ಅನಿಲ್‌ ಕಪೂರ್‌ ಪುತ್ರಿ ರಿಯಾ ಮದುವೆ: ಹುಡುಗ ಯಾರು ಗೊತ್ತಾ?

First Published Aug 14, 2021, 6:07 PM IST

ಬಾಲಿವುಡ್‌ ನಟ ಅನಿಲ್ ಕಪೂರ್ ಅವರ ಕಿರಿಯ ಮಗಳು ರಿಯಾ ಕಪೂರ್ ಅವರ ವಿವಾಹದ ಆಚರಣೆಗಳು ಆರಂಭವಾಗುತ್ತಿವೆ. ರಿಯಾ ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್‌  ಕರಣ್ ಬೂಲಾನಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವರದಿ ಪ್ರಕಾರ ಅನಿಲ್ ಕಪೂರ್ ಅವರ ಮಗಳ ಮದುವೆ  ಜುಹು ಬಂಗಲೆಯಲ್ಲಿ  ನೆಡೆಯುವುದು. ಕಪೂರ್ ಕುಟುಂಬ ಮದುವೆಯನ್ನು ಸಂಪೂರ್ಣ ರಹಸ್ಯವಾಗಿರಿಸಿದೆ. ವಿಶೇಷ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ. ಅನಿಲ್ ಅವರ ಮನೆಯ ಕೆಲವು ಫೋಟೋಗಳು ವೈರಲ್ ಆಗುತ್ತಿದ್ದು, ಅದರಲ್ಲಿ ಅವರ ಮನೆಯನ್ನು ಲೈಟಿಂಗ್‌ನಿಂದ ಅಲಂಕರಿಸಲಾಗಿದೆ.

2-3 ದಿನಗಳವರೆಗೆ  ನೆಡೆಯಲಿರುವ ಅನಿಲ್ ಕಪೂರ್ ಮಗಳು ರಿಯಾಳ ವಿವಾಹದ ಆಚರಣೆಗಳಿಗೆ ವಿಶೇಷ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಹಾಜಾರಾಗಲಿದ್ದಾರೆ. ಅದೇ ಸಮಯದಲ್ಲಿ, ಉದ್ಯಮಕ್ಕೆ ಸಂಬಂಧಿಸಿದ ಕೆಲವು ವಿಶೇಷ ಸ್ನೇಹಿತರನ್ನು ಅನಿಲ್ ಕಪೂರ್ ಆಹ್ವಾನಿಸಿದ್ದಾರೆ ಎಂಬ ವರದಿಗಳಿವೆ.

ಅನಿಲ್‌ ಕಪೂರ್‌ ಮನೆಯಲ್ಲಿ ಮಗಳ ಮದುವೆ ಸಂಭ್ರಮ ಕಂಡು ಬರುತ್ತಿದೆ. ಈಗಾಗಲೇ ಹಲವು ಸಂಬಂಧಿಕರು ಮನೆಗೆ ಆಗಮಿಸಿದ್ದಾರೆ. ಬೊಕ್ಕೆಗಳೊಂದಿಗೆ ಕಪೂರ್‌ ಬಂಗಲೆ ಜನ ಆಗಮಿಸುತ್ತರುವುದು ಕಂಡು ಬರುತ್ತಿದೆ.  

ವರದಿ ಪ್ರಕಾರ ಅನಿಲ್ ಕಪೂರ್ ಮಗಳ ಮದುವೆ  ಜುಹು ಬಂಗಲೆಯಲ್ಲಿ ನಡೆಯುವುದು. ಅವರ ಮನೆಯ ಕೆಲವು ಫೋಟೋಗಳು ವೈರಲ್ ಆಗುತ್ತಿದ್ದು, ಅದರಲ್ಲಿ ಅವರ ಮನೆಯನ್ನು ಲೈಟಿಂಗ್‌ನಿಂದ ಅಲಂಕರಿಸಲಾಗಿದೆ.

ಅನಿಲ್ ಕಪೂರ್ ಹಿರಿಯ ಮಗಳು ಸೋನಂ ಕಪೂರ್ ತಂದೆಯಂತೆ ನಟನಾ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಆರಿಸಿಕೊಂಡರೆ, ಕಿರಿಯ ಮಗಳು ರಿಯಾ ಪರದೆ ಹಿಂದಿನ ಕೆರಿಯರ್‌ ಆಯ್ಕೆ ಮಾಡಿಕೊಂಡಿದ್ದಾರೆ  .

ರಿಯಾ ಕಪೂರ್ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ನಿರ್ಮಿಸಿದ ಚಿತ್ರಗಳಲ್ಲಿ, ಸೋನಂ ಕಪೂರ್ ಪ್ರಮುಖ ನಟಿಯಾಗಿದ್ದರು. ಐಶಾ (2010), ಖೂಬ್ಸುರತ್ (2014) ಮತ್ತು ವೀರೆ ಡಿ ವೆಡ್ಡಿಂಗ್ (2018) ನಂತಹ ಚಲನಚಿತ್ರಗಳು ಸೇರಿವೆ.

ರಿಯಾ ಅವರು ಕರಣ್ ಬೂಲಾನಿಯೊಂದಿಗೆ ಕಳೆದ 13 ವರ್ಷಗಳಿಂದ ಸಂಬಂಧ ಹೊಂದಿದ್ದಾರೆ. ಆದರೆ, ಇಬ್ಬರೂ ಸಾರ್ವಜನಿಕವಾಗಿ ಅಥವಾ ಸಾಮಾಜಿಕ ಮಾಧ್ಯಮವು ಇಬ್ಬರ ನಡುವಿನ ಸಂಬಂಧದ ಬಗ್ಗೆ ಎಂದಿಗೂ
ಬಹಿರಂಗಪಡಿಸಿರಲಿಲ್ಲ.

ಅಂದಹಾಗೆ, ಕರಣ್‌ ಯಾವಾಗಲೂ ಕಪೂರ್‌ ಫ್ಯಾಮಿಲಿ ಫಂಕ್ಷನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ನಿರ್ದೇಶಕರಾಗಿರುವ ಕರಣ್‌ ಆಯೇಷಾ ಮತ್ತು ವೇಕಪ್ ಸಿದ್ ನಂತಹ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕರಣ್ ಅನೇಕ ಚಲನಚಿತ್ರಗಳು ಮತ್ತು ಶೋಗಳ ನಿರ್ದೇಶನ, ನಿರ್ಮಾಣ ಮತ್ತು ಡಬ್ಬಿಂಗ್ ಮಾಡಿದ್ದಾರೆ.

1982 ರಲ್ಲಿ ಜನಿಸಿದ ಕರಣ್ ಜಾಹೀರಾತು ಪ್ರಪಂಚದೊಂದಿಗೆ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಕರಣ್ ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾಲಯದಿಂದ ಚಲನಚಿತ್ರ ಮತ್ತು ಟಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ, ಕರಣ್ ಅನೇಕ ಜಾಹೀರಾತುಗಳನ್ನು ತಯಾರಿಸಿದ್ದರು. 

ಅವರು ತಮ್ಮ ಭಾವಿ ಮಾವ ಅಂದರೆ ಅನಿಲ್ ಕಪೂರ್ ಅವರ ಟಿವಿ ಸೀರಿಸ್‌  '24' ಅನ್ನು 2016 ರಲ್ಲಿ ನಿರ್ದೇಶಿಸಿದರು. ಆಯೇಷಾ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಿಯಾ ಮತ್ತು ಕರಣ್ ಭೇಟಿಯಾದರು. ಮೊದಲು ಸ್ನೇಹಿತರಾಗಿದ್ದ ಇಬ್ಬರೂ ನಂತರ ಡೇಟಿಂಗ್ ಆರಂಭಿಸಿದರು. ಸೋನಂ ಕಪೂರ್ ಮದುವೆಯಲ್ಲಿ ಕರಣ್ ತುಂಬಾ ಸಕ್ರಿಯರಾಗಿದ್ದರು. 

click me!