ಪಂಚಾಯತ್ 2 ಖ್ಯಾತಿಯ ಅಂಚಲ್ ತಿವಾರಿ ಸಾವಿನ ಸುದ್ದಿ ಸುಳ್ಳು, ಸ್ಪಷ್ಟನೆ ನೀಡಿದ ನಟಿ!

Published : Feb 29, 2024, 04:09 PM IST

ಪಂಚಾಯತ್ 2 ಸೀರಿಸ್ ಮೂಲಕ ಭಾರಿ ಜನಪ್ರಿಯರಾಗಿರುವ ನಟಿ ಅಂಚಲ್ ತಿವಾರಿ ನಟಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಮಾಹಿತಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಸ್ವತಃ ಅಂಚಲ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ.

PREV
18
ಪಂಚಾಯತ್ 2 ಖ್ಯಾತಿಯ ಅಂಚಲ್ ತಿವಾರಿ ಸಾವಿನ ಸುದ್ದಿ ಸುಳ್ಳು, ಸ್ಪಷ್ಟನೆ ನೀಡಿದ ನಟಿ!

ಬಿಹಾರದ ಕೈಮೂರ್ ಜಿಲ್ಲೆಯ ದೇವಕಾಲಿ ಗ್ರಾಮದಲ್ಲಿ ಫೆಬ್ರವರಿ 25ರಂದು ನಡೆದ ಅಫಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಪಂಚಾಯತ್ 2 ಸೀರಿಸ್ ನಟಿ ಅಂಚಲಿ ತಿವಾರಿ ಕೂಡ ನಿಧನರಾಗಿದ್ದಾರೆ ಅನ್ನೋ ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡಿತ್ತು.

28

ಈ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಬೋಜ್‌ಪುರಿ ನಟಿ ಅಂಚಲ್ ತಿವಾರಿ ಕೂಡ ಒಬ್ಬರು. ಹೀಗಾಗಿ ಪಂಚಾಯತ್ 2 ನಟಿ ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಇದೀಗ ಸ್ವತಃ ನಟಿ ಅಂಚಲ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ.
 

38

ಫೆ.26ರಂದು ನಡೆದ ಅಪಘಾತದಲ್ಲಿ ಪಂಚಾಯತ್ 2 ನಟಿ ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ಸುಳ್ಳು. ಈ ರೀತಿ ಸುಳ್ಳು ಸುದ್ದಿಯಿಂದ ನನ್ನ ಕುಟುಂಬಸ್ಥರು, ಆಪ್ತರಿಗೆ ತೀವ್ರ ನೋವಾಗಿದೆ. ತಕ್ಷಣವೇ ಈ ಸುದ್ದಿಯನ್ನು ಡಿಲೀಟ್ ಮಾಡಿ ಎಂದು ಅಂಚಲಿ ತಿವಾರಿ ಮನವಿ ಮಾಡಿದ್ದಾರೆ.
 

48

ಕೆಲ ಮಾಧ್ಯಮಗಳು ಅಂಚಲ್ ತಿವಾರಿ, ಮಾಡೆಲ್ ಪೂನಂ ಪಾಂಡೆ ರೀತಿ ಸುಳ್ಳು ಸಾವಿನ ಸುದ್ದಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ನಾನು ಯಾವುದೇ ಸ್ಟಂಟ್ ಮಾಡಿಲ್ಲ ಎಂದು ತಿವಾರಿ ಸ್ಪಷ್ಟಪಡಿಸಿದ್ದಾರೆ.

58

ಮಾಧ್ಯಮಗಳಿಂದಲೇ ಈ ಸುಳ್ಳು ಸುದ್ದಿಯಿಂದ ಕುಟುಂಬಸ್ಥರು, ಆಪ್ತರು ಕರೆ ಮಾಡಿದ್ದಾರೆ. ನಾನು ಹಿಂದಿ ಸಿನಿಮಾದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನನಗೆ ಈ ರೀತಿಯ ಪ್ರಚಾರದ ಅವಶ್ಯಕತೆ ಇಲ್ಲ. ಸುಳ್ಳು ಸುದ್ದಿಯನ್ನು ಹರಡಬೇಡಿ ಎಂದು ನಟಿ ಮನವಿ ಮಾಡಿದ್ದಾರೆ.

68

ನಾನು ಸುರಕ್ಷಿತವಾಗಿದ್ದೇನೆ. ನನ್ನನ್ನು ಬೋಜ್‌ಪುರಿ ನಟಿಯೊಂದು ಹೋಲಿಕೆ ಮಾಡಬೇಡಿ. ಮಾನಸಿಕವಾಗಿ ನನಗೆ ಹಾಗೂ ಆಪ್ತರಿಗೆ ತೊಂದರೆ ಕೊಡಬೇಡಿ ಎಂದು ಅಂಚಲ್ ತಿವಾರಿ ಮನವಿ ಮಾಡಿದ್ದಾರೆ.

78

ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಂಚಲ್ ತಿವಾರಿ, ಸುಳ್ಳು ಸುದ್ದಿ ಹರಡಿ ಮತ್ತೊಬ್ಬರನ್ನು ಘಾಸಿಗೊಳಿಸಬೇಡಿ ಎಂದು ಸೂಚಿಸಿದ್ದಾರೆ.
 

88

ಅಂಚಲ್ ತಿವಾರಿ ಪಂಚಾಯತ್ 2 ಸೀರಿಸ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರಿ ಜನಪ್ರಿಯರಾಗಿದ್ದಾರೆ. ಪ್ರಧಾನ್‌ಜಿ ಪುತ್ರಿಯಾಗಿ ನಟಿಸಿರುವ ಅಂಚಲಿ ತಿವಾರಿ ಎಲ್ಲರ ಮನೆಮಾತಾಗಿದ್ದಾರೆ.

Read more Photos on
click me!

Recommended Stories