#ArrestTrisha ಟ್ರೆಂಡಿಂಗ್ ಕಾರಣದಿಂದ ಸಂಕಷ್ಟದಲ್ಲಿ ಐಶ್ವರ್ಯಾ ರೈ ಸಿನಿಮಾ!

Suvarna News   | Asianet News
Published : Sep 08, 2021, 01:59 PM IST

ಬಾಲಿವುಡ್‌ ದಿವಾ ಐಶ್ವರ್ಯಾ ರೈ ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಐಶ್ವರ್ಯಾ ಮಣಿರತ್ನಂ ಅವರ ಮುಂದಿನ ತಮಿಳು ಸಿನಿಮಾ ಚಿತ್ರ ಪೊನ್ನಿಯನ್ ಸೆಲ್ವನ್‌ನಲ್ಲಿ ನಟಿಸಲಿದ್ದಾರೆ. ಈ ನಡುವೆ ಇಂಟರ್‌ನೆಟ್‌ನಲ್ಲಿ 'ತ್ರಿಶ್ರಾ ಆರೆಸ್ಟ್‌' ಎಂಬ ಟ್ರೆಂಡ್‌ ಕಾಣಿಸಿಕೊಂಡಿದೆ. ಇದರಿಂದ ಪೊನ್ನಿಯನ್ ಸೆಲ್ವನ್‌ ಸಿನಿಮಾ ತೊಂದರೆಗೆ ಸಿಲುಕಿದೆ. ತ್ರಿಶಾಗೂ ಈ ಸಿನಿಮಾಕ್ಕೂ ಏನು ಸಂಬಂಧ ಇಲ್ಲಿದೆ ನೋಡಿ.   

PREV
17
#ArrestTrisha ಟ್ರೆಂಡಿಂಗ್ ಕಾರಣದಿಂದ ಸಂಕಷ್ಟದಲ್ಲಿ ಐಶ್ವರ್ಯಾ ರೈ ಸಿನಿಮಾ!

ಪ್ರಸ್ತುತ ಇಂಟರ್‌ನೆಟ್‌ನಲ್ಲಿ 'ತ್ರಿಶ್ರಾ ಆರೆಸ್ಟ್‌' ಎಂಬ ಟ್ರೆಂಡ್‌ ಕಾಣಿಸಿಕೊಂಡಿದೆ. ನೆಟಿಜನ್ಸ್‌ ನಟಿ ತ್ರಿಷಾಳನ್ನು ಬಂಧಿಸಲು ಆಗ್ರಹ ನೆಡೆಸುತ್ತಿದ್ದಾರೆ. ಈ ಮೂಲಕ ಮಣಿರತ್ನಂ ಅವರ ಚಿತ್ರ ಪೊನ್ನಿಯನ್ ಸೆಲ್ವನ್ ಸಂಕಷ್ಟಕ್ಕೆ ಸಿಲುಕಿದೆ.

27

ಮಣಿರತ್ನಂ ಅವರ ಸಿನಿಮಾ ಪೊನ್ನಿಯನ್ ಸೆಲ್ವನ್, ಇದರಲ್ಲಿ ಐಶ್ವರ್ಯ ರೈ ಕೂಡ ನಟಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಈ ಚಿತ್ರ. ಇದು ಐತಿಹಾಸಿಕ ಮತ್ತು ಆ್ಯಕ್ಷನ್‌ ಕಥೆಯನ್ನು ಆಧರಿಸಿದ ಉತ್ತಮ ಚಿತ್ರ ಎಂದು ಹೇಳಲಾಗಿದೆ. ಈಗ ಚಿತ್ರವು ಟ್ರೋಲಿಂಗ್‌ನಿಂದ ತೊಂದರೆಗ ಸಿಲುಕಿದೆ.

37

ಮಣಿರತ್ನಂ ಅವರ ಸಿನಿಮಾ ಪೊನ್ನಿಯನ್ ಸೆಲ್ವನ್, ಇದರಲ್ಲಿ ಐಶ್ವರ್ಯ ರೈ ಕೂಡ ನಟಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿದೆ. ಇದು ಐತಿಹಾಸಿಕ ಮತ್ತು ಆ್ಯಕ್ಷನ್ ಆಧಾರಿತ ಕಥೆಯನ್ನಾಧರಿಸಿದ ಉತ್ತಮ ಚಿತ್ರ ಎಂದು ಹೇಳಲಾಗಿದೆ. ಈಗ ಚಿತ್ರವು ಟ್ರೋಲಿಂಗ್‌ನಿಂದ ತೊಂದರೆಗ ಸಿಲುಕಿದೆ.

47
Trisha

ನಟಿ ತ್ರಿಷಾ ಚಪ್ಪಲಿ ಧರಿಸಿ ಧಾರ್ಮಿಕ ಸ್ಥಳವನ್ನು ಪ್ರವೇಶಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟಿಯನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಟಿಯನ್ನು ಟ್ರೋಲ್‌ ಮಾಡಲಾಗುತ್ತಿದೆ.

57

ತ್ರಿಷಾ ಇಂದೋರ್‌ನಲ್ಲಿರುವ ಹಳೆಯ ದೇವಸ್ಥಾನದಲ್ಲಿ ಚಿತ್ರೀಕರಣ ನೆಡೆಸುತ್ತಿದ್ದರು ಮತ್ತು ಆಕೆಯ ಮತ್ತು ಐಶ್ವರ್ಯ ರೈ ನಡುವೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಪವಿತ್ರ ದೇಗುಲದ ಒಳಗೆ ತ್ರಿಶಾ ಚಪ್ಪಲಿ ಧರಿಸಿರುವುದು  ಜನರ ಗಮನ ಸೆಳೆದಿದೆ.


 

 

67

ಕೆಲವೇ ಸಮಯದಲ್ಲಿ, ಆಕೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಪ್ರತಿಕ್ರಿಯೆ ಕಂಡು ಬಂದಿವೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಇಂಟರ್‌ನೆಟ್‌ನಲ್ಲಿ 'ತ್ರಿಶ್ರಾ ಆರೆಸ್ಟ್‌' ಎಂದು ಟ್ರೆಂಡಿಂಗ್‌ ಆಗುತ್ತಿದೆ. 

 

77

ಕೆಲ ದಿನಗಳ ಹಿಂದೆ ಚಿತ್ರದ ಶೂಟಿಂಗ್ ವೇಳೆ ಕುದುರೆಯೊಂದು ಸ್ಥಳದಲ್ಲೇ ಸಾವನ್ನಪ್ಪಿತ್ತು. ಇದರ ವಿರುದ್ಧ ಪೆಟಾ ಇಂಡಿಯಾ ದೂರು ದಾಖಲಿಸಿದೆ ಮತ್ತು ಅಬ್ದುಲ್ಲಪುರಮೆಂಟ್ ಪೊಲೀಸರು ಮದ್ರಾಸ್ ಟಾಕೀಸ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಚಿತ್ರವು ಹಿಸ್ಟೊರಿಕಲ್‌ ಡ್ರಾಮಾ ಆಗಿದ್ದು ಐಶ್ವರ್ಯ ರೈ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

click me!

Recommended Stories