ಸೈಫ್‌ ಆಲಿ ಖಾನ್‌ಗೂ ಮೊದಲು ಅಮೃತಾ ಸಿಂಗ್‌ ಹೆಸರು ತಳಕು ಹಾಕಿಕೊಂಡಿತ್ತು ಈ ನಟರ ಜೊತೆ!

Published : Dec 16, 2022, 05:20 PM IST

ಬಾಲಿವುಡ್‌ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಜೊತೆ ಮುದವೆಯಾಗುವ ಮೊದಲು ಅಮೃತಾ ಸಿಂಗ್ (Amrita Singh) ಅವರ ಹೆಸರು ಅನೇಕ  ದೊಡ್ಡ ಸ್ಟಾರ್ಸ್ ಜೊತೆ ಕೇಳಿಬಂದಿದೆ. ನಟಿ ಅಮೃತಾ ಸಿಂಗ್‌ ಅವರ ಲವ್‌ ಲೈಫ್‌ ಸಖತ್‌ ಇಂಟರೆಸ್ಟಿಂಗ್‌ ಆಗಿದೆ. ಈ ಪಟ್ಟಿಯಲ್ಲಿ ಬಾಲಿವುಡ್‌ನ ನಟರಲ್ಲದೇ ಮಾಜಿ ಕ್ರಿಕೆಟರ್‌ ಹೆಸರು ಸಹ ಇದೆ. ಅವರ ಹಳೆಯ ರೊಮ್ಯಾಂಟಿಕ್ ಕಥೆಗಳು ಇನ್ನೂ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ.

PREV
111
ಸೈಫ್‌ ಆಲಿ ಖಾನ್‌ಗೂ ಮೊದಲು  ಅಮೃತಾ ಸಿಂಗ್‌  ಹೆಸರು ತಳಕು ಹಾಕಿಕೊಂಡಿತ್ತು ಈ ನಟರ ಜೊತೆ!

ಮರ್ದ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಎದುರು  ಅಮೃತಾ ಸಿಂಗ್ ನಾಯಕಿ ಪಾತ್ರದಲ್ಲಿದ್ದರು. ವಾಸ್ತವವಾಗಿ ಚಿತ್ರದ ಹಾಡಿನಲ್ಲಿ ಕಿಸ್ ಸೀನ್ ಇತ್ತು, ಆದರೆ ಹಲವಾರು ಬಾರಿ ರೀಟೇಕ್ ಮಾಡಿದರೂ ಶಾಟ್ ಓಕೆ ಆಗಲಿಲ್ಲ. ಅಮಿತಾಬ್ ಬಚ್ಚನ್ ಬಹಳ ಎತ್ತರವಾಗಿದ್ದ ಕಾರಣದಿಂದ ಆ ದೃಶ್ಯವನ್ನು ಸರಿಯಾಗಿ ಮಾಡಲಾಗುತ್ತಿಲ್ಲ ಎಂದು ಅಮೃತಾ ಹೇಳಿದ್ದಾರೆ. ಆಗ ಅಮಿತಾಭ್ ಬಚ್ಚನ್ ಅವರು ಅಮೃತಾ ಸಿಂಗ್ ಅವರ ಕಿವಿಯಲ್ಲಿ ಏನೋ ಹೇಳಿದರು, ನಂತರ ಮುಂದಿನ ಶಾಟ್ ಓಕೆ ಆಗಿತ್ತು.

211

ಅಮಿತಾಭ್ ತನ್ನ ಬಾಯ್ ಫ್ರೆಂಡ್ ರವಿಶಾಸ್ತ್ರಿ ಬಗ್ಗೆ ಅಮೃತಾಗೆ ಕಾಮೆಂಟ್ ಮಾಡಿದ್ದಾರೆ ಎಂದು ನಂತರ ತಿಳಿದುಬಂದಿದೆ. ಅದು ಅವರನ್ನು ಕೆಣಕಿತು ಮತ್ತು ನಂತರ ಶಾಟ್ ಓಕೆಯಾಯಿತು.

311

ಅಮೃತಾ ಸಿಂಗ್ ಮತ್ತು ಕ್ರಿಕೆಟ್ ತಾರೆ ರವಿಶಾಸ್ತ್ರಿ ಅವರ ಲವ್‌ ಆಫೇರ್‌ ವಿಷಯ ಪ್ರತಿ ಭಾರತೀಯರ ನಾಲಿಗೆಯಲ್ಲೂ ಚರ್ಚಿಯಾಗಿತ್ತು. ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡರು ಮತ್ತು ರವಿಶಾಸ್ತ್ರಿ ಅವರನ್ನು ಹುರಿದುಂಬಿಸಲು ಅಮೃತಾ ಸಿಂಗ್ ಆಗಾಗ್ಗೆ ಪಂದ್ಯಗಳಿಗೆ ಹೋಗುತ್ತಿದ್ದರು.

411

ಆದರೆ ಇವರಿಬ್ಬರ ಪ್ರೇಮಕಥೆಗೆ ಮೊದಲ ಬ್ರೇಕ್ ಬಿದ್ದಿದ್ದು, ಅಮೃತಾ ಸಿಂಗ್ ಜೀವನಕ್ಕೆ ವಿನೋದ್ ಖನ್ನಾ ಕಾಲಿಟ್ಟಾಗ. ಬಂಟ್ವಾರ ಚಿತ್ರದ ಸೆಟ್‌ನಲ್ಲಿ ಮೊದಲು ಭೇಟಿಯಾದ ಈ ಇಬ್ಬರ ನಡುವೆ ಅಮೃತಾ ಪ್ರೀತಿ ಶುರುವಾಯಿತು. ಆದರೆ ವಿನೋದ್ ಖನ್ನಾ ಅವರೊಂದಿಗಿನ  ಈ ಸಂಬಂಧ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ರವಿಶಾಸ್ತ್ರಿ ಅಮೃತಾ ಸಿಂಗ್‌ಗೆ ಹೇಳಿದ್ದರು ಮತ್ತು ಹಾಗೆಯೇ ಆಯಿತು. 

511

ಬಂಟ್ವಾರ ಚಿತ್ರದ ಶೂಟಿಂಗ್ ಮುಗಿದ ನಂತರ ಅಮೃತಾ ಅವರಿಂದ ವಿನೋದ್ ಖನ್ನಾ ದೂರವಾಗಿದ್ದರು. ಆಗ ಅಮೃತಾ ಮತ್ತೆ ರವಿಶಾಸ್ತ್ರಿ ಬಳಿಗೆ ಒಡೆದ ಹೃದಯದ ಜೊತೆ ಮರಳಿದರು. ರವಿಶಾಸ್ತ್ರಿ ಜೊತೆ ನಿಶ್ಚಿತಾರ್ಥದ ಘೋಷಣೆಯ ಹೊರತಾಗಿಯೂ, ಈ ಸಂಬಂಧವು ಕಾರ್ಯರೂಪಕ್ಕೆ ಬರಲಿಲ್ಲ ಮತ್ತು ಅಂತಿಮವಾಗಿ ಇಬ್ಬರೂ ಬೇರೆಯಾದರು

611

ಸಮಯ ಕಳೆದುಹೋಯಿತು ಮತ್ತೆ ಅಮೃತಾ ಸಿಂಗ್ ಮತ್ತು ವಿನೋದ್ ಖನ್ನಾ ಎರಡನೇ ಚಿತ್ರದ ಸೆಟ್‌ನಲ್ಲಿ ಪರಸ್ಪರ ಭೇಟಿಯಾದರು. ಈ ಬಾರಿ ಇವರ ನಡುವಿನ ಸಂಬಧ ಮತ್ತೆ ಚಿಗುರಿತು ಹಾಗೂ ಇಬ್ಬರೂ ಬಹಿರಂಗವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ವಯಸ್ಸಿನಲ್ಲಿ ವಿನೋದ್ ಖನ್ನಾ ಅವರಿಗಿಂತ 12 ವರ್ಷ ಚಿಕ್ಕವರಾಗಿದ್ದರೂ ಅಮೃತಾ ಸಿಂಗ್ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು. ಸ್ವಲ್ಪ ಸಮಯದ ಡೇಟಿಂಗ್ ನಂತರ, ಇಬ್ಬರೂ ಮದುವೆಯ ಯೋಜನೆಯನ್ನೂ ಮಾಡಿದರು.

711

 ಆದರೆ ವಿನೋದ್ ಖನ್ನಾ ಅವರ ಮೊದಲ ಮದುವೆ ಈ ನಡುವೆ ಬಂತು. 1984ರಲ್ಲಿ ವಿನೋದ್ ಖನ್ನಾ ಮೊದಲ ಪತ್ನಿ ಗೀತಾಂಜಲಿಗೆ ವಿಚ್ಛೇದನ ನೀಡಿದ್ದರೂ, ಅಮೃತಾ ತಾಯಿ ಈ ಸಂಬಂಧಕ್ಕೆ ಒಪ್ಪಿರಲಿಲ್ಲ. ಮತ್ತೆ ಶುರುವಾದ ಈ ಲವ್ ಸ್ಟೋರಿ ಕೊನೆ ತಲುಪಲಿಲ್ಲ.

811

ರವಿಶಾಸ್ತ್ರಿ ಮತ್ತು ವಿನೋದ್ ಖನ್ನಾ ಅವರಲ್ಲದೆ, ಸನ್ನಿ ಡಿಯೋಲ್ ಮತ್ತು ಅನಿಲ್ ಕಪೂರ್ ಅವರೊಂದಿಗೂ ಅಮೃತಾ ಸಿಂಗ್ ಅವರ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಸನ್ನಿ ಡಿಯೋಲ್ ಜೊತೆಗಿನ ಅಮೃತಾ ಸಿಂಗ್ ಅವರ ಚೊಚ್ಚಲ ಚಿತ್ರ ಬೇತಾಬ್‌ನ ಅದ್ಭುತ ಯಶಸ್ಸು ಇವರನ್ನು ಜೋಡಿಯನ್ನಾಗಿ ಮಾಡಿತು. ಇಬ್ಬರೂ ದೀರ್ಘಕಾಲ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ ಆದರೆ ಇವರ ರಿಲೆಷನ್‌ಶಿಪ್‌ ಮುಂದಿನ ಹಂತ ತಲುಪಲಿಲ್ಲ. 

911

ಆಗ ಅಮೃತಾ ಸಿಂಗ್ ಸಾಹೇಬ್ ಮತ್ತು ಚಮೇಲಿಕಿ ಶಾದಿ ಚಿತ್ರದಲ್ಲಿ ತನ್ನ ನಾಯಕ ಅನಿಲ್ ಕಪೂರ್‌ಗೆ ಆಕರ್ಷಿತರಾದರು. ಅನಿಲ್ ಮತ್ತು ಅಮೃತಾ ಲವ್ ಸ್ಟೋರಿ ಕೂಡ ಮುಖ್ಯಾಂಶಗಳಲ್ಲಿತ್ತು, ಆದರೆ ಈ ಪ್ರೀತಿಯೂ ಮುಂದುವರಿಯಲು ಸಾಧ್ಯವಾಗಲಿಲ್ಲ.

1011

ವಾಸ್ತವವಾಗಿ ಅಮೃತಾ ಸಿಂಗ್ ಅವರ ತಾಯಿ ರುಖ್ಸಾನಾ ಸುಲ್ತಾನ್ ಮುಸ್ಲಿಂ. ಅಮೃತಾ ಸಿಂಗ್ ಹಿಂದೂ ಹುಡುಗನನ್ನು ಮದುವೆಯಾಗುವುದು ರುಖ್ಸಾನಾಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ವಿನೋದ್ ಖನ್ನಾ ಅವರ ನಂತರದ ಪ್ರೇಮಕಥೆಗಳ ವೈಫಲ್ಯದ ಹಿಂದೆ ಇದೇ ಕಾರಣವೆಂದು ಪರಿಗಣಿಸಲಾಗಿದೆ. 

1111

ನಂತರ, ಅಮೃತಾ ಸಿಂಗ್ ತನಗಿಂತ ಹಲವಾರು ವರ್ಷ ಚಿಕ್ಕವನಾದ ಸೈಫ್ ಅಲಿ ಖಾನ್‌ನೊಂದಿಗೆ ಪ್ರೀತಿಯಲ್ಲಿ ಬಿದ್ದರು. ತಾಯಿಯಿಂದಲೂ ಒಪ್ಪಿಗೆ ಪಡೆದರು. ಹೀಗಾಗಿ ಕೊನೆಗೂ ಅಮೃತಾ ಸಿಂಗ್ ಅವರ ಮದುವೆಯ ಕನಸು ನನಸಾಯಿತು. ನಂತರ ಸೈಫ್ ಜೊತೆಗೂ ವಿಚ್ಛೇದನ ಪಡೆದಿದ್ದು ಎಲ್ಲರಿಗೂ ತಿಳಿದೇ ಇದೆ.

Read more Photos on
click me!

Recommended Stories