ಅನುಷ್ಕಾ - ಪಿಗ್ಗಿ: ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ ನಟಿಯರು

First Published | Nov 13, 2020, 6:31 PM IST

ಸಿನಿಮಾ ರಂಗ  ಗ್ಲಾಮರ್ ಮತ್ತು ಲುಕ್ಸ್‌ ಮೇಲೆ ನಿಂತಿದೆ. ವಿಶೇಷವಾಗಿ ನಟಿಯರು ಚೆಂದ ಕಾಣಲು, ಪರ್ಫೇಕ್ಟ್‌ ಲುಕ್ಸ್‌ ಹೊಂದಲು ಸಾಕಷ್ಟು ಕಷ್ಟ ಪಡುತ್ತಾರೆ. ಇದಕ್ಕಾಗಿ ಬಾಲಿವುಡ್‌ನ ಕೆಲವು ಟಾಪ್‌ ನಟಿಯರು ಸರ್ಜರಿಯ ಮೋರೆ ಹೋಗಿದ್ದಾರೆ. ತಮ್ಮ ತುಟಿ ಮೂಗುಗಳ ಪ್ಲಾಸ್ಟಿಕ್‌ ಸರ್ಜಿ ಮಾಡಿಸಿಕೊಂಡ ವರದಿಗಳಿವೆ. ಯಾವುದೇ ನಟಿಯರು ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲವಾದರೂ ಅವರ ಮೊದಲಿನ ಮತ್ತು ಈಗಿನ ಫೋಟೋಗಳೇ ನಿಜ ಹೇಳುತ್ತವೆ.   

ಹಲವು ಬಾಲಿವುಡ್ ನಟಿಯರು ಪರ್ಫೇಕ್ಟ್‌ ಲುಕ್ಸ್‌ ಹೊಂದಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೂಗು ಅಥವಾ ಲಿಪ್ಸ್‌ ಫಿಲ್ಲಿಂಗ್ ಮಾಡಿಸಿಕೊಂಡ ಸ್ಟಾರ್‌ಗಳು ಇವರು.
undefined
ಅನುಷ್ಕಾ ಶರ್ಮಾ:ರಬ್ ನೆ ಬಾನಾ ದಿಜೋಡಿ ಸಿನಿಮಾದ ಮೂಲಕ ಶಾರುಖ್ ಖಾನ್ ಜೊತೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಅನುಷ್ಕಾ, ತಕ್ಷಣ ಡಕ್‌ ಶೇಪ್‌ ತುಟಿಗಳನ್ನು ಪಡೆಯಲು ಸರ್ಜರಿ ಮಾಡಿಸಿಕೊಂಡರು.
undefined

ಜಾನ್ವಿ ಕಪೂರ್‌:ಬಾಲಿವುಡ್‌ ಎವರ್‌ಗ್ರೀನ್‌ ದಿವಾ ಶ್ರೀದೇವಿಯ ಮಗಳು ಜಾನ್ವಿ ಕಪೂರ್ ತನ್ನ ತುಟಿಗಳನ್ನು ಅಲ್ಟರ್‌ ಮಾಡಿಸಿಕೊಳ್ಳಲು ಲಿಪ್‌ ಫಿಲ್ಲರ್‌ ಮೋರೆ ಹೊಗಿದ್ದಾರೆ. ಇಶಾನ್ ಖಟ್ಟರ್ ಜೊತೆ ಧಡಕ್ ಚಿತ್ರದಲ್ಲಿ ಅವರು ಮೊದಲು ಕಾಣಿಸಿಕೊಂಡರು.
undefined
ಪ್ರೀತಿ ಜಿಂಟಾ:ಬಾಲಿವುಡ್ ಬಬ್ಲಿ ನಟಿ ತನ್ನ ಡಿಂಪಲ್ ಕಾರಣದಿಂದಾಗಿ ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದಾರೆ. ಆದರೂ, ಅವರು ಐಬ್ರೋ ಲಿಫ್ಟಿಂಗ್‌, ನೋಸ್‌ ಹಾಗೂ ಲಿಪ್‌ ಫಿಲ್ಲರ್‌ ಮಾಡಿಸಿಕೊಂಡಿದ್ದಾರೆ ಎಂದು ಆರೋಪವನ್ನು ಹೊಂದಿದ್ದಾರೆ.
undefined
ವಾಣಿ ಕಪೂರ್:ಬೆಫಿಕ್ರೆ ನಟಿ ವಾಣಿ ಕಪೂರ್ ಮೊದಲ ಬಾರಿಗೆ ಶುಧ್ ದೇಸಿ ರೋಮ್ಯಾನ್ಸ್ ಚಿತ್ರದಲ್ಲಿ ಕಾಣಿಸಿಕೊಂಡರು. ಸರ್ಜರಿಯ ಬಗ್ಗೆ ಎಂದಿಗೂ ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ. ಆದರೂ ಡಕ್‌ ಶೇಪ್‌ ತುಟಿಗಾಗಿ ಲಿಪ್‌ ಫಿಲ್ಲರ್‌ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
undefined
ಶಿಲ್ಪಾ ಶೆಟ್ಟಿ:ಶಿಲ್ಪಾ ಶೆಟ್ಟಿ ಸಹ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆಂದು ಆರೋಪಿಸಲಾಗಿತ್ತು, ಆದರೆ ಅವರಲ್ಲಿ ವ್ಯತ್ಯಾಸಗಳನ್ನು ಗುರುತಿಸುವುದು ಕಷ್ಟ. ದೇಹದ ಯಾವುದೇ ಭಾಗಗಳನ್ನು ಬದಲಾಯಿಸುವುದನ್ನು ಇಷ್ಟಪಡುವುದಿಲ್ಲ ಮತ್ತು ನಾನು ಪ್ಲಾಸ್ಟಿಕ್ ಸರ್ಜರಿಯನ್ನು ವಿರೋಧಿಸುತ್ತೇನೆ ಎಂದು ಇಂಟರ್‌ವ್ಯೂವ್‌ನಲ್ಲಿ ಹಂಚಿಕೊಂಡಿದ್ದಾರೆ ನಟಿ.
undefined
ಪ್ರಿಯಾಂಕಾ ಚೋಪ್ರಾ:'ದೇಸಿ ಗರ್ಲ್‌' ಪ್ರಿಯಾಂಕರಲ್ಲಿ ಅನೇಕ ಬದಲಾವಣೆಗಳು ಕಂಡುಬಂದಿವೆ.ಅವರು ಎಂದಿಗೂ ಒಪ್ಪಿಕೊಂಡಿಲ್ಲವಾದರೂ, ಕಳೆದ ವರ್ಷಗಳಲ್ಲಿನ ಅವರ ಮುಖದಲ್ಲಿನ ಮಾರ್ಪಡುಗಳು ಪ್ಲಾಸ್ಟಿಕ್ ಸರ್ಜರಿ ಕಾರಣ ಎಂದು ಹೇಳುತ್ತವೆ.
undefined
ಶ್ರುತಿ ಹಾಸನ್:ಬಾಲಿವುಡ್ ಮತ್ತು ಸೌತ್‌ ನಟಿ, ನಟ ಕಮಲ್‌ ಹಾಸನ್ ಪುತ್ರಿ, ಶೃತಿ ಹಾಸನ್, ಫಿಲ್ಮಿಂಗೆ ಎಟ್ರಿ ಕೊಡುವ ಮೊದಲು ಮೂಗಿನ ಸರ್ಜಿರಿ ಮಾಡಿಸಿಕೊಂಡಿದ್ದಾರೆ. ಹಲವು ವರ್ಷಗಳ ನಂತರ ಅವರು ತುಟಿಗಳನ್ನು ಡಕ್‌ ಶೇಪ್‌ಗೆ ಬದಲಾಯಿಸಿಕೊಂಡಿದ್ದಾರೆ. ತನ್ನ ಸರ್ಜರಿಯ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದರು ನಟಿ ಒಮ್ಮೆ.
undefined

Latest Videos

click me!