ಹೆಂಗಿದ್ದ ನಟಿ ಹೆಂಗಾಗೋದ್ಲು ನೋಡಿ! ಸೂಪರ್‌ಹಿಟ್ 'ಆಶಿಕಿ' ನಾಯಕಿಯ ಮುಖಕ್ಕೇನಾಯ್ತು?

First Published | Apr 13, 2024, 3:33 PM IST

ಈಕೆ ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಚಿತ್ರ 'ಆಶಿಕಿ'ಯ ನಾಯಕಿ. ಹೆಂಗಿದ್ದ ನಟಿ ಹೆಂಗಾಗಿದಾಳೆ ಅಂದ್ರೆ ನೋಡಿದವರು ಆಕೆಯನ್ನು ಗುರುತಿಸಲೇ ಸಾಧ್ಯವಿಲ್ಲ.. ಆಕೆಯ ಬದುಕು ಹೆಚ್ಚಿನ ಚಿತ್ರಗಳಿಗಿಂತ ಹೆಚ್ಚು ತಿರುವುಗಳನ್ನು ಹೊಂದಿದೆ. 

ಖಳನಾಯಿಕಾ, ತಿರುಡ ತಿರುಡ, ಆಶಿಖಿ ಚಿತ್ರಗಳಂತ ಅತ್ಯುತ್ತಮ ಬಾಲಿವುಡ್ ಚಿತ್ರಗಳಿಂದ ಜನಪ್ರಿಯವಾಗಿದ್ದ ನಟಿ ಅನು ಅಗರ್ವಾಲ್. 90ರ ದಶಕದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದ ಈ ನಟಿಯ ಹಳೆಯ ಫೋಟೋ ಹಾಗೂ ಈಗಿನ ಫೋಟೋಗೂ ಅಜಗಜಾಂತರ.

ಸೂಕ್ಷ್ಮವಾಗಿ ನೋಡಿ, ಅದಿತಿ ರಾವ್ ಹೈದರಿ ಹಾಗೂ ಇಶಾ ಕೊಪ್ಪಿಕರ್ ಇಬ್ಬರನ್ನೂ ಮಿಕ್ಸ್ ಮಾಡಿ ಎರಕ ಹೊಯ್ದಂತೆ ಕಾಣುವ ಮುದ್ದು ಮುಖದ ನಟಿ ಅನು ಅಗರ್ವಾಲ್. 

Tap to resize

ಬರೋಬ್ಬರಿ 30-35 ವರ್ಷ ಯಾರಿಗೂ ಕಾಣಿಸದೆ ಮರೆಯಾಗಿದ್ದ ನಟಿ, ಎಲ್ಲರ ಎದುರು ಬಂದಾಗ ಮುಖವೇ ಬದಲಾಗಿ ಹೋಗಿದೆ. ವಯಸ್ಸಾಗಿರುವುದೇನೋ ನಿಜ, ಆದರೆ ಇಷ್ಟೊಂದು ಬದಲಾಗಲು ಸಾಧ್ಯವೇ ಎಂಬ ಅಚ್ಚರಿ ಎಲ್ಲರದು.

ನಟಿಯು ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಎಡವಟ್ಟಾಗಿರಬೇಕು ಎಂದು ಹಲವರು ಅನುಮಾನ ಪಟ್ಟರು. ಆದರೆ, ಅನು ಮಾತ್ರ ಇದು ಶೇ. 100 ನೈಸರ್ಗಿಕ ಮುಖವೇ ಎನ್ನುತ್ತಿದ್ದಾರೆ. 

ಅನು ಬದುಕಿನಲ್ಲಾದ ಆ ಒಂದು ಘಟನೆ ಆಕೆಯ ರೂಪವನ್ನಷ್ಟೇ ಅಲ್ಲ, ಬದುಕನ್ನೇ ಬದಲಾಯಿಸಿತು. ಸಿನಿಮಾ ಕತೆಗಿಂತ ಹೆಚ್ಚಿನ ಟ್ವಿಸ್ಟ್ ಆಕೆಯ ಬದುಕಿಗೆ ತಂತು.
 

ಆಶಿಕಿ ಗರ್ಲ್ ಎಂದೇ ಫೇಮಸ್ ಆಗಿದ್ದ ಅನು ಬದುಕು 1999ರಲ್ಲಿ ಬದಲಾಗಿ ಹೋಯಿತು. ಆ ಭೀಕರ ಅಫಘಾತದಲ್ಲಿ ಅವರು ಬದುಕುಳಿದಿದ್ದೇ ಹೆಚ್ಚು ಎಂಬಂತಾಯಿತು. ಆದರೆ, 

ಈ ಕಾರು ಅಪಘಾತದಲ್ಲಿ ಅವರ ಪ್ರಾಣ ಉಳಿಯಿತು. ಅನು ಅವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾದರು. 29 ದಿನಗಳ ಕಾಲ ಸಾವಿನ ವಿರುದ್ಧ ಬದುಕಿನ ಹೋರಾಟ ನಡೆಸಿದರು. ಮಾಧ್ಯಮ ವರದಿಗಳ ಪ್ರಕಾರ, ಅನು ಪ್ರಜ್ಞೆಗೆ ಬಂದಾಗ, ಅವರಿಗೆ ನೆನಪು ಸಂಪೂರ್ಣವಾಗಿ ಹೋಗಿತ್ತು ಮತ್ತು ತಾನಾರೆಂಬುದೇ ಗೊತ್ತಿರಲಿಲ್ಲ. 

ನಾಲ್ಕು ವರ್ಷಗಳ ಕಾಲ ಅನು ಅವರಿಗೆ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಅವರ ನೆನಪು ಸ್ವಲ್ಪ ಮಟ್ಟಿಗೆ ಮರಳಿತು. ಈಗ ಅನು ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಆದರೆ, ಜೀವನ ಸಂಪೂರ್ಣ ಹಳಿಗೆ ಮರಳಿಲ್ಲ. 

ಯೋಗ ಮತ್ತು ಆಧ್ಯಾತ್ಮದಲ್ಲಿ ಆಶ್ರಯ ಪಡೆದು ತನ್ನನ್ನು ತಾನು ಗುಣಪಡಿಸಿಕೊಂಡ ಅನು ಈಗ ತಾನೂ ಯೋಗ ಶಿಕ್ಷಕಿಯಾಗಿದ್ದಾರೆ. ಅನುಫನ್ ಹೆಸರಿನಲ್ಲಿ ಮುಂಬೈ ಸ್ಲಂ ಮಕ್ಕಳಿಗೆ ಯೋಗ ಹೇಳಿಕೊಡುತ್ತಾರೆ.

ಅಪಘಾತದ ಬಳಿಕ ನನಗೆ ಏನೂ ನೆನಪಿರಲಿಲ್ಲ. 2001ರಲ್ಲಿ ತಲೆ ಬೋಳಿಸಿಕೊಂಡೆ. 2006ರಲ್ಲಿ ನಾನು ಪ್ರಪಂಚದ ಮುಂದೆ ಬಂದು ಜನರನ್ನು ಭೇಟಿ ಮಾಡಲು ಪ್ರಾರಂಭಿಸಿದೆ. ಅಪಘಾತದ ನಂತರ, ನಾನು ಲಿಪ್ಸ್ಟಿಕ್ ಹಚ್ಚಲು ಸಹ ಮರೆತಿದ್ದೆ ಮತ್ತು ನನ್ನ 'ಮೊದಲು' ಮತ್ತು 'ನಂತರ'ದ ಫೋಟೋಗಳನ್ನು ನೋಡಿ ನಾನು ಗಾಬರಿಯಾದೆ ಎಂದಿದ್ದಾರೆ ನಟಿ.

ಮುರಿದ ಮೂಳೆಗಳು, ಪ್ಯಾರಾಲೈಸ್ಡ್ ದೇಹ, ಕಿತ್ತು ಹೋದ ಚರ್ಮ ಎಲ್ಲಕ್ಕೂ ಹಲವಾರು ಶಸ್ತ್ರಚಿಕಿತ್ಸೆಗಳಾಗಿವೆ. ಆದರೆ ಪ್ಲ್ಯಾಸ್ಟಿಕ್ ಸರ್ಜರಿ ಮಾತ್ರ ಮಾಡಿಸಿಕೊಂಡಿಲ್ಲ ಎಂದಿದ್ದಾರೆ ನಟಿ. 

ಒಂದು ಕಾಲದಲ್ಲಿ ಆಕೆಯನ್ನು ನೋಡಲು ಮನೆ ಮುಂದೆ ಜನ ಕ್ಯೂ ನಿಲ್ಲುತ್ತಿದ್ದರಂತೆ. ಇಂದು ಆಕೆ ಬದುಕಿನಲ್ಲಿ ಏಕಾಂಗಿ. 55 ವರ್ಷದ ಅನು ಯೋಗದ ಬಲದಲ್ಲಿ ಬದುಕು ದೂಡುತ್ತಿದ್ದಾರೆ. 

Latest Videos

click me!