ಎಮೋಷನಲ್‌ ಕ್ಯಾಪ್ಷನ್‌ ಜೊತೆ ಅತ್ಯಾಕರ್ಷಕ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮ!

Published : Sep 09, 2021, 04:55 PM IST

ನಟಿ ಮತ್ತು ನಿರ್ಮಾಪಕಿ ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ತಮ್ಮ ಪತಿ ವಿರಾಟ್ ಕೊಹ್ಲಿ ಮತ್ತು  ಮಗಳು ವಾಮಿಕಾ ಜೊತೆ ಎಂಜಾಯ್‌ ಮಾಡುತ್ತಿದ್ದಾರೆ. ಸೋಶಿಯಲ್‌ ಮೀಡಿಯಾ ಮೂಲಕ ಅನುಷ್ಕಾ ಆಗಾಗ ನಗರದ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವಿರಾಟ್ ಜೊತೆ ನಗರದ ಬೀದಿಗಳಲ್ಲಿ ಅಡ್ಡಾಡುವುದರಿಂದ ಹಿಡಿದು, ಫ್ರೆಂಡ್ಸ್‌ ಜೊತೆ ಲಂಚ್‌ ಮತ್ತು ಸಣ್ಣ ಪುಟ್ಟ ಫನ್‌ ಮೂಮೆಂಟ್ಸ್‌ಗಳ  ಬಗ್ಗೆ ಫ್ಯಾನ್ಸ್‌ಗೆ ಅಪ್ಡೇಟ್‌ ಮಾಡುತ್ತಿರುತ್ತಾರೆ. ರೀಸೆಂಟ್‌ ಆಗಿ ಅನುಷ್ಕಾ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ  ಮ್ಯಾಂಚೆಸ್ಟರ್ ಸ್ಕೈಲೈನ್‌ನ ಅತ್ಯಾಕರ್ಷಕ ನೋಟ ಮತ್ತು ಎತ್ತರದ ಕಟ್ಟಡಗಳ ಫೋಟೋ ಹಂಚಿಕೊಂಡು  ಹೃದಯಸ್ಪರ್ಶಿ ಕ್ಯಾಪ್ಷನ್‌ ನೀಡಿದ್ದಾರೆ. 

PREV
15
ಎಮೋಷನಲ್‌ ಕ್ಯಾಪ್ಷನ್‌ ಜೊತೆ  ಅತ್ಯಾಕರ್ಷಕ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮ!

ಇನ್‌ಸ್ಟಾಗ್ರಾಮ್  ಸ್ಟೋರಿಯಲ್ಲಿ ಅನುಷ್ಕಾ ಶರ್ಮ ಮ್ಯಾಂಚೆಸ್ಟರ್‌ನ ಗಗನಚುಂಬಿ ಬಿಲ್ಡಿಂಗ್‌ನ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಒಂದರಲ್ಲಿ, ಅನುಷ್ಕಾ ಮ್ಯಾಂಚೆಸ್ಟರ್ ಆಕಾಶದ ನೋಟವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹಲವಾರು ಬಿಲ್ಡಿಂಗ್‌ಗಳ ಟಾಪ್‌ ಕಾಣುಬಹುದು.

25

ಅನುಷ್ಕಾ ಪೋಸ್ಟ್‌ ಮಾಡಿರುವ ಮುಂದಿನ ಸ್ಟೋರಿಯ ಫೋಟೋದಲ್ಲಿ ಕಟ್ಟಡದ ಮೇಲೆ ಸುಂದರವಾದ ಕೋಟ್‌ವೊಂದನ್ನು ಬರೆದಿದ್ದಾರೆ.  'ಪ್ರಪಂಚವು ನಿನ್ನ ಜೊತೆ ಇದರ ಒಳಗೆ ಉತ್ತಮ ಸ್ಥಳವಾಗಿದೆ' ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಹಾಗೂ ಫೋಟೋದ ಮೇಲೆ ಪಿಂಕ್‌ ಹಾರ್ಟ್‌ನ ಡೂಡಲ್ ಮಾಡಿದ್ದಾರೆ. 

35

ಇದರ ಹಿಂದಿನ ದಿನ, ಅನುಷ್ಕಾ ತನ್ನ ಹೋಟೆಲ್ ರೂಮ್‌ ಒಳಗಿನ ತನ್ನ ಫೋಟೋವನ್ನು ಹಂಚಿಕೊಂಡಿದ್ದರು. , ಅದರಲ್ಲಿ ಅವರ ಮುಂದೆ ಎರಡು ಪ್ಲೇಟ್ ದೋಸೆ ಇತ್ತು.  'ಮನೆಯಿಂದ ದೂರ ಇರುವ ಮನೆ' ಎಂದು ಫೋಟೋಗೆ ಕ್ಯಾಪ್ಷನ್‌ ನೀಡಿ   ಬಕಿಂಗ್ಹ್ಯಾಮ್ ಪ್ಯಾಲೇಸ್‌ ಪಕ್ಕದಲ್ಲಿರುವ ಹೋಟೆಲ್ ತಾಜ್ 51 ಬಕಿಂಗ್ಹ್ಯಾಮ್ ಗೇಟ್‌ಗೆ ಧನ್ಯವಾದ ಹೇಳಿದರು.

45

ಅನುಷ್ಕಾ ಮತ್ತು ವಿರಾಟ್ ತಮ್ಮ ಮಗಳು ವಾಮಿಕಾ ಜೊತೆಗೆ ಈ ವರ್ಷ ಜೂನ್‌ನಿಂದ ಇಂಗ್ಲೆಂಡಿನಲ್ಲಿದ್ದಾರೆ. ಅವರು ಒಟ್ಟಿಗೆ ಗುಣಮಟ್ಟದ ಸಮಯವನ್ನು ಹೆಚ್ಚಾಗಿ ಎಂಜಾಯ್‌ ಮಾಡುತ್ತಿರುವುದು ಕಂಡುಬರುತ್ತದೆ. ವಿರುಷ್ಕಾ  ದಂಪತಿಗಳು ವಾಮಿಕಾಳ  ಆರು ತಿಂಗಳ ಹುಟ್ಟುಹಬ್ಬವನ್ನು ಪಿಕ್ನಿಕ್ ಹೋಗುವ ಮೂಲಕ ಸೆಲೆಬ್ರೆಟ್‌ ಮಾಡಿದ್ದರು.

55

ಆ ಸಮಯದ ಕೆಲವು ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಅನುಷ್ಕಾ ಪೋಸ್ಟ್‌ ಮಾಡಿದ್ದರು. ಆಕೆಯ ಒಂದು ಸ್ಮೈಲ್ ನಮ್ಮ ಇಡೀ ಜಗತ್ತನ್ನು ಬದಲಾಯಿಸಬಹುದು ಎಂದು ಬರೆದುಕೊಂಡು  ಮಗಳ 6 ತಿಂಗಳ ಬರ್ತ್‌ಡೇಗೆ ವಿಶ್‌ ಮಾಡಿದ್ದರು 

click me!

Recommended Stories