ವಿಜಯ್ ದೇವರಕೊಂಡ ಮನೆಯಲ್ಲಿ ಅನನ್ಯಾ ಪಾಂಡೆ; ವಿಶೇಷ ಪೂಜೆಯಲ್ಲಿ ಲೈಗರ್ ನಟಿ ಭಾಗಿ

Published : Aug 17, 2022, 02:00 PM ISTUpdated : Aug 17, 2022, 05:06 PM IST

ಅನನ್ಯಾ ಪಾಂಡೆ, ಟಾಲಿವುಡ್ ನಟ ವಿಜಯ್ ದೇವರಕೊಂಡ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.  ವಿಜಯ್ ದೇವರಕೊಂಡ ಅವರ ಹೈದರಾಬಾದ್ ಮನೆಯಲ್ಲಿ ಕಾಣಿಸಿಕೊಂಡಿರುವ ಅನನ್ಯಾ ಪಾಂಡೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂದಹಾಗೆ ಅನನ್ಯಾ ದಿಢೀರ್ ಅಂತ ವಿಜಯ್ ದೇವರಕೊಂಡ ಮನೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ ಪೂಜೆಗಾಗಿ.

PREV
17
ವಿಜಯ್ ದೇವರಕೊಂಡ ಮನೆಯಲ್ಲಿ ಅನನ್ಯಾ ಪಾಂಡೆ; ವಿಶೇಷ ಪೂಜೆಯಲ್ಲಿ ಲೈಗರ್ ನಟಿ ಭಾಗಿ

ಟಾಲಿವುಡ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಪಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ವಿಜಯ್ ದೇವರಕೊಂಡ ದೇಶದಾದ್ಯಂತ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.  ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ಸ್ಟಾರ್ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ.
 

27

ಮೊದಲ ಬಾರಿಗೆ ಅನನ್ಯಾ ಟಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮತ್ತು ಅನನ್ಯಾ ಇಬ್ಬರು ದೇಶದ ನಾನಾಭಾಗಳಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಭರ್ಜರಿ ಪ್ರಚಾರ ಮಾಡುತ್ತಿರುವ ವಿಜಯ್ ಮತ್ತು ಅನನ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

37

ಇದೀಗ ಅನನ್ಯಾ ಪಾಂಡೆ, ಟಾಲಿವುಡ್ ನಟ ವಿಜಯ್ ದೇವರಕೊಂಡ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರ ಹೈದರಾಬಾದ್ ಮನೆಯಲ್ಲಿ ಕಾಣಿಸಿಕೊಂಡಿರುವ ಅನನ್ಯಾ ಪಾಂಡೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂದಹಾಗೆ ಅನನ್ಯಾ ದಿಢೀರ್ ಅಂತ ವಿಜಯ್ ದೇವರಕೊಂಡ ಮನೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ ಪೂಜೆಗಾಗಿ.
 

47

ವಿಜಯ್ ದೇವರಕೊಂಡ ಮನೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪೂಜೆಗೆ ಬಾಲಿವುಡ್ ನಟಿ ಅನನ್ಯಾ ಕೂಡ ಹಾಜರಾಗಿದ್ದರು. ವಿಜಯ್ ಮತ್ತು ಅನನ್ಯಾ ಇಬ್ಬರು ಒಟ್ಟಿಗೆ ಕುಳಿತು ದೇವಕೊಂಡ ಅವರ ತಾಯಿಯ ಆಶೀರ್ವಾದ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ. 

57

ಅಂದಹಾಗೆ ವಿಜಯ್ ದೇವರಕೊಂಡ ಮನೆಯಲ್ಲಿ ಅವರ ತಾಯಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಲಿಗರ್ ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನಲೇ ವಿಜಯ್ ತಾಯಿ ವಿಶೇಷ  ಪೂಜೆ ಮಾಡಿಸಿದ್ದಾರೆ. ತನ್ನ ನಿವಾಸದಲ್ಲೇ ಪೂಜೆ ಇಟ್ಟುಕೊಂಡಿದ್ದರು. ಹಾಗಾಗಿ ಲೈಗರ್ ಸ್ಟಾರ್ ಪೂಜೆಯಲ್ಲಿ ಹಾಜರಾಗಿದ್ದರು. 

67

ಪೂಜೆಯಲ್ಲಿ ಭಾಗಿಯಾದ ಫೋಟೋವನ್ನು ವಿಜಯ್ ದೇವರಕೊಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ಈ ತಿಂಗಳು ಪೂರ್ತಿ ದೇಶದ ಎಲ್ಲಾ ಭಾಗಗಳಲ್ಲಿ ಸುತ್ತಾಡಿದ್ದೀವಿ. ತುಂಬಾ ಪ್ರೀತಿ ಮತ್ತು ಅಭಿಮಾನ ಸಿಕ್ಕಿದೆ. ಇದು ದೇವರ ದಯೆ. ಆದರೆ ನಮ್ಮ ರಕ್ಷಣೆಗಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಕೈಗೆ ರಕ್ಷಣೆಯ ಬ್ಯಾಂಡ್ ಕಟ್ಟಿದ್ದಾರೆ. ಈಗ ಅವರು ನೆಮ್ಮದಿಯಾಗಿ ಮಲಗುತ್ತಾರೆ. ನಾವು ನಮ್ಮ ಪ್ರವಾಸ ಮುಂದುವರೆಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.   

77

ಅಂದಹಾಗೆ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಇಬ್ಬರು ಲೈಗರ್ ಸಿನಿಮಾ ಬಳಿಕ ಸಿಕ್ಕಾಪಟ್ಟೆ ಆಪ್ತರಾಗಿದ್ದಾರೆ. ಇಬ್ಬರ ಆಪ್ತತೆ ನೋಡಿ ಅನೇಕರು ಸ್ನೇಹಿಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುತ್ತಿದ್ದಾರೆ. ಅನನ್ಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಕೂಡ ಜೋರಾಗಿದೆ. ಇತ್ತ ವಿಜಯ್ ರಶ್ಮಿಕಾಗೂ ಕೈ ಕೊಟ್ಟಿದ್ದಾರೆ ಎನ್ನಲಾಗಿದೆ. ಇದೀಗ ಅನನ್ಯಾ, ದೇವರಕೊಂಡ ಮನೆಯಲ್ಲೇ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. 

click me!

Recommended Stories