ಬಿಗ್‌ಬಾಸ್‌ ಮನೇಲಿ ಹಾಕಿದ ಬಟ್ಟೆ ರಿಪೀಟ್‌ ಮಾಡಲ್ವಂತೆ ಈ ನಟಿ, ಬರೋಬ್ಬರಿ 200 ಡ್ರೆಸ್ ಖರೀದಿಸಿದ ಸ್ಪರ್ಧಿ!

Published : Oct 11, 2023, 03:09 PM IST

ದೇಶದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಹಲವು ಭಾಷೆಗಳಲ್ಲಿ ಪ್ರಸಾರಗೊಳ್ಳುತ್ತದೆ. ಸದ್ಯ ಕನ್ನಡದಲ್ಲಿ ಬಿಗ್‌ಬಾಸ್‌ ಸೀಸನ್‌-10 ಈಗಾಗ್ಲೇ ಆರಂಭಗೊಂಡಿದೆ. ಈಗಾಗಲೇ ಹಲವು ನಟ-ನಟಿಯರು ದೊಡ್ಮನೆಗೆ ಪ್ರವೇಶಿಸಿದ್ದಾರೆ. ಆದರೆ ಈ ನಟಿ ಬಿಗ್‌ಬಾಸ್‌ ಮನೆಗೆ ಹೋಗಲೆಂದೇ ಬರೋಬ್ಬರಿ 200 ಜೊತೆ ಬಟ್ಟೆ ಖರೀದಿಸಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

PREV
19
ಬಿಗ್‌ಬಾಸ್‌ ಮನೇಲಿ ಹಾಕಿದ ಬಟ್ಟೆ ರಿಪೀಟ್‌ ಮಾಡಲ್ವಂತೆ ಈ ನಟಿ, ಬರೋಬ್ಬರಿ 200 ಡ್ರೆಸ್ ಖರೀದಿಸಿದ ಸ್ಪರ್ಧಿ!

ದೇಶದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಹಲವು ಭಾಷೆಗಳಲ್ಲಿ ಪ್ರಸಾರಗೊಳ್ಳುತ್ತದೆ. ಸದ್ಯ ಕನ್ನಡದಲ್ಲಿ ಬಿಗ್‌ಬಾಸ್‌ ಸೀಸನ್‌-10 ಈಗಾಗ್ಲೇ ಆರಂಭಗೊಂಡಿದೆ. ಈಗಾಗಲೇ ಹಲವು ನಟ-ನಟಿಯರು ದೊಡ್ಮನೆಗೆ ಪ್ರವೇಶಿಸಿದ್ದಾರೆ. ಆದರೆ ಈ ನಟಿ ಬಿಗ್‌ಬಾಸ್‌ ಮನೆಗೆ ಹೋಗಲೆಂದೇ ಬರೋಬ್ಬರಿ 200 ಜೊತೆ ಬಟ್ಟೆ ಖರೀದಿಸಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

29

ಬಿಗ್‌ಬಾಸ್‌ನಲ್ಲಿ ನಟ-ನಟಿಯರು ಧರಿಸೋ ಸ್ಟೈಲಿಶ್ ಡ್ರೆಸ್ ಎಲ್ಲರ ಗಮನ ಸೆಳೆಯುತ್ತದೆ. ಹೀಗಾಗಿ ಸ್ಪರ್ಧಿಗಳು ತಮ್ಮ ಬಟ್ಟೆಗಳ ಬಗ್ಗೆ ವಿಶೇಷವಾಗಿ ಗಮನ ಹರಿಸುತ್ತಾರೆ. ಕಂಫರ್ಟೆಬಲ್‌ ಮತ್ತು ಲೇಟೆಸ್ಟ್‌ ಟ್ರೆಂಡೀ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೆಯೇ ಈ ನಟಿ ಬಿಗ್‌ಬಾಸ್‌ ಮನೆಯಲ್ಲಿ ಒಂದು ಸಾರಿ ಹಾಕಿದ ಬಟ್ಟೆ ಮತ್ತೊಮ್ಮೆ ರಿಪೀಟ್ ಆಗಬಾರದು ಎಂದು ಮೊದಲೇ ನಿರ್ಧರಿಸಿದ್ದರಂತೆ. 

39

ಹಿಂದೆ ಕಿರುತೆರೆ ನಟಿ, ಅಂಕಿತಾ ಲೋಖಂಡೆ ಮತ್ತು ಅವರ ಪತಿ, ವಿಕ್ಕಿ ಜೈನ್ ಅವರು ಪ್ರಸಿದ್ಧ ರಿಯಾಲಿಟಿ ಶೋ, ಬಿಗ್ ಬಾಸ್ 17ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ದಂಪತಿ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಅಂಕಿತಾ ಲೋಖಂಡೆ ಮತ್ತು ಅವರ ಪತಿ, ವಿಕ್ಕಿ ಜೈನ್ ಬರೋಬ್ಬರಿ 200 ಜೊತೆ ಬಟ್ಟೆ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. 

49

ಬಿಗ್‌ಬಾಸ್‌ ಮನೆಯಲ್ಲಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ, ವಿಕ್ಕಿ ಜೈನ್ ಬಟ್ಟೆಗಳನ್ನು ರಿಪೀಟ್ ಮಾಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಮೂರು ತಿಂಗಳುಗಳ ಕಾಲ ಮನೆಯಲ್ಲಿ ಉಳಿಯಲು ಸ್ಟೈಲಿಶ್‌ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ

59

ಅಂಕಿತಾ ದಿನವೊಂದಕ್ಕೆ ಮೂರು ಬಾರಿ ಬಟ್ಟೆ ಚೇಂಜ್ ಮಾಡಲು ನಿರ್ಧರಿಸಿದರೆ, ವಿಕ್ಕಿ ಪ್ರತಿದಿನ ಎರಡು ಬಾರಿ ಬಟ್ಟೆ ಚೇಂಜ್ ಮಾಡಲು ನಿರ್ಧರಿಸಿದ್ದಾರೆ.
ಇಬ್ಬರು ಸ್ಟೈಲಿಶ್ ಮತ್ತು ಕಂಫರ್ಟೆಬಲ್‌ ಬಟ್ಟೆಯನ್ನು ಖರೀದಿಸಲು ಹಲವು ಬ್ರ್ಯಾಂಡ್ ಶಾಪ್‌ಗಳನ್ನು ಸುತ್ತುತ್ತಿದ್ದಾರೆ. 

69

ಈ ಹಿಂದೆ ಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್ ಭಾಗವಹಿಸಿದ್ದರು. ಜೋಡಿ, ಈ ರಿಯಾಲಿಟಿ ಶೋನ ವಿನ್ನರ್ ಸಹ ಆಗಿದ್ದರು. ಸಪ್ತಪದಿ ಚಿತ್ರಣದ ಚಿನ್ನದ ಫ್ರೇಮ್‌ ಮತ್ತು 25 ಲಕ್ಷ ರೂ. ಬಹುಮಾನವನ್ನು ಸಹ ಪಡೆದಿದ್ದರು. 

79

'ನಾವು ರಿಯಾಲಿಟಿ ಶೋನಲ್ಲಿ ಯಾವುದೇ ನಾಟಕವಾಡದೆ ನಾವು ನಾವಾಗೇ ಇದ್ದ ಕಾರಣ ಗೆಲ್ಲಲು ಸಾಧ್ಯವಾಯಿತು. ವಿಕ್ಕಿ ಅವರು ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಇರುವುದರಿಂದ ಮತ್ತು ನಾನು ಮುಂಬೈನಲ್ಲಿ ಹೆಚ್ಚಿನ ಸಮಯ ಇರುವುದರಿಂದ ಈ ಕಾರ್ಯಕ್ರಮವು ಅವರೊಂದಿಗೆ ಸಮಯ ಕಳೆಯಲು ಉತ್ತಮ ವೇದಿಕೆಯಾಗಿತ್ತು' ಎಂದು ನಟಿ ಅಂಕಿತಾ ಲೋಖಂಡೆ ಹೇಳಿದ್ದರು. 

89

ಅಂಕಿತಾ ಲೋಖಂಡೆ, ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ರ ಎಕ್ಸ್‌ ಗರ್ಲ್‌ಫ್ರೆಂಡ್‌. ಇಬ್ಬರೂ ಹಲವು ವರ್ಷಗಳ ಪರಸ್ಪರ ಪ್ರೀತಿಸಿದ್ದರು. ನಂತರ ಬ್ರೇಕಪ್ ಆಗಿತ್ತು. ಆ ನಂತರ ಅಂಕಿತಾ ಲೋಖಂಡೆ, ಉದ್ಯಮಿ ವಿಕ್ಕಿ ಜೈನ್ ಅವರೊಂದಿಗೆ ದೀರ್ಘಕಾಲ ಡೇಟಿಂಗ್ ಮಾಡಿದ್ದರು. ಡಿಸೆಂಬರ್ 2021ರಲ್ಲಿ ಇವರಿಬ್ಬರ ವಿವಾಹ ಸಮಾರಂಭ ನಡೆದಿತ್ತು.

99

ಅಂಕಿತಾ ಮತ್ತು ವಿಕ್ಕಿಯ ವಿವಾಹವು ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ನಡೆದಿತ್ತು.ಮದುವೆಗೆ, ಅಂಕಿತಾ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಕಪಾಟಿನಿಂದ ಸುಂದರವಾದ ಗೋಲ್ಡನ್ ಲೆಹೆಂಗಾವನ್ನು ಧರಿಸಿದ್ದರು. ಸದ್ಯ ಬಿಗ್‌ಬಾಸ್ ಮನೆ ಪ್ರವೇಶಿಸಲು ಈ ದಂಪತಿ ಮಾಡಿಕೊಳ್ಳುತ್ತಿರುವ ತಯಾರಿ ಹಲವರ ಗಮನ ಸೆಳೆಯುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories