ಕಿರಣ್ ಖೇರ್ ಅವರಿಗಾಗಿ ಅನುಪಮ್ ಖೇರ್ ಅಮೆರಿಕಾದ 'ನ್ಯೂ ಅಮ್ಸರ್ಡಮ್' ಶೋ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.
ಅನುಪಮ್ ಖೇರ್ ಅಮೆರಿಕದ ಶೋ 'ನ್ಯೂ ಆಮ್ಸ್ಟರ್‌ಡ್ಯಾಮ್' ನ ಸೀಸನ್ 3ಕ್ಕೆ ಹಿಂದಿರುಗುವುದಿಲ್ಲ, ಎನ್ನಲಾಗುತ್ತಿದೆ.
ಖೇರ್ ಯುಎಸ್ ಮೆಡಿಕಲ್ ಡ್ರಾಮಾ 'ನ್ಯೂ ಆಮ್ಸ್ಟರ್‌ಡ್ಯಾಮ್' ನಲ್ಲಿ ಡಾ.ವಿಜಯ್ ಕಪೂರ್ ಪಾತ್ರ ನಿರ್ವಹಿಸುತ್ತಿದ್ದರು.
ಅನುಪಮ್ ಅವರನ್ನು ಮುಂದಿನ ಸಂಚೆಕೆಗಳಲ್ಲಿ ನೋಡಲಾಗುವುದಿಲ್ಲ. ಡಾ.ವಿಜಯ್ ಕಪೂರ್ಅವರು ಇನ್ನು ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂದು ಡೆಡ್ಲೈನ್ ವರದಿ ಮಾಡಿದೆ.
ಆದರೆ ಖೇರ್ ಅಥವಾ ಕಾರ್ಯಕ್ರಮದ ನಿರ್ಮಾಪಕರಿದಂ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಅನುಪಮ್ ಪತ್ನಿ ಕಿರಣ್ ಖೇರ್ ಅವರ ಕ್ಯಾನ್ಸರ್ ವಿಷಯ ಹಂಚಿಕೊಂಡ ನಂತರ ಈ ಸುದ್ದಿ ವರದಿಯಾಗಿದೆ .
ಕಿರಣ್ ಖೇರ್ ಮಲ್ಟಿಪಲ್ ಮೈಲೋಮಾ ಎಂಬ ರಕ್ತ ಕ್ಯಾನ್ಸರ್ ಇದೆ.ಪ್ರಸ್ತುತ ಚಿಕಿತ್ಸೆಗೆ ಒಳ್ಳಾಗುತ್ತಿದ್ದಾರೆ. ಬೆಂಬಲ, ಪ್ರಾರ್ಥನೆ ಮತ್ತು ಪ್ರೀತಿಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಅನುಪಮ್ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.