ಟಾಲಿವುಡ್ ಸ್ವೀಟಿ, ಬಾಹುಬಲಿ ಸುಂದರಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಪ್ರತಿ ಸಲವೂ ದೊಡ್ಡ ಚರ್ಚೆ ಹುಟ್ಟುಹಾಕುತ್ತದೆ. ಯಾಕೆ ಮದುವೆ ಆಗಿಲ್ಲ? ಸ್ವೀಟಿ ಆಲೋಚನೆಗಳು ಏನು ಎಂದು. ಆದರೆ ಸ್ವೀಟಿ ಮಾತ್ರ ಸಿಂಪಲ್ ಆಗಿ ಉತ್ತರಿಸಿದ್ದಾಳೆ.
26
ಸ್ವೀಟಿ ಅನುಷ್ಕಾ ಶೆಟ್ಟಿ ಫಾಲೋ ಮಾಡುವುದು ಒಂದೇ ಮಂತ್ರ ತಂದೆ ತಾಯಿ ಆಗಲಿ ಗಂಡನಾಗಲಿ ಅಥವಾ ದೇವರಾಗಲಿ...ಯಾವುದೇ ಭಯವಿಲ್ಲದೆ ಅವರೊಟ್ಟಿಗೆ ಇದ್ದರೆ ಮಾತ್ರ ಸಂಬಂಧ ಅದ್ಭುತವಾಗಿ ಇರುತ್ತದೆ ಎಂದು.
36
Anushka Shetty
ಅನುಷ್ಕಾ ಶೆಟ್ಟಿ ಫಾಲೋ ಮಾಡುವುದು ಸೂಫಿಸಂ. ಇದರಲ್ಲಿ ದೇವರನ್ನು ಕೂಡ ಫ್ರೆಂಡ್ ರೀತಿಯಲ್ಲಿ ಕಾಣುತ್ತಾರೆ. ಬೇಸರದಲ್ಲಿದ್ದಾಗ ಅಥವಾ ಕೋಪ ಬಂದಾಗ...ನೋವಾದಾಗ ಹೇಗೆ ಸ್ನೇಹಿತರೊಟ್ಟಿಗೆ ಇರುತ್ತೀವಿ ಹಾಗೆ ದೇವರ ಜೊತೆಗೂ ಇರಬೇಕು ಎಂದು.
46
ಮದುವೆ ಅನ್ನೋದನ್ನು ಸಂಪೂರ್ಣವಾಗಿ ನಂಬುತ್ತೀನಿ. ಮದುವೆ ಆಗಲು ರೆಡಿಯಾಗಿದ್ದೀನಿ ಅಷ್ಟೇ ಅಲ್ಲದೆ ನಾನು ಸರಿಯಾದ ಸಮಯಕ್ಕೆ ಮಕ್ಕಳನ್ನು ಮಾಡಿಕೊಳ್ಳುತ್ತೀನಿ ಎಂದು ಅನುಷ್ಕಾ ಹೇಳಿದ್ದಾರೆ.
56
ಯಾರದ್ದೇ ಬಲವಂತದಿಂದ ಮದುವೆ ಆಗಲು ಬಯಸಬಾರದು. ಮದುವೆ ಅನ್ನೋದು ನಿಶ್ಛಯ ಆಗಿರುತ್ತದೆ ಆಗುವ ಸಮಯದಲ್ಲಿ ನಡೆದೇ ನಡೆಯುತ್ತದೆ ಎಂದಿದ್ದಾರೆ.
66
ಇಷ್ಟು ದಿನ ನಟಿ ಅನುಷ್ಕಾ ಶೆಟ್ಟಿ ಮತ್ತು ಬಾಹುಬಲಿ ಪ್ರಭಾಸ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆದರೆ ನಾವಿಬ್ಬರೂ ಸ್ನೇಹಿತರು ಅಷ್ಟೇ ಎಂದು ಸ್ವೀಟಿ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದ್ದಾರೆ.