ಯಾರಾದ್ರೂ ಟೇಕ್ ಕೇರ್ ಎಂದರೆ ಲಘುವಾಗಿ ಪರಿಗಣಿಸಬೇಡಿ, ರಶ್ಮಿಕಾ ಮಂದಣ್ಣ ಹೀಗಂದಿದ್ದೇಕೆ?

Published : Jan 26, 2025, 11:21 AM IST

ಯಾರಾದರೂ ನಿಮಗೆ ಟೇಕ್ ಟೇಕ್ ಎಂದರೆ ಮಾತುಗಳನ್ನು ಲಘುವಾಗಿ ಪರಿಗಣಿಸಬೇಡಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಕಿವಿಮಾತು ಹೇಳಲು ಕಾರಣವೇನು?  

PREV
15
ಯಾರಾದ್ರೂ ಟೇಕ್ ಕೇರ್ ಎಂದರೆ ಲಘುವಾಗಿ ಪರಿಗಣಿಸಬೇಡಿ, ರಶ್ಮಿಕಾ ಮಂದಣ್ಣ ಹೀಗಂದಿದ್ದೇಕೆ?

ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ದೇಶಾದ್ಯಂತ ರಶ್ಮಿಕಾ ಮಂದಣ್ಣ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಮತ್ತೊಂದು ಐತಿಹಾಸಿಕ ಚಿತ್ರ ಛಾವ ನಟಿಸುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ ಪುತ್ರ ಸಂಭಾಜಿ ಮಹಾರಾಜ ಹಾಗೂ ಪತ್ನಿ ಯೇಸುಬಾಯಿ ಭೋನ್ಸಾಲೆ ಆಧಾರಿತ ಈ ಚಿತ್ರ ಭಾರಿ ಕುತೂಹಲ ಕೆರಳಿಸಿದೆ. ಈ ಚಿತ್ರದಲ್ಲಿ ಸಂಭಾಜಿ ಮಹಾರಾಜರ  ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

25

ಛಾವ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕಾಲಿನ ಗಾಯದ ನಡುವೆ ಕಾರ್ಯಕ್ರಮಕ್ಕೆ ಆಗಮಿಸಿದ ರಶ್ಮಿಕಾ ಮಂದಣ್ಣ, ಪಾತ್ರ ಮಾಡುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದರು. ಇದೀಗ ರಶ್ಮಿಕಾ ಮಂದಣ್ಣ ಕಿವಿಮಾತೊಂದನ್ನು ಹೇಳಿದ್ದಾರೆ. ಯಾರಾದರೂ ನಿಮಗೆ ಟೇಕ್ ಕೇರ್ ಎಂದರೆ ಈ ಮಾತುಗಳನ್ನು ಲಘುವಾಗಿ ಪರಿಗಣಿಸಬೇಡಿ. ಕಾಳಜಿ ವಹಿಸಿ ಎಂದಿದ್ದಾರೆ. 

35

ರಶ್ಮಿಕಾ ಮಂದಣ್ಣ ತಮ್ಮ ಕಾಲಿನ ಗಾಯದ ಕುರಿತು ಮಾಹಿತಿ ನೀಡುತ್ತಾ ಈ ಕಿವಿಮಾತು ಹೇಳಿದ್ದಾರೆ. ಮೇಕ್ ಅಪ್, ಆಕರ್ಷಕ ಬಟ್ಟೆಗಳಿಂದ ಹೊರಗೆ ನಾನು ಸುಂದರವಾಗಿ ಕಾಣುವಂತೆ ಮಾಡಿದ್ದಾರೆ. ಆದರೆ ಒಳಗೆ ಕಾಲಿನ ಎಲುಬಿನಲ್ಲಿ 3 ಗಾಯವಾಗಿದೆ. ಜೊತಗೆ ಸ್ನಾಯು ಸೆಳೆತದಿಂದ ಕುಸಿದಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

45

ಕಳೆದ 2 ವಾರದಿಂದ ನಾನು ಕಾಲು ಕೆಳಗಿಟ್ಟಿಲ್ಲ. ಇದೀಗ ನನ್ನ ಕಾಲಿನ ಮೇಲೆ ನಿಲ್ಲುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ನಿಮ್ಮ ಸುರಕ್ಷತೆ ಕಡೆಗೆ ಗಮನ ನೀಡಿ. ಹೀಗಾಗಿ ಟೇಕ್ ಕೇರ್ ಎಂದು ಯಾರಾದರೂ ನಿಮಗೆ ಹೇಳಿದರೆ ಈ ಮಾತುಗಳನ್ನು ಲಘುವಾಗಿ ಪರಿಗಣಿಸಬೇಡಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 

55

ಯೇಸುಬಾಯಿ ಭೋನ್ಸಾಲೆ ಪಾತ್ರ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ. ಇದು ನನಗೆ ಒಲಿದು ಬಂದ ಭಾಗ್ಯ ಎಂದು ನಾನು ಭಾವಿಸಿದ್ದೇನೆ. ಯೇಸುಬಾಯಿ ಭೋನ್ಸಾಲೆ ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳನ್ನು ಸಹಿಸಿಕೊಂಡು ನಗುತ್ತಲೇ, ಎಲ್ಲರನ್ನು ಪ್ರೀತಿಯಿಂದ ನೋಡಿದ್ದರು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಹೀಗಾಗಿ ನನ್ನ ಸಣ್ಣ ಕಾಲಿನ ಗಾಯದ ನೋವು ಹೊರಗಡೆ ತೋರಿಸದಂತೆ ಹಾಗೂ ನಗುತ್ತಾ ಎದುರಿಸುವ ಮಾರ್ಗವನ್ನು ಮಹಾರಾಣಿ ಭೋನ್ಸಾಲೆ ನೀಡಿದ್ದಾರೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

Read more Photos on
click me!

Recommended Stories