Amrish Puri Death Anniversary: ಅಮರೀಶ್‌ ಪುರಿ ಅಮೀರ್ ಖಾನ್ ಬಳಿ ಕ್ಷಮೆ ಕೇಳಬೇಕಾಯ್ತು..!

First Published Jan 12, 2022, 3:13 PM IST

ಬಾಲಿವುಡ್‌ ಫೇಮಸ್‌ ನಟ ಅಮರೀಶ್ ಪುರಿ (Amrish Puri)ಅವರು  ಈಗ ನಮ್ಮೊಂದಿಗಿಲ್ಲ. 12 ಜನವರಿ 2005 ರಂದು ತಮ್ಮ 72 ನೇ ವಯಸ್ಸಿನಲ್ಲಿ ಬ್ರೈನ್‌ ಟ್ಯೂಮರ್‌ ಕಾರಣದಿಂದ ಅಮರೀಶ್ ಪುರಿ ನಿಧನರಾದರು. ಆದರೆ ಸಿನಿಮಾಗಳ  ಮೂಲಕ ಅವರು ಇನ್ನೂ ನಮ್ಮ ನಡುವೆ ಇದ್ದಾರೆ. ಬಾಲಿವುಡ್‌ನಿಂದ ಹಾಲಿವುಡ್‌ನಲ್ಲಿ ನಟಿಸಿರುವ ಅಮರೀಶ್ ಪುರಿ ತಮ್ಮ ಎತ್ತರದ ನಿಲುವು,  ಕಂಚಿನ ಕಂಠ, ಭಯಾನಕ ಗೆಟಪ್ ಮತ್ತು ತಮ್ಮ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಸಿನಿಮಾದ ಫೇಮಸ್‌ ಡೈಲಾಗ್ ಮೊಗಾಂಬೋ ಖುಷ್ ಹುವಾ ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಇಂದು ಅಮರೀಶ್ ಪುರಿ ಅವರ ಪುಣ್ಯತಿಥಿ. ಈ ಸಂದರ್ಭದಲ್ಲಿ  ಅವರ ಜೀವನಕ್ಕೆ ಸಂಬಂಧಿಸಿದ ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ. 

ಜೂನ್ 12,1932 ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಜನಿಸಿದ ಅಮರೀಶ್ ಪುರಿ, ವಿಲನ್‌ ಪಾತ್ರಗಳಿಂದ ಮಾತ್ರವಲ್ಲದೇ ಸಕಾರಾತ್ಮಕ ಪಾತ್ರದಲ್ಲೂ ತಮ್ಮದೇ ಆದ ಅಭಿಮಾನಿಯನ್ನು ಗಳಿಸಿದ್ದರು. 'ಮಿಸ್ಟರ್ ಇಂಡಿಯಾ'ದ 'ಮೊಗಾಂಬೊ'ದಿಂದ 'ಡಿಡಿಎಲ್‌ಜೆ'ಯ 'ಬೌಜಿ'ವರೆಗಿನ ಪಾತ್ರಗಳಲ್ಲಿ ಅಮರೀಶ್ ಪುರಿ ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.

ಅಮರೀಶ್ ಪುರಿ ಅವರು ಸಿನಿಮಾಗಳಲ್ಲಿ ತುಂಬಾ ಕೆಟ್ಟ ಹಾಗೂ ಕಠಿಣ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರು ತಮ್ಮ ನೀಜ ಜೀವನದಲ್ಲಿ ತುಂಬಾ ಸಾಮಾನ್ಯ ಮತ್ತು ಸರಳ ಮನುಷ್ಯರಾಗಿದ್ದರು.

ಶಿಸ್ತುಬದ್ಧವಾಗಿರಲು ಇಷ್ಟಪಡುತ್ತಿದ್ದ ಅವರು ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಮಾಡಲು ಬಯಸುತ್ತಿದ್ದರು. ಅಮರೀಶ್ ಪುರಿ ಅವರು 30 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ ಮತ್ತು  400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಮರೀಶ್ ಪುರಿ ಅವರು 'ನಸೀಬ್', 'ವಿಧಾತ', 'ಹೀರೋ', 'ಅಂಧ ಕಾನೂನ್', 'ಅರ್ಧ ಸತ್ಯ', 'ಹಮ್ ಪಾಂಚ್', 'ಮಿಸ್ಟರ್ ಇಂಡಿಯಾ' ಮತ್ತು 'ಗದರ್' ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಅದನ್ನು ನೋಡಿದರೆ ಭಯ ಹುಟ್ಟುತ್ತದೆ. 'ನಾಗಿನ್' ಸಿನಿಮಾದಲ್ಲಿನ  ಅವರು ಮಾಂತ್ರಿಕನ  ಪಾತ್ರ ಇಂದಿಗೂ ಮರೆಯಲಾಗದು

ಅಮರೀಶ್ ಪುರಿ ಅವರ ಕೀರ್ತಿ ಹಾಲಿವುಡ್‌ವರೆಗೂ ತಲುಪಿತು. ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರು ಅಮರಿಷ್ ಪುರಿ ಅವರನ್ನು 'ಇಂಡಿಯಾನಾ ಜೋನ್ಸ್' ಆಡಿಷನ್‌ಗೆ ಅಮೆರಿಕಕ್ಕೆ ಕರೆಸಿದಾಗ ಅವರು ನಿರಾಕರಿಸಿದರು ಎಂದು ಹೇಳಲಾಗುತ್ತದೆ.

ಇಷ್ಟೇ ಅಲ್ಲ ಆಡಿಷನ್ ಮಾಡಲು ಬಯಸಿದರೆ, ನೀವೇ ಭಾರತಕ್ಕೆ ಬನ್ನಿ ಎಂದು ಸ್ಟೀವನ್‌ಗೆ ಹೇಳಿದರು. ಈ ಚಿತ್ರದಲ್ಲಿ ಅಮರೀಶ್ ಪುರಿ ‘ಮೊಲಾರಂ’ ಪಾತ್ರದಲ್ಲಿ ನಟಿಸಿ ಇಡೀ ಜಗತ್ತೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. 'ಇಂಡಿಯಾನಾ ಜೋನ್ಸ್' ನಲ್ಲಿ ಅವರ ಪಾತ್ರವು ನರ ಬಲಿ ನೀಡುವ ಮಾಂತ್ರಿಕನಾಗಿದ್ದು, ಅವರ ಈ ಪಾತ್ರ ಭಾರೀ ಮೆಚ್ಚುಗೆ ಗಳಿಸಿತು

ಸಿನಿಮಾಗೆ ಬರುವ ಮುನ್ನ ಅವರು ನೌಕರರ ರಾಜ್ಯ ವಿಮಾ ನಿಗಮದಲ್ಲಿ ಕೆಲಸ ಮಾಡುತ್ತಿದ್ದರು. 40 ನೇ ವಯಸ್ಸಿನಲ್ಲಿ, ನಿರ್ದೇಶಕ ಸುಖದೇವ್ ಅವರು ನಾಟಕದ ಸಮಯದಲ್ಲಿ ಅವರನ್ನು ನೋಡಿದರು ಮತ್ತು 'ರೇಷ್ಮಾ ಔರ್ ಶೇರಾ' ಚಿತ್ರಕ್ಕೆ ಸಹಿ ಹಾಕಿದರು.

21 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಅಮರೀಶ್ ಪುರಿ ಚಿತ್ರರಂಗಕ್ಕೆ ಕಾಲಿಟ್ಟರು. ಅಮರೀಶ್ ಪುರಿ ಸಿನಿಮಾದಲ್ಲಿನ ನಾಯಕನಿಗಿಂತ ಹೆಚ್ಚು ಸಂಭಾವನೆ ವಿಧಿಸುತ್ತಿದ್ದರು. ವಿಲನ್ ಆಗಿ ಕೆಲಸ ಮಾಡಿದ್ದ ಅಮರೀಶ್ ಆ ಕಾಲದಲ್ಲೇ ಸುಮಾರು 1 ಕೋಟಿ ರೂಪಾಯಿ ಶುಲ್ಕ ಪಡೆಯುತ್ತಿದ್ದರು.

ಒಮ್ಮೆ ಅಮರೀಶ್ ಪುರಿ ಆಮೀರ್ ಖಾನ್ ಮೇಲೆ ಕೆಟ್ಟದಾಗಿ ಕೋಪಗೊಂಡಿದ್ದರು. ಆಮೀರ್ ತಪ್ಪು ಮಾಡದಿದ್ದರೂ ಮೌನವಾಗಿ ಅವರ ಮಾತುಗಳನ್ನು ಕೇಳುತ್ತಲೇ ಇದ್ದರು. ವಾಸ್ತವವಾಗಿ, ಆಮೀರ್ ಖಾನ್ 'ಜಬರ್ದಸ್ತ್' ಚಿತ್ರದ ಸಮಯದಲ್ಲಿ ತಮ್ಮ ಚಿಕ್ಕಪ್ಪ ಖ್ಯಾತ ನಿರ್ದೇಶಕ ನಾಸಿರ್ ಹುಸೇನ್ ಅವರಿಗೆ ಸಹಾಯ ಮಾಡುತ್ತಿದ್ದರು.

ಈ ಚಿತ್ರದಲ್ಲಿ ಅಮರೀಶ್ ಪುರಿ ಸಹ ಇದ್ದರು. ನಾಸಿರ್ ಹುಸೇನ್ ಜೊತೆ ಅಮೀರ್ ಸಂಬಂಧದ ಬಗ್ಗೆ ಎಂಬುದನ್ನು ಅಮ್ರಿಶ್ ಪುರಿಗೆ ತಿಳಿದಿರಲಿಲ್ಲ. ಅವರಿಗೆ ಆಮೀರ್ ಖಾನ್ ಒಬ್ಬ ಹೊಸ ಸಹಾಯಕ ನಿರ್ದೇಶಕರಾಗಿದ್ದರು ಅಷ್ಟೇ. ಚಿತ್ರೀಕರಣದ ವೇಳೆ ಆಮೀರ್ ಖಾನ್ ಅವರು ಅಮ್ರಿಶ್ ಪುರಿ  ಒಂದು ಶಾಟ್‌ ಅನ್ನು  ತಡೆದರು. ಆದರೆ  ಅಮರೀಶ್ ಪುರಿ ಅವರು ನಿರ್ಲಕ್ಷಿಸಿದರು.

ಇದಾದ ನಂತರ ಹಿಂದಿನ ಶಾಟ್‌ನಲ್ಲಿ ನಿಮ್ಮ ಕೈ ಎಲ್ಲೋ ಇತ್ತು, ಈ ಶಾಟ್‌ನಲ್ಲಿ ಇನ್ನೂ ಎಲ್ಲೋ ಇದೆ ಎಂದು ಅಮರೀಷ್ ಪುರಿ ಅವರಿಗೆ ಆಮೀರ್ ಎರಡು-ಮೂರು ಬಾರಿ ಹೇಳಿದರು. ಇದನ್ನು ಆಮೀರ್ ಹಲವು ಬಾರಿ ಹೇಳಿದಾಗ ಪುರಿ ಸಾಹೇಬ್ ತುಂಬಾ ಕೋಪಗೊಂಡರು ಎಂದು ಹೇಳಲಾಗುತ್ತದೆ. ಅವರು ತಮ್ಮ ಜೋರು ಧ್ವನಿಯಲ್ಲಿ ಸೆಟ್‌ಗಳಲ್ಲಿ ಎಲ್ಲರ ಮುಂದೆ ಆಮೀರ್‌ರನ್ನು ಜೋರಾಗಿ ನಿಂದಿಸಲು ಪ್ರಾರಂಭಿಸಿದರು ಮತ್ತು ಈ ಸಮಯದಲ್ಲಿ ಇಡೀ ಯೂನಿಟ್‌ ಶಾಕ್‌ ಆಗಿತ್ತು.

ಅದರ ನಂತರ ನಾಸಿರ್ ಹುಸೇನ್ ಅಮರೀಶ್ ಪುರಿ ಅವರಿಗೆ ಇದು ತಪ್ಪು. ಶಾಟ್‌ನಲ್ಲಿ ಕೈ ನಿಜವಾಗಿಯೂ ಅಲ್ಲಿತ್ತು. ಆಮೀರ್ ತನ್ನ ಕೆಲಸವನ್ನು ಮಾಡುತ್ತಿದ್ದ ಎಂದು ಹೇಳಿದರು. ನಂತರ, ಅಮರೀಶ್ ಪುರಿ ಅವರು ತಮ್ಮ ತಪ್ಪನ್ನು ಅರಿತುಕೊಂಡರು ಮತ್ತು  ಅವರ ವರ್ತನೆಗೆ ಕ್ಷಮೆಯಾಚಿಸಿದರು. 

click me!