ಬಾಲಿವುಡ್‌ನಲ್ಲಿ ಈ ವರ್ಷ ಅತ್ಯಂತ ಹೆಚ್ಚು ಸದ್ದು ಮಾಡಿದ ಹಾಗೂ ಆದಾಯ ಗಳಿಸಿದ ಸಿನಿಮಾಗಳಲ್ಲಿ ಒಂದಾಗಿರುವ ಅನಿಮಲ್ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ತಮ್ಮ ಮೊದಲ ಚಿತ್ರಕ್ಕಾಗಿ 1.5 ಕೋಟಿ ರೂ. ಹಣವನ್ನು ಹೊಂದಿಸಲು 36 ಎಕರೆ ತೋಟವನ್ನು ಮಾರಾಟ ಮಾಡಿದ್ದರು ಎಂಬುದು ತಿಳಿದುಬಂದಿದೆ. ಈಗ ಅವರ ಅನಿಮಲ್ ಸಿನಿಮಾ ಬರೀಬ್ಬರಿ 563 ಕೋಟಿ ರೂ. ಗಳಿಸಿದೆ.
ಅನಿಮಲ್ ಸಿನಿಮಾಗಿಂತಲೂ ಮುಂಚಿತವಾಗಿ ಸಂದೀಪ್ ರೆಡ್ಡಿ ವಾಂಗಾ ಅವರು ಬಾಲಿವುಡ್ ಚಿತ್ರ ಕಬೀರ್ ಸಿಂಗ್ ನಿರ್ದೇಶಿಸಿದ್ದರು. ಅಂದಿನಿಂದ ದೇಶಾದ್ಯಂತ ಮುನ್ನೆಲೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸಂದೀಪ್ ಅವರು ತಮ್ಮ ಸೌತ್ ಇಂಡಸ್ಟ್ರಿ ಸೂಪರ್‌ಹಿಟ್ ಚಿತ್ರ ಅರ್ಜುನ್ ರೆಡ್ಡಿಯಿಂದ ಪ್ರಸಿದ್ಧಿ ಪಡೆದಿದ್ದಾರೆ.
210
ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ಸಲೋನಿ ಬಾತ್ರಾ ಅವರಂತಹ ಅನುಭವಿ ತಾರೆಯರನ್ನು ಒಳಗೊಂಡ ಅನಿಮಲ್ ಸಿನಿಮಾದ ಯಶಸ್ಸಿನ ನಂತರ, ಸಂದೀಪ್ ರೆಡ್ಡಿ ವಂಗಾ ಹಳೆಯ ವೀಡಿಯೊ ಪುನಃ ಬೆಳಕಿಗೆ ಬಂದಿದೆ.
310
ಬಾಲಿವುಡ್ ಸೇರಿದಂತೆ ಜಾಗತಿಕವಾಗಿ ಅನಿಮಲ್ ಸಿನಿಮಾ 550 ಕೋಟಿ ರೂ.ಗೂ ಕಲೆಕ್ಷನ್ ಮಾಡಿದೆ. ಆದಾಗ್ಯೂ, ಅನಿಮಲ್ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಕ್ರೂರವಾಗಿ ಮತ್ತು ಅತ್ಯಂತ ಭಯಾನಕ ರೀತಿಯಲ್ಲಿ ಚಿತ್ರೀಕರಿಸಿದ್ದಕ್ಕಾಗಿ ವಂಗಾ ಅವರನ್ನು ಕೆಲವರು ಟೀಕಿಸಿದ್ದಾರೆ.
410
ಇನ್ನು ಸಂದೀಪ್ ರೆಡ್ಡಿ ವಾಂಗಾ ಅವರು, ತೆಲುಗುನಲ್ಲಿ ಅರ್ಜುನ್ ರೆಡ್ಡಿ ಸಿನಿಮಾ ಹಾಗೂ ಇದರ ಹಿಂದಿ ಅವತರಣಿಕೆ ಶಾಹೀದ್ ಕಪೂರ್ ಅಭಿನಯದ ಕಬೀರ್ ಸಿಂಗ್ ಸಿನಿಮಾ ನಿರ್ದೇಶನ ಮಾಡಿದ್ದರು. ಅದರಲ್ಲಿಯೂ ಸಮಾಜ ಒಪ್ಪಿಕೊಳ್ಳಲಾಗದಂತಹ ಕೆಲವು ದೃಶ್ಯಗಳನ್ನು ಜನರ ಮುಂದಿಟ್ಟಿದ್ದರು.
510
Sandeep Reddy Vanga
ವಾಂಗಾ ಅವರು ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನಿಮಾಗಾಗಿ ಅವರು ತಮ್ಮ ಭೂಮಿಯನ್ನು ಮಾರಾಟ ಮಾಡಬೇಕಾಯಿತು ಎಂದು ಚಲನಚಿತ್ರ ನಿರ್ಮಾಪಕ ಒಮ್ಮೆ ಹೇಳಿಕೊಂಡಿರುವ ವೀಡಿಯೂ ಈಗ ಮುನ್ನೆಲೆಗೆ ಬಂದಿದೆ.
610
ರೆಡ್ಡಿಟ್ ಬಳಕೆದಾರರು ಇತ್ತೀಚೆಗೆ ವಂಗಾ ಅವರ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು 36 ಎಕರೆ ಮಾವಿನ ತೋಟವನ್ನು 1.5 ಕೋಟಿ ರೂ.ಗೆ ಮಾರಾಟ ಮಾಡಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಈ ಹಣವನ್ನು ಅವರು ಅರ್ಜುನ್ ರೆಡ್ಡಿಯಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.
710
'ನಾನು ಮುಂದಿನ ತಿಂಗಳು ಶೂಟಿಂಗ್ ಶುರು ಮಾಡಬೇಕಿತ್ತು. ಆಗ ಹಣಕ್ಕಾಗಿ ಪರದಾಡುವಾಗ, ನನ್ನ ತಂದೆ ಮತ್ತು ನನ್ನ ಸಹೋದರ ನಾವು ಹೊಂದಿದ್ದ 36 ಎಕರೆ ಮಾವಿನ ತೋಟವನ್ನು 1.5 ಕೋಟಿ ರೂ.ಗೆ ಮಾರಾಟ ಮಾಡಿ ನನಗೆ ಹಣ ಕೊಟ್ಟರು. ಆ ಹಣವನ್ನು ಯೋಜನೆಯಲ್ಲಿ ಹೂಡಿಕೆ ಮಾಡಿದ್ದೇವೆ ಎಂದು ಹೇಳಿದರು.
810
ನಿಮಗೆ ಗೊತ್ತಾ, ಯಾವುದೇ ಒಂದು ಆಸ್ತಿ ಮಾರಾಟವಾದಾಗ ಮತ್ತು ಆ ಹಣವನ್ನು ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡುವಾಗ ಯಾವಾಗಲೂ ಭಯಪಡುತ್ತೀರಿ. ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ ಏಕೆಂದರೆ ಏನಾದರೂ ತಪ್ಪಾದರೆ ಎನ್ನುವ ಭಯದಲ್ಲಿಯೇ ಇರುತ್ತೇವೆ ಎಂದು ಹೇಳುವ ವಿಡಿಯೋ ಇದಾಗಿದೆ.
910
ವೀಡಿಯೊವನ್ನು ವೆಬ್‌ನಲ್ಲಿ ಮರು-ಶೇರ್ ಮಾಡಿದ ನಂತರ, ನೆಟಿಜನ್‌ಗಳು ಸಂದೀಪ್ ರೆಡ್ಡಿ ವಂಗಾ ಅವರ ಹೋರಾಟದ ಹಾದಿಯನ್ನು ಶ್ಲಾಘಿಸಿದ್ದಾರೆ. ಈಗ ಸಂದೀಪ್ ರೆಡ್ಡಿ ವಂಗಾ ಅವರ ಇತ್ತೀಚಿನ ಬಿಡುಗಡೆಯಾದ ಅನಿಮಲ್ ಮೂಲಕ ವಿಶ್ವದಾದ್ಯಂತ 600 ಕೋಟಿ ಕ್ಲಬ್‌ಗೆ ಪ್ರವೇಶಿಸಲು ಸಿದ್ಧವಾಗಿದೆ.
1010
animal director sandeep reddy vanga criticized for misogynistic dialogue
ಅನಿಮಲ್ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ ಜಾಗತಿಕವಾಗಿ 563 ಕೋಟಿ ಗಳಿಸಿದೆ. ಮತ್ತೊಂದೆಡೆ, ಅವರ ಮೊದಲ ಸಿನಿಮಾ ಅರ್ಜುನ್ ರೆಡ್ಡಿ ಕೂಡ ಬಾಕ್ಸ್ ಆಫೀಸ್ ಹಿಟ್ ಆಗಿತ್ತು.