ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ತೆಲುಗು ನಟ ಶರ್ವಾನಂದ್: ಇಲ್ಲಿವೆ ಫೋಟೋಗಳು

Published : Jun 04, 2023, 04:07 PM ISTUpdated : Jun 04, 2023, 04:08 PM IST

ತೆಲುಗು ನಟ ಶರ್ವಾನಂದ್ ಟೆಕ್ಕಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ರಾಜಾಸ್ಥಾನದಲ್ಲಿ ಇಬ್ಬರ ಮದುವೆ ಅದ್ದೂರಿಯಾಗಿ ನೆರವೇರಿದೆ. 

PREV
19
ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ತೆಲುಗು ನಟ ಶರ್ವಾನಂದ್: ಇಲ್ಲಿವೆ ಫೋಟೋಗಳು

ತೆಲುಗು ನಟ ಶರ್ವಾನಂದ್ ಟೆಕ್ಕಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ರಾಜಾಸ್ಥಾನದಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಶರ್ವಾನಂದ್ ಮತ್ತು ರಕ್ಷಿತಾ ಇಬ್ಬರೂ ವೈವಾಹಿಕ ಜಾವನಕ್ಕೆ  ಕಾಲಿಟ್ಟರು. ನವ ಜೋಡಿಗೆ ಅಭಿಮಾನಿಗಳು ಹಾಗೂ ಸಿನಿಮಾ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. 

29

ನಟ ಶರ್ವಾನಂದ್ ಈಗ ರಕ್ಷಿತಾ ರೆಡ್ಡಿ ಜೂನ್ 3 ರಂದು ರಾತ್ರಿ 11 ಗಂಟೆ ಮುಹೂರ್ತದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು ಎಂದು ವರದಿಯಾಗಿದೆ. ಮದುವೆಯಲ್ಲಿ ರಾಮ್ ಚರಣ್, ಸಿದ್ಧಾರ್ಥ್, ನಿರ್ಮಾಪಕ ವಂಶಿ ಮತ್ತು ಕೆಲವು ರಾಜಕಾರಣಿಗಳು ಭಾಗವಹಿಸಿದ್ದರು. ಸದ್ಯ ಶರ್ವಾನಂದ್ ಮತ್ತು ರಕ್ಷಿತಾ ಮದುವೆ ಫೋಟೋಗಳು ವೈರಲ್ ಆಗಿವೆ. 
 

39

ಇವರಿಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶರ್ವಾನಂದ್ ಶೆರ್ವಾನಿಯಲ್ಲಿ ಕಾಣಿಸಿಕೊಂಡರೆ ರಕ್ಷಿತಾ ಸೀರೆಯಲ್ಲಿ ಮಿಂಚಿದ್ದಾರೆ. ಇಬ್ಬರ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

49

ಕಳೆದ ಎರಡು ದಿನಗಳಿಂದ ಮದುವೆ ಸಂಭ್ರಮ ಜೋರಾಗಿತ್ತು. ಇಡೀ ಕುಟುಂಬ ರಾಜಾಸ್ಥಾನದಲ್ಲಿ ಬೀಡುಬಿಟ್ಟಿತ್ತು. ಹಳದಿ, ಮೆಹಂದ್ ಮತ್ತು ಸಂಗೀತ ಸಮಾರಂಭ ಅದ್ದೂರಿಯಾಗಿ ನೆಡೆದಿದೆ. ಶರ್ವಾನಂದ್ ಮತ್ತು ರಕ್ಷಿತಾ ಮದುವೆ ಜೈಪುರದ ಲೀಲಾ ಪ್ಯಾಲೇಸ್‌ನಲ್ಲಿ ನೆರವೇರಿದೆ. 

59

ಜೈಪುರದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಶರ್ವಾನಂದ್ ಮತ್ತು ರಕ್ಷಿತಾ ಜೋಡಿ ಹೈದರಾಬಾದ್‌ನಲ್ಲಿಅದ್ದೂರಿ ಆರತಕ್ಷತೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜೂನ್ 9ರಂದು ಆರತಕ್ಷತೆಗೆ ಕುಟುಂಬದವರು ಪ್ಲಾನ್ ಮಾಡಿದ್ದಾರೆ. 
 

69

ಆರತಕ್ಷತೆ ಸಮಾರಂಭದಲ್ಲಿ ಇಡೀ ಟಾಲಿವುಡ್ ಭಾಗಿಯಾಗುವ ನಿರೀಕ್ಷೆ ಇದೆ. ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ರಾಜಕೀಯ ಹಾಗೂ ಬೇರೆ ಬೇರೆ ಭಾಷೆಯ ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಲಿದ್ದಾರೆ. 

79

ಜನವರಿಯಲ್ಲಿ ಶರ್ವಾನಂದ್ ಮತ್ತು ರಕ್ಷಿತಾ ನಿಶ್ಚಿತಾರ್ಥ ನಡೆದಿತ್ತು. ಜನವರಿ 26ರಂದು ನಿಶ್ಚಿತಾರ್ಥ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಮದುವೆ ಮುರಿದು ಬಿದ್ದಿದೆ ಎನ್ನುವ ಸುದ್ದಿ ಕೂಡ ಇತ್ತು. ಆದರೆ ಅದೆಲ್ಲದಕ್ಕೂ ತೆರೆ ಎಳೆದಿದ್ದಾರೆ ಶರ್ವಾನಂದ್.

89
Sharwanand

ಶರ್ವಾನಂದ್ ಪತ್ನಿ ರಕ್ಷಿತಾ ರೆಡ್ಡಿ ಅಮೆರಿಕದ ಟೆಕ್ಕಿ. ಅವರ ತಂದೆ ಮಧುಸೂಧನ್ ರೆಡ್ಡಿ, ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದರೆ. ಅವರ ಅಜ್ಜ ರಾಜಕಾರಣಿ ಬೊಜ್ಜಲ ಗೋಪಾಲ ಕೃಷ್ಣ ರೆಡ್ಡಿ.
 

99

ಶರ್ವಾನಂದ್ ತಮ್ಮ 35 ನೇ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇದನ್ನು ಶ್ರೀರಾಮ್ ಆದಿತ್ಯ ನಿರ್ದೇಶಿಸುತ್ತಿದ್ದಾರೆ. ಸದ್ಯ ಮದುವೆ ಕೆಲಸಗಳನ್ನು ಮುಗಿಸಿ ಸದ್ಯದಲ್ಲೇ ಮತ್ತೆ ಸಿನಿಮಾ ಕೆಲಸಕ್ಕೆ ಹಾಜರಾಗಲಿದ್ದಾರೆ. 
 

Read more Photos on
click me!

Recommended Stories