ಲಿಗರ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಪುಷ್ಪಾ ನಟಿ ರಶ್ಮಿಕಾ ಮಂದಣ್ಣ ಗೋವಾದಲ್ಲಿದ್ದಾರೆ. ಟಾಲಿವುಡ್‌ನ ಕ್ಯೂಟ್ ಜೋಡಿ 2022ನ್ನು ಜೊತೆಯಾಗಿ ಸ್ವಾಗತಿಸೋಕೆ ಸಿದ್ಧರಾಗಿದ್ದಾರೆ.
28
ಲಿಗರ್ ಸಿನಿಮಾದಿಂದ ಸುದ್ದಿಯಲ್ಲಿರೋ ವಿಜಯ್ ದೇವರಕೊಂಡ ಅವರು ಈ ವರ್ಷದ ಕೊನೆಯ ದಿನವನ್ನು ಗೆಳತಿ ರಶ್ಮಿಕಾ ಜೊತೆ ಗೋವಾದಲ್ಲಿ ಕಳೆಯುತ್ತಿದ್ದಾರೆ.
38
ಅವರಿಬ್ಬರೂ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದ್ದರೂ ಈ ಸ್ಟಾರ್‌ಗಳು ಮಾತ್ರ ಪರಸ್ಪರ ನಾವು ಉತ್ತಮ ಸ್ನೇಹಿತರು ಎಂದಿದ್ದಾರೆ.
48
ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್‌ನಂತಹ ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ವಿಜಯ್ ಮತ್ತು ರಶ್ಮಿಕಾ ಹೊಸ ವರ್ಷವನ್ನು ಬೀಚ್ ವೆಕೇಷನ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
58
ಕೆಲವು ದಿನಗಳ ಹಿಂದೆ, ವಿಜಯ್ ಮತ್ತು ರಶ್ಮಿಕಾ ಒಟ್ಟಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿ ಒಂದೇ ಕಾರಿನಲ್ಲಿ ಹೊರಟರು. ಜೋಡಿಯ ಫೋಟೋ ವಿಡಿಯೋಗಳು ವೈರಲ್ ಆಗಿತ್ತು.
68
ವಿಜಯ್ ಮತ್ತು ರಶ್ಮಿಕಾ ಮುಂಬೈನ ಜಿಮ್‌ನ ಹೊರಗೆ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಹೈದರಾಬಾದ್‌ನಲ್ಲಿರುವ ಅದೇ ಜಿಮ್‌ಗೆ ಭೇಟಿ ನೀಡುತ್ತಾರೆ.
78
ರಶ್ಮಿಕಾ ಪ್ರಸ್ತುತ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಯಶಸ್ಸನ್ನು ಆನಂದಿಸುತ್ತಿದ್ದಾರೆ. ಪುಷ್ಪಾ ಅವರು ಬಾಕ್ಸ್ ಆಫೀಸ್ ಕಲೆಕ್ಷನ್ 201.50 ಕೋಟಿ ದಾಟಿದೆ. ಈಗ ಶರ್ವಾನಂದ್ ಜೊತೆ ‘ಆದವಾಳು ಮೀಕು ಜೋರು’ ಚಿತ್ರದ ಶೂಟಿಂಗ್ ನಲ್ಲಿದ್ದಾರೆ ರಶ್ಮಿಕಾ.
88
ಅದರ ಜೊತೆಗೆ ಅವರು ತಮ್ಮ ಬಾಲಿವುಡ್ ಚೊಚ್ಚಲ ಮಿಷನ್ ಮಜ್ನು ಚಿತ್ರೀಕರಣವನ್ನು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಹಿಂದಿಯಲ್ಲಿ ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್‌ಬೈ ಶೂಟಿಂಗ್ ಕೂಡಾ ಮುಗಿಸಿದ್ದಾರೆ.