ಒಂದೇ ತರ ಔಟ್‌ಫಿಟ್‌ನಲ್ಲಿ ಅನನ್ಯಾ-ದೇವರಕೊಂಡ, ರಶ್ಮಿಕಾಗೆ ಫುಲ್ ಟೆನ್ಷನ್?

Published : Aug 17, 2022, 06:00 PM IST

ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Panday) ಮತ್ತು ದಕ್ಷಿಣದ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಅವರು ತಮ್ಮ ಮುಂಬರುವ ಚಿತ್ರ 'ಲೈಗರ್' ಪ್ರಚಾರಕ್ಕಾಗಿ ವಾರಂಗಲ್‌ನಲ್ಲಿ ಇಬ್ಬರೂ ಕಪ್ಪು ಬಣ್ಣ ಔಟ್‌ ಫಿಟ್‌ ಧರಿಸಿರುವ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಸೋಮವಾರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್ 2'  ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ, ಇದರಲ್ಲಿ ಅವರು ತಮ್ಮ ಸಹ-ನಟ ವಿಜಯ್ ಅವರೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು. ಈ ಜೋಡಿಯ ಲುಕ್ ನೋಡಿ ರಶ್ಮಿಕಾ ಮಂದಣ್ಣ ಫುಲ್ ಟೆನ್ಸ್ ಆಗಿದ್ದಾರೆಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

PREV
18
ಒಂದೇ ತರ ಔಟ್‌ಫಿಟ್‌ನಲ್ಲಿ ಅನನ್ಯಾ-ದೇವರಕೊಂಡ, ರಶ್ಮಿಕಾಗೆ ಫುಲ್ ಟೆನ್ಷನ್?

ಅನನ್ಯಾ ಪಾಂಡೆ ಮತ್ತು ದಕ್ಷಿಣದ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರ 'ಲೈಗರ್' ಪ್ರಚಾರಕ್ಕಾಗಿ ವಾರಂಗಲ್‌ನಲ್ಲಿ ಇಬ್ಬರೂ ಕಪ್ಪು ಬಣ್ಣ ಔಟ್‌ ಫಿಟ್‌ ಧರಿಸಿರುವ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

28

ವಿಜಯ್‌ ದೇವರಕೊಂಡ ಕಪ್ಪು ಕುರ್ತಾ ಪೈಜಾಮಾದಲ್ಲಿ ಹ್ಯಾಂಡ್‌ಸಮ್‌ ಆಗಿ ಕಾಣುತ್ತಿದ್ದರೆ, ಅನನ್ಯಾ ಕಪ್ಪು ಲೆಹೆಂಗಾದಲ್ಲಿ ಮ್ಯಾಚಿಂಗ್ ಬ್ಲೌಸ್‌ನೊಂದಿಗೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅನನ್ಯಾ ತನ್ನ ಡ್ರೆಸ್‌ ಅನ್ನು ಗೋಲ್ಡನ್ ಜುಮ್ಕಿಗಳ ಜೊತೆ ಮ್ಯಾಚ್‌ ಮಾಡಿಕೊಂಡಿದ್ದಾರೆ.

38

ಸ್ಪೋರ್ಟ್ಸ್ ಆಕ್ಷನ್ ಚಿತ್ರ 'ಲೈಗರ್' ಆಗಸ್ಟ್ 25, 2022 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬರಲು ಸಿದ್ಧವಾಗಿದೆ.  COVID-19 ಕಾರಣದಿಂದಾಗಿ ಹಲವಾರು ವಿಳಂಬಗಳ ನಂತರ, ತಯಾರಕರು ಪ್ರಸ್ತುತ ಚಲನಚಿತ್ರವನ್ನು ಪೂರ್ಣ ಸ್ವಿಂಗ್‌ನಲ್ಲಿ ಪ್ರಚಾರ ಮಾಡುತ್ತಿದ್ದಾರೆ. 

48

ಧರ್ಮ ಪ್ರೊಡಕ್ಷನ್ಸ್ ಇತ್ತೀಚೆಗೆ ಚಿತ್ರದ ಟ್ರೈಲರ್ ಮತ್ತು ಮೂರು ಹಾಡುಗಳನ್ನು ಅನಾವರಣಗೊಳಿಸಿತು, 'ಅಕ್ಡಿ ಪಕ್ಡಿ,' 'ವಾಟ್ ಲಗಾ ಡೆಂಗೆ,' ಮತ್ತು 'ಆಫತ್,' ಇದು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಗಳಿಸಿದೆ. ಈ ಚಿತ್ರವು ಹಿಂದಿ ಚಿತ್ರರಂಗದಲ್ಲಿ ವಿಜಯ್ ಅವರ ಚೊಚ್ಚಲ ಚಿತ್ರವಾಗಿದೆ ಮತ್ತು ಅನನ್ಯ ಅವರ ಮೊದಲ ಬಹುಭಾಷಾ ಚಿತ್ರವಾಗಿದೆ.
 

58

ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ತಮ್ಮ ಬಹು ನಿರೀಕ್ಷಿತ ಚಿತ್ರ ಲಿಗರ್‌ಗಾಗಿ ಸಜ್ಜಾಗುತ್ತಿದ್ದಾರೆ ಮತ್ತು ಪೂರ್ಣ ಸ್ವಿಂಗ್‌ನಲ್ಲಿ ಚಿತ್ರದ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ನಡುವೆ ಅವರ ಬಗ್ಗೆ ಹಲವು ರೂಮರ್‌ಗಳು ವೈರಲ್‌ ಆಗುತ್ತಿವೆ.

68

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಬ್ರೇಕಪ್ ಆಗಿದೆ. ವಿಜಯ್ ದೇವರಕೊಂಡ, ರಶ್ಮಿಕಾಗೆ ಕೈಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದೇವರಕೊಂಡ ಹಿಂದಿಗೆ ಎಂಟ್ರಿ ಕೊಟ್ಟ ಬಳಿಕ ರಶ್ಮಿಕಾರಿಂದ ದೂರ ಆಗಿದ್ದಾರೆ ಎನ್ನಲಾಗಿದೆ.

78

ಅಷ್ಟೇ ಅಲ್ಲ ಪ್ರಚಾರದ ಸಮಯದಲ್ಲಿನ ಇವರ ನಡುವಿನ ಕೆಮಿಸ್ಟ್ರಿ ನೋಡಿದ ಜನರು ಈ ಜೋಡಿ ನಡುವೆ ಕೋ ಸ್ಟಾರ್‌ಗಿಂತ ಹೆಚ್ಚಿನದು ನಡಯುತ್ತಿದೆ ಎನ್ನುತ್ತಿದ್ದಾರೆ. ವಿಜಯ್ ದೇವರಕೊಂಡ ಸದ್ಯ ಬಾಲಿವುಡ್ ಸ್ಟಾರ್ ಅನನ್ಯಾ ಪಾಂಡೆ ಹಿಂದೆ ಬಿದ್ದಿದ್ದಾರೆ ಎನ್ನುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ.

88

ಲೈಗರ್‌ ಜೊತೆಗೆ, ಅನನ್ಯಾ 'ಖೋ ಗಯೇ ಹಮ್ ಕಹಾನ್' ನಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ಗೌರವ್ ಆದರ್ಶ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ವಿಜಯ್ ಅವರು ಸಮಂತಾ ರುತ್ ಪ್ರಭು ಅವರೊಂದಿಗೆ ಬಹುಭಾಷಾ ಚಿತ್ರ 'ಖುಷಿ' ಯಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories