ ಜೋಶಿ ಕೂಡಇದ್ದರು. ಸಲೀಂ ಶರದ್ ಜೋಶಿಗೆ ಮಗಳಿಗೆ ಹೆಸರಿಡುವಂತೆ ಕೇಳಿಕೊಂಡರು. ಈ ಹುಡುಗಿಯನ್ನು ನಿಮಗೆ ಅರ್ಪಿಸಲಾಗಿದೆ, ಆದ್ದರಿಂದ ಇವಳ ಹೆಸರು 'ಅರ್ಪಿತಾ' ಆಗಿರಬೇಕು ಎಂದು ಹೇಳಿದರು.
ಅರ್ಪಿತಾ ಖಾನ್ 5 ಒಡಹುಟ್ಟಿದವರಲ್ಲಿ ಕಿರಿಯವಳು. ಲಂಡನ್ ಕಾಲೇಜ್ ಆಫ್ ಫ್ಯಾಷನ್ನಿಂದ ಫ್ಯಾಷನ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್ಮೆಂಟ್ ಪದವಿ ಪಡೆದ ಅರ್ಪಿತ್. ಪ್ರಸ್ತುತ ಮುಂಬೈನ ಒಳಾಂಗಣ ವಿನ್ಯಾಸ ಸಂಸ್ಥೆಯಲ್ಲಿ ವಾಸ್ತುಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅರ್ಪಿತಾ ಮತ್ತು ಆಯುಷ್ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಮಗಳು ಆಯತ್‌ ಮತ್ತು ಮಗ ಹೆಸರು ಅಹಿಲ್. ಸಲ್ಮಾನ್ ಖಾನ್ ಅವರ ಜನ್ಮದಿನವಾದ ಡಿಸೆಂಬರ್ 27, 201 1 ರಂದು ಆಯತ್ ಜನಿಸಿದ್ದು.
ಸಹೋದರಿ ಅರ್ಪಿತಾಳ ವಿವಾಹದ ಸಂದರ್ಭದಲ್ಲಿ ಸಲ್ಮಾನ್, ಅರ್ಬಾಜ್ ಮತ್ತು ಸೊಹೈಲ್ ಖಾನ್ .

Latest Videos

click me!