ಬಿಕಿನಿಯಲ್ಲಿ ಮತ್ಸಕನ್ಯೆ ಅನನ್ಯಾ ಪಾಂಡೆ: ವಿಡಿಯೋ ವೈರಲ್‌!

Suvarna News   | Asianet News
Published : Sep 24, 2021, 06:41 PM IST

ಚಂಕಿ ಪಾಂಡೆ ಅವರ ಪುತ್ರಿ ನಟಿ ಅನನ್ಯಾ ಪಾಂಡೆ ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ಕ್ವಾಲಿಟಿ ಟೈಮ್‌ ಕಳೆಯುತ್ತಿದ್ದಾರೆ. ಇತ್ತೀಚೆಗೆ, ಅನನ್ಯಾ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ನಂತರ ಅನನ್ಯಾ ಲೇಟೆಸ್ಟ್‌ ಆಗಿ ಸಮುದ್ರದಲ್ಲಿ ಈಜುತ್ತಿರುವ ವಿಡೀಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.   

PREV
17
ಬಿಕಿನಿಯಲ್ಲಿ  ಮತ್ಸಕನ್ಯೆ ಅನನ್ಯಾ ಪಾಂಡೆ: ವಿಡಿಯೋ ವೈರಲ್‌!

ಇತ್ತೀಚೆಗೆ ಮಾಲ್ಡೀವ್ಸ್‌ಗೆ ಹಾರಿದ ಅನನ್ಯಾ ಅಲ್ಲಿಂದ ಕೆಲವು ಪೋಟೋಗಳನ್ನು ಇನ್‌ಸ್ಟಾದಲ್ಲಿ  ಪೋಸ್ಟ್ ಮಾಡಿದ್ದಾರೆ. ಅವರ ಬಿಕಿನಿ ಲುಕ್‌ಗೆ (bikini Look) ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ಇತ್ತೀಚಿನ ಅವರ ವಿಡಿಯೋದಲ್ಲಿ ಅನನ್ಯಾ ಬಿಳಿ ಬಿಕಿನಿಯಲ್ಲಿ ಮರ್ಮೇಡ್‌ (Mermaid) ಆಗಿದ್ದಾರೆ.

27

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಅವರು ಸಮುದ್ರದಲ್ಲಿ ಈಜುತ್ತಿರುವುದನ್ನು ತೋರಿಸುತ್ತದೆ. ಅನನ್ಯಾ ಶೇರ್‌ ಮಾಡಿರುವ ವಿಡೀಯೋದಲ್ಲಿ ಅವರು  ಸಮುದ್ರ ಆಮೆಯ ಜೊತೆ ರೇಸ್‌ ಮಾಡುತ್ತಿರುವಂತೆ ಕಾಣುತ್ತಿದೆ. ಅವರ ವಿಡಿಯೋ ವೈರಲ್ (Viral Video) ಆಗುತ್ತಿದೆ,

37

'ಹಸಿರು ಸಮುದ್ರ ಆಮೆಯೊಂದಿಗೆ ಈಜುವುದು - ನನ್ನ ಜೀವನದ ಅತ್ಯಂತ ಅದ್ಭುತ ಅನುಭವಗಳಲ್ಲಿ ಒಂದಾಗಿದೆ. ನಮ್ಮ ಗ್ರಹ ತುಂಬಾ ದೊಡ್ಡದಾಗಿದೆ ಮತ್ತು ಸುಂದರವಾಗಿದೆ ಹಾಗೂ ಇದು ಹಲವು ವಿಶಿಷ್ಟ ಜೀವಿಗಳ ಮನೆ. ತುಂಬಾ ತಡವಾಗುವ ಮುಂಚೆ ನಾವು ಇದನ್ನು ನಾವ  ರಕ್ಷಿಸಬೇಕು,'  ಎಂದು ಅವರು ತಮ್ಮ ಪೋಸ್ಟ್‌ಗೆ ಕ್ಯಾಪ್ಷನ್ ನೀಡಿದ್ದಾರೆ.

47

ಈ ಚಿತ್ರಗಳಲ್ಲಿ, ಅನನ್ಯಾ ಆರೇಂಜ್‌ ಕಲರ್‌  ಬಿಕಿನಿಯಲ್ಲಿ  ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಅನನ್ಯ ಫ್ಲೆಮಿಂಗೊ ​ಟಾಯ್‌ ಮೇಲೆ ಕುಳಿತಿರುವುದು ಕಂಡುಬರುತ್ತದೆ. ಅನನ್ಯಾ ಈ ದಿನಗಳಲ್ಲಿ ಮಾಲ್ಡೀವ್ಸ್‌ನ ದಕ್ಷಿಣ ಆರಿ ಅಟಾಲ್ ಬೀಚ್‌ನಲ್ಲಿದ್ದಾರೆ.

57

ಅನನ್ಯ ಪಾಂಡೆ 2019 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಸಿನಿಮಾ ಸ್ಟೂಡೆಂಟ್‌ ಅಫ್ ದಿ ಇಯರ್‌ 2'. ಇದರಲ್ಲಿ   ತಾರಾ ಸುತಾರಿಯಾ ಮತ್ತು ಟೈಗರ್ ಶ್ರಾಫ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 

67

ಅನನ್ಯ ಪಾಂಡೆ ಕೊನೆಯ ಬಾರಿಗೆ 'ಖಾಲಿ-ಪೀಲಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಶಾಹಿದ್ ಕಪೂರ್ ಸಹೋದರ ಇಶಾನ್ ಖಟ್ಟರ್ ಜೊತೆಗಿದ್ದರು. ಈ ಸಿನಿಮಾದ ನಂತರ ಇಬ್ಬರೂ ಹಾಲಿಡೇಗೆ ಆನಂದಿಸಲು ಮಾಲ್ಡೀವ್ಸ್‌ಗೆ ಹೋಗಿದ್ದರು. 

77

ಕೆಲಸದ ಮುಂಭಾಗದಲ್ಲಿ, ಅನನ್ಯ ಪಾಂಡೆ ಶೀಘ್ರದಲ್ಲೇ ಶಕುನ್ ಬಾತ್ರಾ ಅವರ  ಇನ್ನೂ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಾಂತ್ ಚತುರ್ವೇದಿ ಮತ್ತು ದೀಪಿಕಾ ಪಡುಕೋಣೆ ಕೂಡ ಅವರೊಂದಿಗೆ ಈ ಸಿನಿಮಾದಲ್ಲಿ ಇದ್ದಾರೆ. ಇದಲ್ಲದೇ, ಅನನ್ಯ ಪಾಂಡೆ ದಕ್ಷಿಣದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಅವರೊಂದಿಗೆ ಲಿಗರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!

Recommended Stories